Rashmika Mandanna: ಗರ್ಲ್ ಫ್ರೆಂಡ್ ಪರಿಚಯಿಸಿದ ನಟ ವಿಜಯ್ ದೇವರಕೊಂಡ
ಕನ್ನಡ ಚಿತ್ರರಂಗದಿಂದ ನಟನೆ ಆರಂಭಿಸಿ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ ನಟ-ನಟಿಯರು ಅನೇಕರಿದ್ದಾರೆ. ಈ ಪೈಕಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಸ್ಟಾರ್ ಎಂದರೆ ಕರ್ನಾಟಕದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ನ್ಯಾಶನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ.
ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಕಮಾಲ್ ಮಾಡುತ್ತಿರುವ ರಶ್ಮಿಕಾ ಮಂದಣ್ಣ ನಟನೆಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದ್ದು, ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದಾರೆ. ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳಲ್ಲೇ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಸದ್ಯ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.

'ಪುಷ್ಪ 2' ಚಿತ್ರದ ಮಾಸ್ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ, ಇದೀಗ ಮತ್ತೆ ಎಮೋಷನಲ್ ಲವ್ ಸ್ಟೋರಿ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಹೌದು ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್ ಫ್ರೆಂಡ್ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಇದೊಂದು ಪಕ್ಕಾ ಕಾಲೇಜು ಲವ್ ಸ್ಟೋರಿ ಚಿತ್ರ ಎನ್ನುವುದು ಟೀಸರ್‌ನಿಂದಲೇ ತಿಳಿದು ಬಂದಿದ್ದು, ರಶ್ಮಿಕಾ ಎಮೋಷನಲ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇನ್ನೂ ವಿಶೇಷ ಎನ್ನುವಂತೆ ದಿ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಅವರ ಆಪ್ತ ಸ್ನೇಹಿತ ನಟ ವಿಜಯ್ ದೇವರಕೊಂಡ ಪರಿಚಯಿಸಿಕೊಟ್ಟಿದ್ದಾರೆ. ಟೀಸರ್‌ನಲ್ಲಿ ಬರುವ ರಶ್ಮಿಕಾ ಮಂದಣ್ಣ ಪಾತ್ರವನ್ನು ವಿಜಯ್ ದೇವರಕೊಂಡ ಪರಿಚಯಿಸಿದ್ದು, ಸದ್ಯ ಟೀಸರ್ ಸಖತ್ ವೈರಲ್ ಆಗುತ್ತಿದೆ.

ಇಷ್ಟಲ್ಲದೇ ದಿ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಇನ್ನೂ ವಿಶೇಷವಿದ್ದು, ಕನ್ನಡ ಚಿತ್ರರಂಗದ ನಟ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ಜೋಡಿಯಾಗಿದ್ದಾರೆ. ಇನ್ನು ದಿ ಗರ್ಲ್ ಫ್ರೆಂಡ್ ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶನ ಮಾಡುತ್ತಿದ್ದು, ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ದಿ ಗರ್ಲ್ ಫ್ರೆಂಡ್ ಬಿಡುಗಡೆ ದಿನಾಂಕ ಹಾಗೂ ಇತರ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಬಹಿರಂಗ ಪಡಿಸಲಿದೆ. ಅದೇನೇ ಇರಲಿ ರಶ್ಮಿಕಾ ಮಂದಣ್ಣರನ್ನು ಮತ್ತೆ ಎಮೋಷನಲ್ ಲುಕ್‌ನಲ್ಲಿ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.












Click it and Unblock the Notifications