Tharun Sudhir: ಕಾಮಿಡಿ ಕಿಲಾಡಿ ಶೋ ವೇದಿಕೆಯಲ್ಲೇ ಹಾಸ್ಯ ಕಲಾವಿದನಿಗೆ ತರುಣ್ ಸುಧೀರ್ ಬಿಗ್ ಆಫರ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿ ನಟನೆ ಮಾಡಿರುವ ಉತ್ತರ ಕರ್ನಾಟಕ ಮೂಲದ ಹಾಸ್ಯ ಕಲಾವಿದ ಜವಾರಿ ಹರೀಶ್ ಅವರಿಗೆ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ಬಿಗ್ ಆಫರ್‌ವೊಂದನ್ನು ನೀಡಿದ್ದಾರೆ. ಹಾಗಾದರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈಗಾಗಲೇ ತರುಣ್ ಸುಧೀರ್ ಹಾಗೂ ಸೋನಾಲ್ ಮದುವೆ ವಿಚಾರ ಸದ್ಯ ಇದೀಗ ಮುನ್ನೆಲೆಯಲ್ಲಿದೆ. ಇನ್ನಯ ತರುಣ್ ಸುಧೀರ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಹಾನಟಿ ಶೋನಲ್ಲಿ ತೀರ್ಪುಗಾರರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅಲ್ಲದೆ ಮಹಾನಟಿ ಶೋ ವೇದಿಕೆಯಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದ ಕನ್ನಡ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಮುಂದೆ ಪ್ರದರ್ಶನ ಮಾಡಿದ ಹಲವು ಕಂಟೆಸ್ಟೆಂಟ್‌ಗಳಿಗೆ ಶುಭವಾಗಲಿ ಎಂದು ಹಾರೈಸಿ 500 ರೂಪಾಯಿ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಗೆಯೇ ಇದರ ಜೊತೆಗೆ ಜೀ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ಗೆ ಆಗಮಿಸಿದ್ದ ತರುಣ್ ಸುಧೀರ್ ಅವರು ಹಾಸ್ಯ ಕಲಾವಿದ ಹರೀಶ್ ಅವರ ನಟನೆಯನ್ನು ನೋಡಿ ತಮ್ಮ ಸಿನಿಮಾದಲ್ಲಿ ನಟನೆ ಮಾಡಲು ಒಂದು ಆಫ್‌ರ್ ನೀಡಿದ್ದು, ಇದೇ ವೇದಿಕೆಯಲ್ಲಿಯೇ ಸಿನಿಮಾದಲ್ಲಿ ನಟಿಸಲು ನಿಮಗೆ ಅಡ್ವಾನ್ಸ್ ಹಣವನ್ನೂ ನೀಡುತ್ತಿದ್ದೇನೆ ಎಂದು 500 ರೂಪಾಯಿ ಹಣವನ್ನು ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಬಳಿಕ ಮಾತನಾಡಿದ ತರುಣ್ ಸುದೀರ್, ಜವಾರಿ ಹರೀಶ್ ಅವರ ಮುಖ ಲಕ್ಷಣಗಳು ನಮ್ಮ ತಂದೆ ಸುಧೀರ್ ಅವರ ಹೋಲಿಕೆಗಳಂತೆ ಕಾಣಿಸುತ್ತದೆ. ಅವರ ದೇಹದ ಹಾವ ಭಾವಗಳು, ನಿಲುವುಭಂಗಿ ಹಾಗೂ ವ್ಯಕ್ತಿತ್ವ ನಮ್ಮ ತಂದೆಗೆ ಸಾಕಷ್ಟು ಸಾಮ್ಯತೆಗೆ ಒಳಗಾಗುತ್ತವೆ. ನೀನೊಬ್ಬ ನಟ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ ಎಂದರು
ಸಿನಿಮಾ ಎಲ್ಲ ಮುಗಿಸಿ ರೈಟಿಂಗ್ ಅವಧಿಯನ್ನು ನಾನು ಮಹಾನಟಿಗೆ ಬಂದಾಗ ನಿಮ್ಮನ್ನು ನಾನು ನೋಡಿದ್ದೇನೆ. ಈಗಲೂ ನಾನು ಸಿನಿಮಾ ಸ್ಕ್ರಿಪ್ಟ್ ರೈಟಿಂಗ್ ಮಾಡುತ್ತಿದ್ದೇನೆ. ನಾನು ಯಾವಾಗ ಬರವಣಿಗೆ ಮುಗಿಸಿ ಚಿತ್ರೀಕರಣ ಆರಂಭಿಸುತ್ತೇನೋ, ಆಗ ನಿಮ್ಮನು ಕರಸಿಕೊಂಡು ನನ್ನ ಸಿನಿಮಾದಲ್ಲಿ ನಟನೆ ಮಾಡಿಸುತ್ತೇನೆ ಎಂದು ಭರವಸೆ ಕೊಟ್ಟರು.
ಮತ್ತೊಂದು ಸ್ಕಿಟ್ ಮಾಡಿದ ಬಳಿಕ ಬಸು ಅವರಿಗೆ ಸ್ವತಃ ನಿರ್ದೇಶಕ ತರುಣ್ ಸುಧೀರ್ ಅವರು ಕ್ಷಮೆ ಕೇಳಿದ್ದಾರೆ. ನಾನು ಕಾಟೇರ ಸಿನಿಮಾ ಮಾಡುವಾಗ ಹಳ್ಳಿಯಲ್ಲಿ ಶೂಟಿಂಗ್ ಮಾಡುವಾಗ ಜೂನಿಯರ್ ಆರ್ಟಿಸ್ಟ್ ಕರೆತರದೇ 150 ಜನರೂ ಕಲಾವಿದರನ್ನು ಕರೆದುಕೊಂಡು ಬನ್ನಿ ಎಂದು ಕೇಳಿದ್ದೆ. ಸುಮಾರು 20ರಿಂದ 25 ಜನರು ಥಿಯೇಟರ್ ಆರ್ಟಿಸ್ಟ್‌ಗಳನ್ನು ಕರೆತರಲು ಹೇಳಿದ್ದೆ. ಆದರೆ, ಅದರಲ್ಲಿ ಕಾಮಿಡಿ ಕಿಲಾಡಿಗಳು ಶೋನ ಬಸು ಅವರು ಕೂಡ ಇದ್ದರು ಎಂದರು.
ಆಗ ಅವರನ್ನು ನೋಡಿ, ನಾನು ಇವರಿಗೆ ಕಾಟೇರ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ಕೊಟ್ಟು ಅವರಿಗೆ ಅವಮಾನ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದ್ದರಿಂದ ಅವರ ಮನವೊಲಿಸಿ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡದಂತೆ ಮನವಿ ಮಾಡಲಾಯಿತು. ಇದರಿಂದ ಬಸು ಅವರಿಗೆ ಕ್ಷಮೆ ಕೇಳುತ್ತೇನೆ. ಅಲ್ಲದೆ, ನನ್ನ ಮುಂದಿನ ಸಿನಿಮಾಗಳನ್ನು ಬಸು ಅವರ ನಟನೆಗೆ ಒಪ್ಪುವಂತಹ ಪಾತ್ರಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.












Click it and Unblock the Notifications