ಯಶ್ ಜೊತೆ ಮತ್ತೆ ನಟಿಸಲು ಒಪ್ಪದ ಶ್ರೀನಿಧಿ ಶೆಟ್ಟಿ, ಕಾರಣ ಶಾಕಿಂಗ್
ಕೆಜಿಎಫ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ದ ಶ್ರೀನಿಧಿ ಶೆಟ್ಟಿ ಅವರು ಇದೀಗ ಟಾಲಿವುಡ್ ಹಾಗೂ ತಮಿಳು ಸಿನಿಮಾಗಳಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜೋಡಿಯಾಗಿ ಶ್ರೀನಿಧಿ ಮೋಡಿ ಮಾಡಿದ್ದರು. ಆದರೆ ಕೆಜಿಎಫ್-2 ಸಿನಿಮಾದ ಕಥೆಯಂತೆ ಶ್ರೀನಿಧಿ ಸಾವನ್ನಪ್ಪುತ್ತಾರೆ. ಅಲ್ಲಿಗೆ ಈ ಜೋಡಿ ಕಥೆ ಮುಗೀತು ಎಂಬ ಬೇಸರದಲ್ಲಿದ್ದಾರೆ ಅಭಿಮಾನಿಗಳು. ಈ ಜೋಡಿಯನ್ನು ಮತ್ತೊಮ್ಮೆ ತೆರೆ ಮೇಲೆ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಸಿಹಿಕಹಿ ಸುದ್ದಿಯೂ ಹೊರಬಿದ್ದಿದೆ. ಯಶ್ ಅವರ ಮತ್ತೊಂದು ಸಿನಿಮಾದಲ್ಲೂ ಶ್ರೀನಿಧಿ ಶೆಟ್ಟಿ ಆಯ್ಕೆಯಾಗಿದ್ದ ವಿಚಾರ ಇದೀಗ ರಿವೀಲ್ ಆಗಿದೆ.
ಹೌದು ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಸಿನಿಮಾ ಬಳಿಕ ಟಾಕ್ಸಿಕ್ ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕೂಡ ನಟಿಯರ ದಂಡೇ ಇದೆ. ಆದರೆ ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿಗೆ ಆಫರ್ ಬಂದಿರಲಿಲ್ಲ. ಇನ್ನು ಮತ್ತೊಂದೆಡೆ ಯಶ್ ನಟನೆಯ ಪೌರಾಣಿಕ ಸಿನಿಮಾ ರಾಮಾಯಣ ಕೂಡ ಸೆಟ್ಟೇರಿದೆ. ಈ ಸಿನಿಮಾದ ತಾರಾಗಣ ಕೂಡ ರಿವೀಲ್ ಆಗಿದ್ದು, ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿದ್ದರೆ, ರಾಮನ ಪಾತ್ರದಲ್ಲಿ ಬಾಲಿವುಡ್ ನಟ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸೀತಾಮಾತೆಯ ಪಾತ್ರಕ್ಕೆ ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಆಯ್ಕೆಯಾಗಿರುವುದು ಕೂಡ ಗೊತ್ತೇ ಇದೆ. ಆದರೆ ಈ ಪಾತ್ರಕ್ಕೆ ಮೊದಲು ಶ್ರೀನಿಧಿ ಶೆಟ್ಟಿ ಅವರನ್ನೇ ಅಪ್ರೋಚ್ ಮಾಡಲಾಗಿತ್ತು ಎಂಬ ವಿಚಾರ ಇದೀಗ ತಿಳಿದುಬಂದಿದೆ.

ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಶ್ರೀನಿಧಿ ಶೆಟ್ಟಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನಾನು "ರಾಮಾಯಣ" ಸಿನಿಮಾಗಾಗಿ ಆಡಿಷನ್‌ನಲ್ಲಿ ಭಾಗವಹಿಸಿದ್ದೆ. ಮೂರು ಸೀನ್‌ಗಳನ್ನು ಚೆನ್ನಾಗಿ ಸಿದ್ಧಪಡಿಸಿದ್ದೆ. ಅಲ್ಲದೆ ತಮ್ಮ ಸ್ಕ್ರೀನ್ ಟೆಸ್ಟ್‌ನಿಂದ ನಿರ್ಮಾಪಕರು ಇಂಪ್ರೆಸ್ ಆದರು. ನಟ ಯಶ್ ಕೂಡ ಈ ಸಿನಿಮಾದಲ್ಲಿದ್ದಾರೆ ಎಂದು ಗೊತ್ತಾಗಿದ್ದೇ ಆಗ ಎಂದು ಶ್ರೀನಿಧಿ ಹೇಳಿದ್ದಾರೆ.
ಕೆಜಿಎಫ್ ಚಾಪ್ಟರ್-2ರಲ್ಲಿ ಯಶ್ ಜೊತೆ ಶ್ರೀನಿಧಿ ಶೆಟ್ಟಿ ಅವರ ಬಲವಾದ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಈಗಾಗಲೇ ನೋಡಿದ್ದರಿಂದ, ರಾಮಾಯಣ ಚಿತ್ರವನ್ನು ಮುಂದುವರಿಸದಿರಲು ಶ್ರೀನಿಧಿ ಶೆಟ್ಟಿ ನಿರ್ಧರಿಸಿದರು. ಶ್ರೀನಿಧಿ ಸೀತೆಯಾದರೆ, ಯಶ್ ರಾವಣನಾಗಿ ಸರಿ ಬರುವುದಿಲ್ಲ ಎಂಬ ಕಾರಣದಿಂದಲೂ ಈ ಪಾತ್ರ ಬೇಡ ಎಂದು ನಿರಾಕರಿಸಿದರಂತೆ. ಯಶ್ ಜೋಡಿ ದೊಡ್ಡ ಹಿಟ್ ಆಗಿದ್ದರಿಂದ ರಾವಣನ ಪಾತ್ರವನ್ನು ನಿರ್ವಹಿಸುವಾಗ ಅವರ ಎದುರು ಸೀತೆಯ ಪಾತ್ರವನ್ನು ನಿರ್ವಹಿಸುವುದನ್ನು ಪ್ರೇಕ್ಷಕರು ಒಪ್ಪಿಕೊಳ್ಳುವುದು ಕಷ್ಟವಾಗಬಹುದು. ಇದು ವಿಚಿತ್ರವೆನಿಸಬಹುದು ಆದರೂ ಇದೇ ಸತ್ಯ ಎಂದು ಶ್ರೀನಿಧಿ ಹೇಳಿಕೊಂಡಿದ್ದಾರೆ.

ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿಯೇ ಬೆಸ್ಟ್!
ರಾಮಾಯಣ ಸಿನಿಮಾದಲ್ಲಿ ಅವಕಾಶ ಕಳೆದುಕೊಂಡಿದ್ದರಿಂದ ಯಾವುದೇ ಬೇಸರ ವ್ಯಕ್ತಪಡಿಸದ ಶ್ರೀನಿಧಿ ಶೆಟ್ಟಿ ಅವರು ಆ ಪಾತ್ರಕ್ಕೆ ಆಯ್ಕೆಯಾಗಿರುವ ಸಾಯಿ ಪಲ್ಲವಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿರುವ ಬಗ್ಗೆ ಶ್ರೀನಿಧಿ ಶೆಟ್ಟಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಆ ಪಾತ್ರಕ್ಕೆ ಸಾಯಿ ಪಲ್ಲವಿ ಅದ್ಭುತ ಆಯ್ಕೆ ಎಂದೂ ಶ್ರೀನಿಧಿ ಹೇಳಿದ್ದಾರೆ.












Click it and Unblock the Notifications