Prabhas: ನಟ ಪ್ರಭಾಸ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ!
ನಟ ಹಾಗೂ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟ ಪ್ರಭಾಸ್ ಅವರಿಗೆ ಫೌಜಿ ಸಿನಿಮಾದ ಚಿತ್ರೀಕರಣ ಮಾಡುವಾಗ ಗಾಯವಾಗಿದೆ. ಪ್ರಭಾಸ್ ಅವರು ನಟನಾಗಿ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾದ ಜಪಾನ್‌ನಲ್ಲಿ ಆಯೋಜಿಸಲಾಗಿತ್ತು. ಈಗಾಗಲೇ ಸ್ಕೆಡ್ಯೂಲ್ ಆಗಿರುವಂತೆ ಪ್ರಭಾಸ್ ಅವರು ಈ ಪ್ರೀಮಿಯರ್ ಶೋಗೆ ಬರಬೇಕಿತ್ತು. ಆದರೆ, ಸಿನಿಮಾ ಶೂಟಿಂಗ್ ಮಾಡುವಾಗ ಅವರಿಗೆ ಗಾಯವಾಗಿದ್ದು, ಅವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ ಅಂತ ವರದಿಯಾಗಿದೆ. ಈಚೆಗೆ ಪುಷ್ಪ - 2 ಸಿನಿಮಾದ ಪ್ರೀಮಿಯರ್ ಶೋನಲ್ಲಿ ದುರ್ಘಟನೆ ಸಂಭವಿಸಿತ್ತು.
ಇದೀಗ ನಡೆದಿರುವ ಘಟನೆಯು ಪ್ರಭಾಸ್ ಅಭಿಮಾನಿಗಳಲ್ಲಿ ಆಘಾತವನ್ನು ಉಂಟು ಮಾಡಿದೆ. ಪ್ರಭಾಸ್ ಅವರಿಗೆ ಗಾಯಗಳಾಗಿವೆ ಎಂದು ಪ್ರಾಥಮಿಕ ಮಾಹಿತಿ ಬಂದಿದೆ. ಯಾವ ಪ್ರಮಾಣದಲ್ಲಿ ಆಗಿದೆ ಹಾಗೂ ಏನಾಗಿದೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬೀಳಬೇಕಿದೆ. ಪ್ರಭಾಸ್ ಅವರ ಸಿನಿಮಾಗಳು ಇದೀಗ ದೇಶದ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಅವರ ಸಿನಿಮಾಗಳು ಸದ್ದು ಮಾಡುತ್ತಿವೆ. ಬಾಹುಬಲಿಯ ನಂತರ ಅವರ ಕ್ರೇಜ್ ಹೆಚ್ಚಾಗಿದೆ.

ಪ್ರಭಾಸ್ ಅವರು ಫೌಜಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಮಾಡುವಾಗ ಅವರ ಕಾಲುಗಳಿಗೆ ಗಾಯವಾಗಿದೆ ಎನ್ನಲಾಗಿದೆ. ಹೀಗಾಗಿ, ಜಪಾನ್‌ನಲ್ಲಿ ನಡೆಯಲಿರುವ ಹಾಗೂ ಬಹು ನಿರೀಕ್ಷಿತ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ವಿಷಯ ಜಪಾನ್ ಹಾಗೂ ವಿಶ್ವದಾದ್ಯಂತ ಇರುವ ಪ್ರಭಾಸ್ ಅವರ ಅಭಿಮಾನಿಗಳಲ್ಲಿ ಆತಂಕ ಹಾಗೂ ಬೇಸರವನ್ನು ಮೂಡಿಸಿದೆ.
ಬಹುತಾರಾಗಣವಿರುವ ಕಲ್ಕಿ ಸಿನಿಮಾ ಭಾರತದ ನಿರೀಕ್ಷೆಯಷ್ಟು ಹವಾ ಮಾಡದೆ ಇದ್ದರೂ, ಹಾಕಿದ ಬಂಡವಾಳ ಲಾಸ್ ಆಗಿರಲಿಲ್ಲ. ಈ ಸಿನಿಮಾದಲ್ಲಿ ಭಾರತ ಚಿತ್ರರಂಗದ ಹಲವು ನಟ ಹಾಗೂ ನಟಿಯರು ಮತ್ತು ಹಿರಿಯ ಸಿನಿಮಾ ರಂಗದ ನಟರು ಸಹ ಅಭಿನಯಿಸಿದ್ದರು. ಇದು ಭಾರತದಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದ ಪಾರ್ಟ್ 2 ಸಹ ಬರಲಿದೆ ಎಂದು ಹೇಳಲಾಗಿದ್ದು, ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಇನ್ನು ಜಪಾನ್‌ನಲ್ಲಿ ಕಲ್ಕಿ ಚಿತ್ರದ ಪ್ರೀಮಿಯರ್ ಶೋ ನಾಳೆ ಅಂದರೆ ಡಿಸೆಂಬರ್ 18ರಂದು ಆಯೋಜಿಸಲಾಗಿದ್ದು. ಪ್ರಭಾಸ್ ಅವರು ಬರಲಿದ್ದಾರೆ ಎಂದು ಸಾವಿರಾರು ಅಭಿಮಾನಿಗಳು ಆಸೆಯಿಂದ ಕಾಯುತ್ತಿದ್ದಾರೆ. ಆದರೆ, ಪ್ರಭಾಸ್ ಅವರ ಕಾಲುಗಳಿಗೆ ಗಾಯ ಆಗಿರುವುದು ಶಾಕ್ ತಂದಿದೆ.

ಅಲ್ಲು ಅರ್ಜುನ್ ಘಟನೆ ಆತಂಕ: ಇನ್ನು ತೆಲುಗು ಚಿತ್ರರಂಗದಲ್ಲಿ ನಡೆದಿರುವ ಘಟನೆ ಅಲ್ಲಿನ ಸಿನಿಮಾ ನಟ ಹಾಗೂ ನಟಿಯರಲ್ಲಿ, ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕರಲ್ಲೂ ಆತಂಕ ಮೂಡಿಸಿದೆ ಎನ್ನಲಾಗಿದೆ. ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಸಿನಿಮಾ ಪುಷ್ಪ -2 ಸಿನಿಮಾದ ಪ್ರೀಮಿಯರ್ ಶೋನಲ್ಲಿ ಭಾರೀ ಅವಘಡ ಸಂಭವಿಸಿತ್ತು. ಅಲ್ಲು ಅರ್ಜುನ್ ನಟನಾಗಿ ನಟಿಸಿರುವ ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋನಲ್ಲಿ ಕಾಲ್ತುಳಿತ ಸಂಭವಿಸಿತ್ತು. ಇದರಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು ಹಾಗೂ ಅವರ ಮಗನಿಗೂ ಗಾಯವಾಗಿತ್ತು. ಈ ಕೇಸ್‌ನಲ್ಲಿ ಅಲ್ಲು ಅರ್ಜುನ್ ಅವರ ಬಂಧನವೂ ಆಗಿತ್ತು.












Click it and Unblock the Notifications