Upendra: ಉಪೇಂದ್ರ ಕಲಿಯುಗದ ಆಧುನಿಕ ಬುದ್ಧ: ಬಿರುದು ಕೊಟ್ಟ ನಿರ್ದೇಶಕ
ಹಲವು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಯುಐ ಸಿನಿಮಾ ಕಳೆದ ಶುಕ್ರವಾರ ಅಂದರೆ ಡಿಸೆಂಬರ್ 20 ರಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಬಗ್ಗೆ ಅನೇಕರು ಪ್ರತಿಕ್ರಿಯಿಸುತ್ತಿದ್ದು, ಇದೀಗ ಉಪೇಂದ್ರ ಜೊತೆ ಕಬ್ಜ ಚಿತ್ರ ಮಾಡಿದ್ದ ನಿರ್ದೇಶಕ ಆರ್. ಚಂದ್ರು ಸಿನಿಮಾ ನೋಡಿ ಮನಸಾರೆ ಹೊಗಳಿದ್ದಾರೆ.
'ಈಗಷ್ಟೇ ಯುಐ ಸಿನಿಮಾ ನೋಡಿದೆ. ಸುಮಾರು ವರ್ಷಗಳ ನಂತರ ಉಪ್ಪಿ ಸರ್ ಅವರ ನಿರ್ದೇಶನ ಯುಐ ಸಿನಿಮಾಗೆ ನನ್ನ ಅಭಿನಂದನೆ. ಚಿಕ್ಕ ವಯಸ್ಸಿನಿಂದಲೂ, ನನ್ನ ಕಾಲೇಜು ದಿನಗಳಿಂದಲೂ ಉಪ್ಪಿ ಸರ್ ಅವರ ಸಿನಿಮಾ ಅಂದರೆ ಒಂದು ಖುಷಿ ಇತ್ತು. ಇವತ್ತು ಕೂಡ ಅದೇ ಖುಷಿಯಲ್ಲಿ ನಾನು ನನ್ನ ತಂಡದ ಜೊತೆ ಯುಐ ಸಿನಿಮಾ ನೋಡಿದೆ' ಎಂದರು.

'ನಿಜಕ್ಕೂ ಉಪ್ಪಿ ಸರ್ ನಿಮಗೆ ನೀವೇ ಸಾಟಿ. ಎರಡು ಸಾವಿರ ಐನೂರು ವರ್ಷಗಳ ಹಿಂದೆ ಒಬ್ಬ ಬುದ್ಧ ಹುಟ್ಟಿದ್ದರು. ಎರಡು ಸಾವಿರ ಐನೂರು ವರ್ಷಗಳು ಆದ ಮೇಲೆ ಇವತ್ತಿನ ಟ್ರೆಂಡ್‌ಗೆ ಇವತ್ತಿನ ಜಾಗತಿಕ ಮಟ್ಟದಲ್ಲಿ ಜಾತಿ, ಧರ್ಮ, ಇವೆಲ್ಲವನ್ನೂ ಕ್ರೋಡಿಕರಿಸಿ. ಇವತ್ತಿನಿ ರಾಜಕೀಯ ವ್ಯವಸ್ಥೆ ಮತ್ತು ಪ್ರತಿಯೊಬ್ಬರು ಎಲ್ಲೆಲ್ಲಿ ಕಳೆದು ಹೋಗಿದ್ದೇವೆ. ನಾವು ಯಾವುದನ್ನು ಪೋಕಸ್ ಮಾಡಬೇಕು. ಪೋಕಸ್ ಅಂದರೆ ಒಂದು ಒಳ್ಳೆ ಕ್ಲಾರಿಟಿ ಕೊಟ್ಟಿರಿ ಉಪ್ಪಿ ಸರ್. ನಾವು ಯಾವುದನ್ನು ಪೋಕಸ್ ಮಾಡುತ್ತಿದ್ದೇವೆ. ನಾವು ಯಾವುದನ್ನು ಪೋಕಸ್ ಮಾಡಬೇಕು ಎನ್ನುವುದನ್ನು ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ'.
'ನಿಮಗೆ ನೀವೇ ಸಾರಿ ಉಪ್ಪಿ ಸರ್. ಅದ್ಭುತವಾದ ಸಿನಿಮಾ. ನನ್ನ ಜೀವನದಲ್ಲಿ ಇದು ಗ್ರೇಟ್ ಸಿನಿಮಾ. ಪ್ರತಿಯೊಬ್ಬರು ಇಂತಹ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳಬಾರದು. ಒಂದೇ ರಾತ್ರಿಯಲ್ಲಿ ನೂರ ಐವತ್ತು ಪುಸ್ತಕ ಓದಿದಂತಾಯಿತು. ನೂರ ಐವತ್ತು ಪುಸ್ತಕ ಓದದರೆ ಏನು ವಿಷಯ ತಿಳಿಯುತ್ತದೆಯೋ ಈ ಒಂದು ಸಿನಿಮಾವನ್ನು ಎರಡು ಗಂಟೆ ನೋಡಿದರೆ ಅಷ್ಟು ವಿಷಯ ತಿಳಿಯುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ'. ಎಂದು ಹೇಳಿದರು.

'ಉಪ್ಪಿ ಸರ್ ಇಂತಹ ಸಿನಿಮಾ ನೀವೊಬ್ಬರೇ ಮಾಡಲು ಸಾಧ್ಯ. ಕಲಿಯುಗದ ಬುದ್ಧ ಎಂದು ನಿಮಗೆ ಬಿರುದು ಕೊಡಬೇಕು ಎಂದುಕೊಂಡಿದ್ದೇನೆ. ನೀವು ಆಧುನಿಕ ಬುದ್ಧ. ಯುಐ ಸಿನಿಮಾ ಕನ್ನಡಿಗರಿಗೆ ಮಾತ್ರವಲ್ಲ. ಪ್ರಪಂಚದಾದ್ಯಂತ ರಿಲೀಸ್ ಆಗಿದೆ. ಇಡಿ ಭಾರತೀಯರ ಕಡೆಯಿಂದ ಉಪ್ಪಿ ಸರ್ ನೀವು ನಿಜಕ್ಕೂ ಗ್ರೇಟ್' ಎಂದು ನಿರ್ಮಾಪಕ, ನಿರ್ದೇಶಕ ಆರ್. ಚಂದ್ರು ಯುಐ ಸಿನಿಮಾವನ್ನು ಮನಸಾರೆ ಹೊಗಳಿದ್ದಾರೆ.












Click it and Unblock the Notifications