ಕನ್ನಡ ಚಿತ್ರರಂಗದಲ್ಲಿ ಮತ್ತೆ ಮೀಟೂ ಬಿರುಗಾಳಿ; ಸ್ಯಾಂಡಲ್​ವುಡ್​​ನಲ್ಲೂ ಅಂತಹ ಕಮಿಟಿ ಬೇಕು ಎಂದ ನಟ ಚೇತನ್

ಬೆಂಗಳೂರು, ಸೆಪ್ಟೆಂಬರ್‌04: ಕೆಲವು ವರ್ಷಗಳ ಹಿಂದೆ ಬಾರೀ ಸುದ್ದಿ ಆಗಿದ್ದ ಮೀಟೂ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಬೇರೆ ಬೇರೆ ಭಾಷೆಯ ಚಿತ್ರರಂಗದ ಹಲವು ನಟಿಯರು ತಮಗೆ ಆಗಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದು, ಇದೀಗ ಕನ್ನಡ ಚಿತ್ರರಂಗದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಕೇರಳದ 'ಹೇಮಾ ಸಮಿತಿ ವರದಿ'​ ಪ್ರಕಟವಾದ ಬಳಿಕ ತೆಲುಗು, ಕನ್ನಡ ಮುಂತಾದ ಚಿತ್ರರಂಗದಲ್ಲೂ ತನಿಖೆಗೆ ಒತ್ತಾಯ ಕೇಳಿಬಂದಿದೆ. ಫೈರ್​ (ಫಿಲ್ಮ್​ ಇಂಡಸ್ಟ್ರೀ ಫಾರ್​ ರೈಟ್ಸ್​ ಆ್ಯಂಡ್​ ಇಕ್ವಾಲಿಡಿ) ಸಂಸ್ಥೆಯ ಮೂಲಕ 153 ಜನರು ಕನ್ನಡ ಚಿತ್ರರಂಗದಲ್ಲಿಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Sandalwood Actor Chetan Ahimsa Demand A Committee For Women

ಈ ಕುರಿತು ನಟ ಆದಿನಗಳು ಚೇತನ್ ಮಾತನಾಡಿ, ಸ್ಯಾಂಡಲ್‌ವುಡ್‌ನಲ್ಲಿ ಮಹಿಳೆಯರು ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ. ಇಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಇವುಗಳ ಅಧ್ಯಯಕ್ಕೆ ಒಂದು ಸಮಿತಿ ಬೇಕಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ಇಲ್ಲಿ ಬೇಕಿದೆ. ಈ ಸಮಿತಿ ಬೇಕು ಅನ್ನೋರ 153 ಜನರ ಸಹಿ ಮಾಡಿದ್ದಾರೆ.

ಮಲೆಯಾಳಂ ಇಂಡಸ್ಟ್ರಿಯಲ್ಲಿ ಜಸ್ಟಿಸ್ ಹೇಮಾ ಸಮಿತಿ ಸಲ್ಲಿಸಿದ ವರದಿ ಅಲ್ಲಿಯ ಕರಾಳ ಸತ್ಯವನ್ನ ಬಿಚ್ಚಿಟ್ಟಿದೆ. ಅದರ ಬೆನ್ನಲ್ಲಿಯೇ ಕನ್ನಡದಲ್ಲೂ ಈ ರೀತಿ ಸಮಿತಿ ಬೇಕು ಅಂತ ನಟಿ ಶೃತಿ ಹರಿಹರನ್ ಹೇಳಿದ್ದಾರೆ. ಈ ವಿಚಾರವನ್ನ ನಟ ಚೇತನ್‌ ಅವರು ಬೆಂಬಲಿಸಿದ್ದಾರೆ. ತಮ್ಮ ಫೈರ್ ಸಂಘಟನೆ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕನ್ನಡದಲ್ಲೂ ಇಂತಹ ಒಂದು ಸಮಿತಿ ಬೇಕು ಅಂತ ಒತ್ತಾಯಿಸಿದ್ದಾರೆ. ಕನ್ನಡದಲ್ಲಿ ಮೀಟೂ ಗಾಳಿ ಬೀಸಿದಾಗಲೂ ಚೇತನ್ ಹೋರಾಟ ಮಾಡಿದ್ದರು. ಇದೀಗ ಮತ್ತೆ ಹೋರಾಟವನ್ನ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.

ಕನ್ನಡದಲ್ಲೂ ಒಂದು ಸಮಿತಿ ಬೇಕಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿಯೇ ಈ ಸಮಿತಿ ರಚನೆ ಅಗಬೇಕಿದೆ. ಕನ್ನಡದಲ್ಲಿ ಮಹಿಳೆಯರು ಎದುರಿಸುತ್ತಿರೋ ಲೈಂಗಿಕ ಕಿರುಕುಳ ಮತ್ತು ಇತರ ಸಮಸ್ಯೆಗಳ ಅಧ್ಯಯನ ಮಾಡಬೇಕಿದೆ. ಹಾಗಾಗಿಯೇ ಒಂದು ಸಮಿತಿ ಇಲ್ಲೂ ಬೇಕಿದೆ ಎಂದು ನಟ ಆದಿನಗಳು ಚೇತನ್ ಹೇಳಿದ್ದಾರೆ.

ಆ ದಿನಗಳು ಚೇತನ್ ಈಗಾಗಲೇ ಫೈರ್ ಅಂತ ಸಂಘಟನೆ ಹುಟ್ಟುಹಾಕಿದ್ದಾರೆ. ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ ಅನ್ನೋ ಈ ಸಂಘಟನೆ ಮೂಲಕವೇ ಆದಿನಗಳು ಚೇತನ್ ಈಗ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕನ್ನಡದಲ್ಲೂ ಒಂದು ಸಮಿತಿ ಬೇಕಿದೆ. ಅದರ ಅಗತ್ಯ ತುಂಬಾನೆ ಇದೆ ಅನ್ನೋ ಅರ್ಥದಲ್ಲಿಯೇ ಚೇತನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+