ರಾಘಣ್ಣನ ಹುಟ್ಟುಹಬ್ಬಕ್ಕೆ ದುಬಾರಿ ಕಾರು ಗಿಫ್ಟ್ ಕೊಟ್ಟ ಯುವ-ವಿನಯ್, ಬೆಲೆ ಎಷ್ಟು?
ನಟ ರಾಜ್‌ಕುಮಾರ್ ಅವರ ಎರಡನೇ ಮಗ ಹಾಗೂ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪುತ್ರರಾದ ನಟ ವಿಜಯ್ ರಾಜ್‌ಕುಮಾರ್ ಹಾಗೂ ಯುವ ರಾಜ್‌ಕುಮಾರ್ ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ರಾಘಣ್ಣ ತಮ್ಮ 60ನೇ ಹುಟ್ಟುಹಬ್ಬವನ್ನು ಕುಟುಂಬದವರು ಹಾಗೂ ಅಭಿಮಾನಿಗಳ ಜೊತೆ ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ ಅವರ ಪುತ್ರರಾದ ವಿನಯ್-ಯುವ ಅಪ್ಪನಿಗೆ ದುಬಾರಿ ಸರ್‌ಪ್ರೈಸ್ ನೀಡಿದ್ದಾರೆ.
ರಾಜ್ ಕುಟುಂಬದ ಎರಡನೇ ತಲೆಮಾರಿನ ಪೈಕಿ ಸದ್ಯ ಶಿವಣ್ಣ ನಟನೆಯಲ್ಲಿ ಮುಂದುವರಿದಿದ್ದಾರೆ. ರಾಘಣ್ಣ ಹಲವು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನಷ್ಟೇ ನಿರ್ವಹಿಸಿದ್ದಾರೆ. ಇನ್ನು ಮೂರನೇ ತಲೆಮಾರಿನಲ್ಲಿ ಯುವ ಹಾಗೂ ವಿನಯ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಸರ್‌ಪ್ರೈಸ್ ಕೊಟ್ಟಿದ್ದಾರೆ. ಇದನ್ನು ಕಂಡು ರಾಘಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಲೆ ಎಷ್ಟು?
60ನೇ ವರ್ಷಕ್ಕೆ ಕಾಲಿಟ್ಟ ರಾಘಣ್ಣನಿಗೆ ಇಬ್ಬರೂ ಸಹೋದರರು ಸೇರಿ ದುಬಾರಿ ಇನ್ನೋವಾ ಹೈಬ್ರಿಡ್ ಕಾರನ್ನು ಉಡುಗೊರೆಯಾಗಿ ನೀಡಿ, ಅವರ ಸಂತೋಷವನ್ನು ಹಂಚಿಕೊಂಡರು. ಅಪ್ಪನ ವರ್ಷದ ವಿಶೇಷ ದಿನವು ಇನ್ನಷ್ಟು ಸ್ಮರಣೀಯವಾಗಲು ಮಕ್ಕಳಿಂದ ಬಂದ ಈ ಉಡುಗೊರೆ ಸಾಕ್ಷಿಯಾಯಿತು. ಟೊಯೋಟಾ ಇನ್ನೋವಾ ಹೈಕ್ರಾಸ್‌ನ ಸೆಗ್ಮೆಂಟ್‌ನಲ್ಲಿರುವ ಹೈಬ್ರಿಡ್ ರೂಪಾಂತರಗಳಿಗೆ ಆನ್-ರೋಡ್ ಬೆಲೆ ಹೈಬ್ರಿಡ್‌ಗೆ ಸುಮಾರು ₹32 ಲಕ್ಷದಿಂದ ಪ್ರಾರಂಭವಾಗಿ, ಟಾಪ್-ಎಂಡ್ ಮಾದರಿಗಳಿಗೆ ಸುಮಾರು ₹42 ಲಕ್ಷದವರೆಗೆ ಬೆಲೆ ಇದೆ. ಇರಬಹುದು. ಈ ದುಬಾರಿ ಕಾರನ್ನೇ ಯುವ ಹಾಗೂ ವಿನಯ್ ತಂದೆಗೆ ಉಡುಗೊರೆಯಾಗಿ ನೀಡಿದ್ದಾರೆ.
ರಾಘಣ್ಣ ಕೇವಲ ನಟ ಮಾತ್ರವಲ್ಲ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಚಿರಂಜೀವಿ ಸುಧಾಕರ್ ಸಿನಿಮಾ ಮೂಲಕ ನಟನಾಗಿ ಎಂಟ್ರಿ ಕೊಟ್ಟ ರಾಘಣ್ಣ ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಅನುಕೂಲಕ್ಕೊಬ್ಬ ಗಂಡ, ಗೆಲುವಿನ ಸಾರದಾರ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ನಂತರ ಉಪೇಂದ್ರ ನಿರ್ದೇಶಿಸಿದ್ದ ಸ್ವಸ್ತಿಕ್ ಸಿನಿಮಾ, ಪಕ್ಕದ್ಮನೆ ಹುಡುಗಿ ಚಿತ್ರದಲ್ಲಿ ನಟಿಸಿ ನಂತರ ಹದಿನೈದು ವರ್ಷಗಳ ಕಾಲ ನಟನೆಯಿಂದ ಬ್ರೇಕ್ ಪಡೆದರು. ನಂತರ ತಮ್ಮದೇ ಪೂರ್ಣಿಮಾ ಪ್ರೊಡಕ್ಷನ್ಸ್ ಅಡಿಯಲ್ಲಿ ಧಾರಾವಾಹಿಗಳನ್ನು ಮತ್ತು ಶ್ರೀವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಿಸಿದ್ದರು.
ಸಿನಿ ಕುಟುಂಬದಲ್ಲೇ ಹುಟ್ಟಿದ ರಾಘಣ್ಣ ಅವರಿಗೆ ವಿನಯ್ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್ ಪುತ್ರರಿದ್ದಾರೆ. ಸದ್ಯ ಇಬ್ಬರೂ ನಟರಾಗಿ ಮಿಂಚುತ್ತಿದ್ದಾರೆ. ರಾಘಣ್ಣ 2013ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಅವರನ್ನು ಸಿಂಗಾಪುರ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರು ಚೇತರಿಸಿಕೊಂಡು ಸಿನಿಮಾಗಳಿಂದ ದೂರ ಉಳಿದರು.












Click it and Unblock the Notifications