Puneeth Rajkumar : ಕಾಮಿಡಿ ಕಿಲಾಡಿಗಳು ಶೋನಲ್ಲಿ ಟೈಮ್ ಮಷಿನ್‌ನಿಂದ ಪುನೀತ್ ರಾಜ್‌ಕುಮಾರ್ ಎಂಟ್ರಿ: ಮುಂದೆ ಆಗಿದ್ದೇನು?
ಅಭಿಮಾನಿಗಳ ಆರಾಧ್ಯ ದೈವ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಇಲ್ಲವಾಗಿ ವರ್ಷಗಳು ಉರುಳಿವೆ,ಆದರು ನಮ್ಮ ನಿಮ್ಮ ಮಧ್ಯದಲ್ಲಿಯೇ ಅಪ್ಪು ಇದ್ದಾರೆ ಎಂಬ ನಂಬಿಕೆ ಎಲ್ಲಾರಲ್ಲೂ ಇದೆ. ಅಪ್ಪು ನಟಿಸಿದ ಸಿನಿಮಾ, ಹಾಡಿದ ಹಾಡುಗಳು ಇಂದಿಗೂ ಜನಮಾನಸದಲ್ಲಿ ಹಚ್ಚ ಹಸಿರಾಗಿವೆ.
ಅಪ್ಪು ನಮ್ಮಿಂದ ದೂರವಾದ್ರೂ ನಟ ಪುನೀತ್ ರಾಜ್ ಕುಮಾರ್ ಅವರ ಕ್ರೇಜ್ ಮಾತ್ರ ಯಾವತ್ತಿಗೂ ಕಮ್ಮಿ ಆಗಲ್ಲ. ಸೋಷಿಯಲ್ ಮೀಡಿಯಾದಲ್ಲಂತೂ ಅವರ ಫ್ಯಾನ್ಸ್ ಇಂದಿಗೂ ಅವರ ಕುರಿತ ಬಗೆ ಬಗೆ ಪೋಸ್ಟ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಪ್ರತಿ ಸಿನಿಮಾ ಶುರುವಾಗುವುದಕ್ಕೂ ಮುನ್ನ, ಅಪ್ಪುಗೆ ನಮನ ಸಲ್ಲಿಸುವ ಕಾಯಕವೂ ಮುಂದುವರಿದಿದೆ. ರಿಯಾಲಿಟಿ ಶೋಗಳಲ್ಲಿಯೂ ಅವರನ್ನು ಆಗಾಗ ನೆನಪಿಸುವ ಕಾರ್ಯಕ್ರಮಗಳು ನಡೆಯುತ್ತಲಿವೆ.

ಪ್ರತಿ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಆಗಾಗ ಅಪ್ಪು ಹಾಡು, ಡ್ಯಾನ್ಸ್ ಗಳು ಮಾತ್ರ ಇಂದಿಗೂ ಮಿಸ್ ಆಗಿಲ್ಲ. ಅಪ್ಪು ಡ್ಯಾನ್ಸ್ ಡ್ಯಾನ್ಸ್ ಅಂತ ಪುನೀತ್ ರಾಜ್ ಕುಮಾರ್ ಅವರನ್ನ ನೆನಪು ಮಾಡಿಕೊಳ್ಳದ ದಿನವಿಲ್ಲ. ಇದೀಗ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ಗೂ ಸಹ ನಮ್ಮ ಅಪ್ಪು ಸಡನ್ ಆಗಿ ಎಂಟ್ರಿಯಾಗಿದ್ದು, ಒಂದು ಕ್ಷಣ ಎಲ್ಲಿರಿಗೂ ಅಚ್ಚರಿಗೆ ಕಾರಣವಾಗಿದೆ.
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನ ಸಣ್ಣ ಪ್ರೋಮೋವೊಂದನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಅದರಲ್ಲಿ ಜಗಪ್ಪ ಮತ್ತವರ ತಂಡ ಸ್ಕಿಟ್ ಮಾಡುತ್ತಿದೆ. ಟೈಮ್ ಮಷಿನ್ ಇಟ್ಕೊಂಡು ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗಲೇ "ಏ ಬುಜ್ಜಿ 2021ಕ್ಕೆ ಹೋಗು" ಎಂದು ಟೈಮ್ ಮಷಿನ್‌ಗೆ ಹೇಳಿದ್ದಾರೆ ಜಗಪ್ಪ. ಅಷ್ಟೊತ್ತಿಗೆ ಕಾಲಚಕ್ರ ಹಿಂದೆ ಉರುಳಿದೆ. ತೀರ್ಪುಗಾರರು ಒಂದು ಕ್ಷಣ ಅಚ್ಚರಿಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ "ಏ ಬುಜ್ಜಿ 2021ಕ್ಕೆ ಹೋಗು" ಎಂದು ಟೈಮ್ ಮಷಿನ್ ನಿಂದ ಅಪ್ಪು ಒಂದು ಕ್ಷಣ ಪ್ರತ್ಯೇಕ್ಷರಾಗಿದ್ದು, ಒಂದು ಕ್ಷಣ ಕಾಮಿಡಿ ಕಿಲಾಡಿಗಳು ಶೋನಲ್ಲಿ ಅಕ್ಷರಶಃ ಎಲ್ಲಾರೂ ಕಣ್ಣೀರಿಟ್ಟಿದ್ದಾರೆ.
"ಏ ಬುಜ್ಜಿ 2021ಕ್ಕೆ ಹೋಗು" ಎಂದು ಟೈಮ್ ಮಷಿನ್‌ಗೆ ಹೇಳಿದ ತಕ್ಷಣ ವೇದಿಕೆಯ ಮೇಲೆ ಲೈಟ್ ಆಫ್ ಆಗಿದೆ. ಸುತ್ತಲು ಕತ್ತಲಾಗಿದೆ. ಮಿನುಗು ಬೆಳಕಿನಲ್ಲಿ ಪುನೀತ್ ರಾಜ್‌ಕುಮಾರ್ ಎಂಟ್ರಿಯಾಗಿದೆ. ಪುನೀತ್ ರಾಜ್‌ಕುಮಾರ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಸೂಟು ಬೂಟು ಹಾಕಿಕೊಂಡು ವೇದಿಕೆ ಮೇಲೆ ಆಗಮಿಸಿದ್ದಾರೆ. ಒಂದು ಕ್ಷಣ ಕಾರ್ಯಕ್ರಮದಲ್ಲಿದ್ದ ಎಲ್ಲಾರಿಗೂ ಆಶ್ಚರ್ಯವನ್ನುಂಟು ಮಾಡಿದೆ.
ಇತ್ತ ವೇದಿಕೆಗೆ ಪುನೀತ್ ರಾಜ್ ಕುಮಾರ್ ಅವರನ್ನ ಹೋಲುವ ವ್ಯಕ್ತಿಯೊಬ್ಬರು ಎಂಟ್ರಿಯಾಗುತ್ತಿದ್ದಂತೆ "ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ .." ಎಂಬ ಅವರ ಧ್ವನಿಯಲ್ಲಿದ್ದ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗಿದೆ. ತರುಣ್ ಸುಧೀರ್ ಎದ್ದು ನಿಂತರೆ, ಅನುಶ್ರೀ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಕುರಿ ಪ್ರತಾಪ್ ಒಂದು ಕ್ಷಣ ಸ್ಟನ್ ಆಗಿದ್ದಾನೆ. ಕಾಮಿಡಿ ಕಿಲಾಡಿ ನಯನಾ ಅಳಲು ಆರಂಭಿಸಿದ್ದಾರೆ. ಕಾಮಿಡಿ ಶೋಕ್ಕೆ ಪುನೀತ್ ಆಗಮನವಾಗುತ್ತಿದ್ದಂತೆ, ಎಲ್ಲರೂ ಕಣ್ಣೀರಿಟ್ಟಿದ್ದಾರೆ.
ವೇದಿಕೆಯಲ್ಲಿ ಎಂಟ್ರಿಯಾದ ವ್ಯಕ್ತಿ ಥೇಟ್ ಅಪ್ಪು ರೀತಿಯ ಬಾಡಿ ಲ್ಯಾಂಗ್ವೆಜ್‌ನಿಂದಲೇ ನೋಡುಗರ ಗಮನ ಸೆಳೆದರು. ಸೇಮ್ ಅಪ್ಪು ಅವರ ಆಂಗಿಕ ಶೈಲಿಯನ್ನೇ ಅನುಸರಿಸಿದರು. ಅದ್ಯಾವ ಮಟ್ಟಿಗೆ ಇತ್ತು ಎಂದರೆ, ಮತ್ತೆ ಪುನೀತ್ ಬಂದ್ರಾ ಅನ್ನೋ ರೀತಿಯಲ್ಲಿತ್ತು. ಇನ್ನೂ ಒಂದು ಕ್ಷಣ ಎಲ್ಲಾರ ಅಚ್ಚರಿಯಲ್ಲಿರುವಾಗ ಜಗ್ಗಪ್ಪ ಅವರು ಸ್ಕಿಟ್ ಮುಂದುವರಿಸಿದರು. ನಿಮ್ಮನ್ನ ನೋಡಿ ಬಹಳ ಖುಷಿಯಾಯ್ತು ಸರ್, ಅಪ್ಪು ಸಿನಿಮಾದಿಂದ ಹಿಡಿದು ಎಲ್ಲ ಸಿನಿಮಾ ನೋಡಿದ್ದೀನಿ ಸರ್, ನಿಮ್ಮ ಒಂದೇ ಒಂದು ಫೋಟೋ ಇಲ್ಲ ಸರ್ ಎಂದಿದ್ದಾರೆ. "ಜಗ್ಗ ಅವರೇ ಮೊದಲು ನೀವು ಅಳೋದನ್ನ ನಿಲ್ಲಿಸ್ತೀರಾ? ಎಂಬ ಪುನೀತ್ ರಾಜ್ ಕುಮಾರ್ ಅವರ ಧ್ವನಿ ಹೊರಬೀಳುತ್ತಿದ್ದಂತೆ, ಮತ್ತೆ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಕಣ್ಣೀರಿಟ್ಟಿದ್ದಾರೆ.












Click it and Unblock the Notifications