ಕಾಮಿಡಿ ಶೋಗೆ ಬಂದ ಅಪ್ಪು.! ಕಣ್ಣೀರಿಟ್ಟ ನಿರೂಪಕಿ ಅನುಶ್ರೀ, ಏನಿದು ಚಮತ್ಕಾರ?-ಇಲ್ಲಿದೆ ಮಾಹಿತಿ
Puneeth Rajkumar: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಇಲ್ಲವಾದರೂ ಅವರ ನೆನಪುಗಳು ಮಾತ್ರ ಎಂದೆದಿಗೂ ಅಚ್ಚಹರಿಸಿರಿನಂತೆ ಶಾಶ್ವತ. ಅವರು ಚಿಕ್ಕಮಕ್ಕಳಿಂದ ಹಿಡಿದು, ಅಜ್ಜ, ಅಜ್ಜಂದಿರವರೆಗೂ ಮನಸಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದಾರೆ.
ಇನ್ನು ರಿಯಾಲಿಟಿ ಶೋಗಳು, ಸಿನಿಮಾಗಳು ಆರಂಭವಾಗುವ ಮುನ್ನ ಅವರನ್ನು ನೆನಪಿಸುವಂತಹ ಕಾರ್ಯಕ್ರಮಗಳು ನಡೆಯುತ್ತಲಿವೆ. ಹಾಗೆಯೇ ಇದೀಗ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ಗೆ ಅಪ್ಪು ಅವರು ಬಂದಿದ್ದು, ಈ ದೃಶ್ಯವನ್ನು ಕಂಡ ನಿರೂಪಕಿ ಅನುಶ್ರೀ ಕಣ್ಣೀರಿಟ್ಟಿದ್ದಾರೆ.

ಸಾಮಾನ್ಯವಾಗಿ ಅಪ್ಪು ಹೇಗೆ ಕಾರ್ಯಕ್ರಮಕ್ಕೆ ಬಂದರೂ ಎನ್ನುವ ಪ್ರಶ್ನೆಗಳು ಕಾಡುತ್ತವೆ. ಇಲ್ಲಿದೆ ನೋಡಿ ಚಮತ್ಕಾರ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನ ಸಣ್ಣ ಪ್ರೋಮೋವೊಂದನ್ನು ಜೀ ಕನ್ನಡ ಬಿಡುಗಡೆ ಮಾಡಿದ್ದು, ಅದರಲ್ಲಿ ಜಗ್ಗಪ್ಪ ಮತ್ತು ಅವರ ತಂಡ ಸ್ಕಿಟ್ ಮಾಡುತ್ತಿದೆ. ಟೈಮ್ ಮಷಿನ್ ಇಟ್ಕೊಂಡು ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಈ ವೇಳೆ ಜಗಪ್ಪ 'ಏ ಬುಜ್ಜಿ 2021ಕ್ಕೆ ಹೋಗು' ಅಂತಾ ಟೈಮ್ ಮಷಿನ್‌ಗೆ ಹೇಳಿದ್ದಾರೆ. ಆಗ ಕಾಲಚಕ್ರ ಹಿಂದೆ ಹೋಗಿದ್ದು, ಈ ಕ್ಷಣವಂತೂ ತೀರ್ಪುಗಾರರನ್ನು ಅಚ್ಚರಿಗೊಳಿಸಿದೆ. ಅದರಲ್ಲೂ ನಿರೂಪಾಲಿ ಅನುಶ್ರೀ ಏನ್ ಆಗುತ್ತಿದೆ ಅಂತಾ ದಿಟ್ಟಿಸಿ ನೋಡಿದ್ದರು. ಈ ವೇಳೆ ಕತ್ತಲಾಗಿ ಮಿನುಗು ಬೆಳಕಿನಲ್ಲಿ ಪುನೀತ್ ರಾಜ್‌ಕುಮಾರ್ ಎಂಟ್ರಿ ಕೊಟ್ಟಿದ್ದು, ಇದನ್ನು ಕಂಡು ಅನುಶ್ರೀ ಕಣ್ಣೀರಿಟ್ಟಿದ್ದಾರೆ.
ಅಪ್ಪು ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಸೂಟು ಬೂಟು ಹಾಕಿಕೊಂಡು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ವೇದಿಕೆ ಮೇಲೆ ಆಗಮಿಸಿದ್ದು, ಈ ವೇಳೆ "ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ" ಎಂಬ ಅವರ ಧ್ವನಿಯಲ್ಲಿದ್ದ ಹಾಡು ಪ್ಲೇ ಆಗಿದೆ. ಇನ್ನು ಈ ವೇಳೆ ತರುಣ್ ಸುಧೀರ್ ಎದ್ದು ನಿಂತರೆ, ಅನುಶ್ರೀ, ನಯನಾ ಅಪ್ಪು ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಮಿಡಿ ಶೋಗೆ ಆಗಮಿಸಿದ್ದ ಎಲ್ಲರ ಕಣ್ಣಲ್ಲೂ ಕಣ್ಣೀರಿಟ್ಟು ಭಾವುಕರಾದರು.
ಜ್ಯೂನಿಯರ್ ಪುನೀತ್ ರಾಜ್‌ಕುಮಾರ್ ಥೇಟ್ ಅಪ್ಪು ರೀತಿಯಲ್ಲೇ ಮಾತನಾಡಿ ಎಲ್ಲರನ್ನೂ ಒಂದು ಕ್ಷಣ ನಿಬ್ಬೆರಗಾಗುವಂತೆ ಮಾಡಿದರು. ಅಪ್ಪು ಅವರ ಶೈಲಿಯಲ್ಲೇ ಮತನಾಡುತ್ತಾ, ನಡೆಯುತ್ತಾ ಗಮನ ಸೆಳೆದರು. ಬಳಿಕ ಸ್ಕಿಟ್ ಮುಂದುವರಿಸಿದ ಜಗಪ್ಪ, ನಿಮ್ಮನ್ನ ನೋಡಿ ಬಹಳ ಖುಷಿಯಾಯಿತು, ನಿಮ್ಮ ಜೊತೆ ಸೆಲ್ಪೀ ತೆಗೆದುಕೊಳ್ಳಬಹುದಾ ಸರ್ ಎಂದು ಕೇಳಿದ್ದಾರೆ. ಆಗ ಜಗ್ಗ ಅವರೇ ಮೊದಲು ನೀವು ಅಳುವುದನ್ನು ನಿಲ್ಲಿಸುತ್ತೀರಾ? ಎಂದಯ ಪುನೀತ್ ರಾಜ್‌ಕುಮಾರ್ ರೀತಿಯಲ್ಲೇ ಮಾತನಾಡಿದ್ದಾರೆ.
ಅಲ್ಲದೆ, ಇದೇ ವೇಳೆ ಜೀವನದಲ್ಲಿ ಯಾವಗಲೂ ನಗ್ ನಗುತ್ತಾ ಇರಬೇಕ್ರಿ. ನೀವು ನಕ್ಕರೆ ಅಲ್ವಾ ಪೋಟೋದಲ್ಲಿ ಚೆನ್ನಾಗಿ ಕಣಿಸುತ್ತೀರಾ ತಗೋಳಿ ಅನ್ನೋ ಡೈಲಾಗ್ ಹೇಳಿದ್ದು, ಬಳಿಕ ಅಣ್ಣಾ ಬಾಂಡ್ ಹಾಡಿಗೆ ಜೂನಿಯರ್ ಪುನೀತ್ ರಾಜ್‌ಕುಮಾರ್ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದಿದ್ದಾರೆ. ಈ ಕ್ಷಣವಂತೂ ಅಪ್ಪು ಅವರೇ ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡುತ್ತಿದ್ದಾರೆ ಅನ್ನುವಂತಿತ್ತು.












Click it and Unblock the Notifications