Get Updates
Get notified of breaking news, exclusive insights, and must-see stories!

ಕರೋಡ್‌ಪತಿ ಶೋನಲ್ಲಿ 'ಆಪರೇಷನ್‌ ಸಿಂಧೂರ್‌' ಸೇನಾಧಿಕಾರಿಗಳು; ಬಿಗ್‌ಬಾಸ್‌ಗೂ ಹೋಗ್ತಾರೆ ಎಂದ ಪ್ರಕಾಶ್‌ ರಾಜ್

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಮೇಲೆ ಆಪರೇಷನ್‌ ಸಿಂಧೂರ ನಡೆಸಿತ್ತು. ಈ ಮೂಲಕ ಪಾಕ್‌ನ ಹುಟ್ಟಡಗಿಸಿತ್ತು. ಈ ಆಪರೇಷನ್‌ನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಭಾರತೀಯ ಸೇನೆಯ ಹಿರಿಯ ಮಹಿಳಾಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ನಟ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಜನಪ್ರಿಯ ಶೋ ಕೌನ್‌ ಬನೇಗಾ ಕರೋಡ್‌ಪತಿ (ಕೆಬಿಸಿ) ಕಾಣಿಸಿಕೊಂಡಿದ್ದಾರೆ. ಕೆಬಿಸಿಯ ವಿಶೇಷ ಸಂಚಿಕೆಯಲ್ಲಿ ಸೇನಾಧಿಕಾರಿಗಳು ಸಮವಸ್ತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಈ ಸಂಚಿಕೆಯ ಪ್ರೋಮೋ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ನಟ ಪ್ರಕಾಶ್‌ ರಾಜ್‌ ಕೂಡ ವ್ಯಂಗ್ಯವಾಡಿದ್ದಾರೆ.

ಕರೋಡ್‌ಪತಿ ಕಾರ್ಯಕ್ರಮದಲ್ಲಿ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಮಾತ್ರವಲ್ಲದೆ, ಕಳೆದ ವರ್ಷ ಭಾರತೀಯ ನೌಕಾಪಡೆಯಲ್ಲಿ ಯುದ್ಧನೌಕೆಯ ಕಮಾಂಡರ್ ಹುದ್ದೆಯನ್ನು ಹಸ್ತಾಂತರಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಮಾಂಡರ್ ಪ್ರೇರಣಾ ದಿಯೋಸ್ತಲಿ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಈ ಮೂವರೂ ಅಧಿಕಾರಿಗಳು ಸೇನೆಯ ಸಮವಸ್ತ್ರದಲ್ಲೇ ಇರುವುದನ್ನು ಹಲವರು ಟೀಕಿಸುತ್ತಿದ್ದಾರೆ.

operation-sindhoor-army-officers-in-kbc-they-may-go-to-bigg-boss-prakash-raj

ಆಗಸ್ಟ್ 15ರಂದು ಈ ಸಂಚಿಕೆ ಪ್ರಸಾರವಾಗಲಿದ್ದು, ಇದರ ಸಣ್ಣ ಟೀಸರ್ ಅನ್ನು ಇತ್ತೀಚೆಗೆ ಹಂಚಿಕೊಂಡಿದ್ದು, ಇದರಲ್ಲಿ ಸೇನಾಧಿಕಾರಿಗಳಿಗೆ ಕೆಬಿಸಿ ನಿರೂಪಕ ಅಮಿತಾಬ್ ಬಚ್ಚನ್ ಭವ್ಯ ಸ್ವಾಗತ ನೀಡಿದ್ದಾರೆ. ಇದೇ ಪ್ರೋಮೋದಲ್ಲಿ ಕರ್ನಲ್ ಖುರೇಷಿ ಅವರು ಪಹಲ್ಗಾಮ್ ದಾಳಿಯ ನಂತರ ಭಾರತದ ಆಪರೇಷನ್ ಸಿಂಧೂರ ಏಕೆ ಅಗತ್ಯವಾಗಿತ್ತು ಎಂಬುದನ್ನು ವಿವರಿಸಿದ್ದಾರೆ.

ಪಾಕಿಸ್ತಾನವು ಭಯೋತ್ಪಾದಕ ಕೃತ್ಯಗಳನ್ನು ಪದೇ ಪದೇ ನಡೆಸುತ್ತಿದ್ದು, ಇದಕ್ಕೆ ಪ್ರತಿಕ್ರಿಯೆ ಅಗತ್ಯವಾಗಿತ್ತು. ಅದಕ್ಕಾಗಿಯೇ ಆಪರೇಷನ್ ಸಿಂಧೂರ್ ನಡೆಯಿತು ಎನ್ನುತ್ತಾರೆ. ಇನ್ನು ಮನರಂಜನಾ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸಿ, ಅಲ್ಲಿಯೂ ಆಪರೇಷನ್‌ ಸಿಂಧೂರ್‌ ಬಗ್ಗೆ ಮಾತನಾಡುತ್ತಿರುವುದನ್ನು ನೆಟ್ಟಿಗರು ಟೀಕಿಸಿದ್ದಾರೆ. ಸೇನೆ ಸಮವಸ್ತ್ರ ಧರಿಸಿದ ಅಧಿಕಾರಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಯಾವುದೇ ಗಂಭೀರ ಮಿಲಿಟರಿ ಕಾರ್ಯಾಚರಣೆಯ ನಂತರ ನೀವು ಎಲ್ಲಾದರೂ ಇಂತದ್ದನ್ನ ನೋಡಿದ್ದೀರಾ? ಸೇವೆಯಲ್ಲಿರುವ ಯಾರಿಗಾದರೂ ಇದನ್ನು ಹೇಗೆ ಅನುಮತಿಸಲಾಗುತ್ತದೆ? ಈಗಿನ ಸರ್ಕಾರಗಳು ನಮ್ಮ ಸೇನೆಯನ್ನು ತನ್ನ ಕ್ಷುಲ್ಲಕ ರಾಜಕೀಯಕ್ಕಾಗಿ ನಾಚಿಕೆಯಿಲ್ಲದೆ ಬಳಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕರೋಡ್‌ಪತಿಯಂತಹ ರಿಯಾಲಿಟಿ ಶೋಗಳಿಗೆ ಅಧಿಕಾರಿಗಳನ್ನು ಕಳುಹಿಸಲು ಸಶಸ್ತ್ರ ಪಡೆಗಳ ನಿಯಮಗಳು ಒಪ್ಪುತ್ತವೆಯೇ ಎಂದು ಕೇಳಿದ್ದಾರೆ.

'ಬಿಗ್‌ಬಾಸ್‌ನಲ್ಲೂ ಕಾಣಿಸ್ತಾರೆ'

ಇದೇ ವಿಚಾರವಾಗಿ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕೂಡ ಟೀಕಿಸಿದ್ದಾರೆ. 'ಶೀಘ್ರದಲ್ಲೇ ನಾವು ಅವರನ್ನು "ಬಿಗ್ ಬಾಸ್" ನಲ್ಲಿಯೂ ನೋಡಬಹುದು' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ಪೋಸ್ಟ್‌ ಅನ್ನು ಪ್ರಕಾಶ್‌ ರಾಜ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸೇನೆಯ ಶಿಷ್ಟಾಚಾರದ ಪ್ರಕಾರ ಸೇನಾ ಉಡುಪುಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಸಾಮಾಜಿಕ ಕೂಟಗಳಲ್ಲಿ ಧರಿಸುವಂತಿಲ್ಲ ಎಂದು ಷರತ್ತು ವಿಧಿಸುತ್ತವೆ. ಹಿರಿಯ ಅಧಿಕಾರಿಯಿಂದ ಲಿಖಿತವಾಗಿ ಅನುಮತಿ ಪಡೆಯದ ಹೊರತು, ಇದಕ್ಕೆ ಅವಕಾಶವಿಲ್ಲ ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+