ನಟ ದರ್ಶನ್ ತೂಗುದೀಪ್ ಜೈಲಿನಲ್ಲಿ ಇರುವಾಗ ಮನೆ ಒಡೆಯಲು ಮುಂದಾದ ಅಧಿಕಾರಿಗಳು...
Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲ ಪಾಲಾಗಿದ್ದಾರೆ. ಇನ್ನು ಜೈಲು ಸೇರಿದಾಗಿನಿಂದ ಅವರ ಒಂದೊಂದೇ ಹಳೆಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯನ್ನು ರಾಜಕಾಲುವೆ ಮೇಲೆ ಕಟ್ಟಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಮನೆಯನ್ನು ಅಧಿಕಾರಿಗಳು ನೆಲಸಮ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿ ಸೇರಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 28ರಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ದರ್ಶನ್‌ಗೆ ಬೇಲ್ ಯಾವಗ ಸಿಗುತ್ತದೆ ಎಂಬ ಒಂದು ಕಡೆ ಚಿಂತೆಯಾದರೆ, ಮತ್ತೊಂದೆಡೆ ಮನೆ ನೆಲಸಮ ಆಗುವ ಭೀತಿ ಕಾರುತ್ತಿದೆಯಂತೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದೀಗ ನಟ ದರ್ಶನ್ ಮನೆ ಟಾರ್ಗೆಟ್ ಆಗಿರುವ ವಿಚಾರ ಅಭಿಮಾನಿಗಳಿಗೆ ಶಾಕ್ ಕೊಟ್ಟಂತಾಗಿದೆ.

ಇಷ್ಟು ದಿನ ನಮ್ಮ ಬಾಸ್ ಜೈಲಿನಿಂದ ಯಾವಾಗ ಹೊರಡೆ ಬರುತ್ತಾರೆ ಎನ್ನುವ ಚಿಂತೆಯಲ್ಲಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಆರ್‌ಆರ್ ನಗರದಲ್ಲಿರುವ ದರ್ಶನ್ ಮನೆಯನ್ನು ಅಧಿಕಾರಿಗಳು ನೆಲಸಮ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದು, ಇದರಿಂದ ಅಭಿಮಾನಿಗಳು ಮತ್ತಷ್ಟು ಭೀತಿಗೆ ಒಳಗಾಗಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಯನ್ನು ರಾಜಕಾಲುವೆ ಮೇಲೆ ಕಟ್ಟಲಾಗಿದೆ ಎಂಬ ಆರೋಪವಿದೆ. ಆದ್ದರಿಂದ ಈ ಮನೆಯನ್ನು ತೆರವುಗೊಳಿಸಬೇಕು ಎಂಬ ಒತ್ತಡವಿದೆ. ಆದರೆ, ದರ್ಶನ್ ಸ್ಟೇ ತಂದಿದ್ದು, ಇದನ್ನು ತೆರವು ಮಾಡಲು ಬಿಬಿಎಂಪಿ ಪ್ರಯತ್ನಿಸುತ್ತಿತ್ತು. ಆದರೆ ಇದೀಗ ನೇರವಾಗಿ ಜೆಸಿಬಿ ಇಟ್ಟು ಅವರ ರಾಜಕಾಲುವೇ ಮೇಲಿನ ಮನೆಯನ್ನು ಹಡೆಯುವುದೇ ಅಧಿಕಾರಿಗಳ ಮುಂದಿನ ಗುರಿ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಯಾಕೆಂದರೆ ಕಾನೂನು ಎಲ್ಲಾರಿಗೂ ಒಂದೇನೆ.. ಯಾರೇ ತಪ್ಪು ಮಾಡಿದರೂ ತಪ್ಪೇ.. ಆದ್ದರಿಂದ ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿರಿವ ನಟ ದರ್ಶನ್ ಮನೆ ರಾಜ ಕಾಲುವೆ ಮೇಲೆ ಕಟ್ಟಲಾಗಿದ್ದು, ಅದನ್ನು ಕೆಡವಲು ಅಧಿಕಾರಿಗಳು ಇದೀಗ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇನ್ನು ಇತ್ತೀಚೆಗಷ್ಟೇ ಬಗ್ಗೆ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿವಕುಮಾರ್ ಅವರು "ರಾಜಕಾಲುವೆಯನ್ನು ಯಾರೇ ಒತ್ತುವರಿ ಮಾಡಿ ತಡೆಯಾಜ್ಞೆ ತಂದಿದ್ದರೂ ಸಹ ಕಾನೂನಿನ ಪ್ರಕಾರ ಮನೆ ತೆರವು ಮಾಡಲಾಗುತ್ತದೆ. "ಯಾರೇ ಒತ್ತುವರಿ ಮಾಡಿ ತಡೆಯಾಜ್ಞೆ ತಂದಿರಬಹುದು. ನಾವು ಕಾನೂನಿನ ಪ್ರಕಾರ ಒತ್ತುವರಿ ಜಾಗ ತೆರವು ಮಾಡ್ತೇವೆ. ಯಾರೇ ಆದರೂ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ. ನೀನು, ಯಾರೇ ಸ್ಟೇ ತಂದಿದ್ದರು ತೆರವು ಮಾಡ್ತೇವೆ" ಎಂದು ಹೇಳಿದ್ದರು.
ಅಲ್ಲದೆ, "ದರ್ಶನ್ ಅವರ ನಿವಾಸ ಮತ್ತು ಇತರರು ಬಫರ್ ಝೋನ್ ಅನ್ನು ಅತಿಕ್ರಮಣ ಮಾಡಿರುವುದರ ಬಗ್ಗೆ ಹೈಕೋರ್ಟ್ (ಎಚ್‌ಸಿ) ನಲ್ಲಿ ಇನ್ನೂ ತಡೆಯಾಜ್ಞೆ ಇದೆ ಎಂದು ಕಂಡುಬಂದಿದೆ. ಮುಂದಿನ ಕೆಲಸದ ದಿನದಲ್ಲಿ ಬಿಬಿಎಂಪಿ ತಡೆಯಾಜ್ಞೆ ತೆರವು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಲಿದೆ" ಎಂದು ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿ ನಾಥ್ ಇತ್ತೀಚೆಗಷ್ಟೇ ತಿಳಿಸಿದ್ದರು.












Click it and Unblock the Notifications