Mata Guruprasad: ನಿರ್ದೇಶಕ ಮಠ ಗುರುಪ್ರಸಾದ್ ಆತ್ಮಹ*ಗೆ ಕಾರಣ ಏನು?

ಮಠ ಗುರುಪ್ರಸಾದ್ ಸಾವಿನ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಬರ ಸಿಡಿಲಿನ ರೀತಿ ಬಂದು ಎರಗಿದೆ. ಕನ್ನಡ ಸಿನಿಮಾ ರಂಗದಲ್ಲಿ ಉದಯೋನ್ಮುಖ ನಿರ್ದೇಶಕನಾಗಿ ಎಂಟ್ರಿ ಕೊಟ್ಟಿದ್ದ ಮಠ ಗುರುಪ್ರಸಾದ್ ಅವರು ಕನ್ನಡಿಗರ ಮನಸ್ಸಿನಲ್ಲಿ ಒಂದು ಹೊಸ ಅಲೆ ಎಬ್ಬಿಸಿದ್ದರು. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಮಠ ಗುರುಪ್ರಸಾದ್ ಸಂಚಲನ ಸೃಷ್ಟಿ ಮಾಡಿದ್ದರು. ಮಠ ಗುರುಪ್ರಸಾದ್ ಸಿನಿಮಾಗಳಿಗೆ ಕನ್ನಡಿಗರು ಕಾದು ಕುಳಿತುಕೊಳ್ಳುವ ವಾತಾವರಣ ಕೂಡ ಒಂದು ಕಾಲದಲ್ಲಿ ಇತ್ತು.

ಮಠ ಎಂಬ ಚಿತ್ರದ ಮೂಲಕ ಗುರುಪ್ರಸಾದ್ ಸಮಾಜದಲ್ಲಿ ಹೊಸ ತಲ್ಲಣ ಸೃಷ್ಟಿ ಮಾಡಿದರು. ಜಗ್ಗೇಶ್ & ಮಠ ಗುರುಪ್ರಸಾದ್ ಅವರ ಕಾಂಬಿನೇಷನ್ ಶುರುವಾಯ್ತು ಅಂದ್ರೆ ಗೆಲವು ಗ್ಯಾರಂಟಿ ಎಂಬ ಮಾತು ಗಾಂಧಿನಗರದ ಗಲ್ಲಿಗಳಲ್ಲಿ ಓಡಾಡುತ್ತಿತ್ತು. ಹೀಗಿದ್ದಾಗ ದಿಢೀರ್, ನಿರ್ದೇಶಕ ಮಠ ಗುರುಪ್ರಸಾದ್ ಆತ್ಮಹ*ಗೆ ಕಾರಣ ಏನು? ದಿಢೀರ್ ಮಠ ಗುರುಪ್ರಸಾದ್ ಆತ್ಮಹ* ರೀತಿಯ ನಿರ್ಧಾರ ಯಾಕೆ ತೆಗೆದುಕೊಂಡರು? ಸಾಲ ಕಾರಣವಾಗಿತ್ತಾ? ಕುಡಿತದ ಚಟ ಕಾರಣವಾ?

Mata Guruprasad Incident Complete Details And The Reasons

ಗುರುಪ್ರಸಾದ್ ಆತ್ಮಹತ್ಯೆಗೆ ಕಾರಣ ಏನು?

1972ರ ನವೆಂಬರ್ 2ರಂದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಗುರು ಪ್ರಸಾದ್ ಜನಿಸಿದ್ದರು. ಸಾಕಷ್ಟು ಕಷ್ಟದ ನಡುವೆಯೇ ಗೆದ್ದು ಬೆಳೆದು ಬಂದ ಪ್ರತಿಭೆ ಮಠ ಗುರುಪ್ರಸಾದ್ ಅವರು. ಮಠ ಗುರುಪ್ರಸಾದ್ ಹೀಗೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಯಾರಿಗೂ ನಂಬಲು ಆಗ್ತಿಲ್ಲ. ನಟ ಜಗ್ಗೇಶ್, ತಬಲ ನಾಣಿ ಸಮೇತ ದೊಡ್ಡ ದೊಡ್ಡ ನಟರು & ಸಿನಿಮಾ ಮಂದಿ ಇದೀಗ ಮಠ ಗುರುಪ್ರಸಾದ್ ಅವರ ಸಾವಿನ ಬಗ್ಗೆ ಭಾರಿ ಆಘಾತ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಹೀಗೆ ಮಠ ಗುರುಪ್ರಸಾದ್ ಸಾಯುವ ನಿರ್ಧಾರ ಕೈಗೊಳ್ಳಲು ಕಾರಣ ಏನು? ಮುಂದೆ ಓದಿ.

ಸಾಲಗಾರರ ಕಾಟಕ್ಕೆ ಗುರುಪ್ರಸಾದ್ ಆತ್ಮಹತ್ಯೆ?

ಹೌದು, ಇದೀಗ ಓಡಾಡುತ್ತಿರುವ ಸುದ್ದಿ ಪ್ರಕಾರ ಮಠ ಗುರುಪ್ರಸಾದ್ ಅವರ ಸಾವಿಗೆ ಸಾಲ ಮಾಡಿಕೊಂಡಿದ್ದೇ ಕಾರಣ. ಸಾಲಗಾರರ ಕಾಟವೇ ಕಾರಣ ಎಂಬ ಆರೋಪ ಮಾಡಲಾಗ್ತಿದೆ. ಆದರೆ ಈ ಬಗ್ಗೆ ಪೊಲೀಸರು ಅಥವಾ ತನಿಖಾಧಿಕಾರಿಗಳು ಅಧಿಕೃತ ಹೇಳಿಕೆ ನೀಡಿಲ್ಲ. ಹೀಗೆ ಇದ್ದರೂ, ಮಠ ಗುರುಪ್ರಸಾದ್ ಅವರು ಮಾತ್ರ ಮೈತುಂಬಾ ಸಾಲ ಮಾಡಿಕೊಂಡಿದ್ದರು. ಈ ನಡುವೆ ಕುಡಿತಕ್ಕೆ ಕೂಡ ದಾಸರಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಮಠ ಗುರುಪ್ರಸಾದ್ ಅವರ ಸಾವಿನ ಕುರಿತು ಇದೀಗ ತನಿಖೆ ಆರಂಭವಾಗಿದೆ. ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನ ಹಳ್ಳಿ ಸಮೀಪದ ಖಾಸಗಿ ಅಪಾರ್ಟ್‌ಮೆಂಟ್‌ ಒಂದರಲ್ಲಿ ಮಠ ಗುರುಪ್ರಸಾದ್ ಅವರು ವಾಸ ಮಾಡುತ್ತಿದ್ದರು. ಮಠ ಗುರುಪ್ರಸಾದ್ 8 ತಿಂಗಳಿಂದಲೂ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಒಂದನ್ನ ಬಾಡಿಗೆಗೆ ಪಡೆದು, ವಾಸ ಮಾಡುತ್ತಿದ್ದರು.

ಮಠ ಗುರುಪ್ರಸಾದ್ ಮೃತಪಟ್ಟಿದ್ದು ಯಾವಾಗ?

ಆದರೆ ಕಳೆದ 4 ರಿಂದ 5 ದಿನಗಳಿಂದ ಅವರು ಫ್ಲಾಟ್ ಬಿಟ್ಟು ಹೊರಗೆ ಬಾರದೆ ಇರುವುದು ಅನುಮಾನ ಮೂಡಿಸಿತ್ತು ಎನ್ನಲಾಗಿದೆ. ಇದರ ಜೊತೆಗೆ ಮಠ ಗುರುಪ್ರಸಾದ್ ವಾಸ ಇರುವ ಫ್ಲಾಟ್ ಬಳಿ ಕೆಟ್ಟ ವಾಸನೆ ಬರಲು ಶುರುವಾಗಿತ್ತು. ಈ ಹಿನ್ನೆಲೆ ಪೊಲೀಸರಿಗೆ ಮಾಹಿತಿಯನ್ನ ನೀಡಲಾಗಿತ್ತು, ಬಾಗಿಲು ಒಡೆದು ನೋಡಿದಾಗ ಮಠ ಗುರುಪ್ರಸಾದ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ. ಆತ್ಮಹತ್ಯೆಗೆ ಸಾಲ ಕಾರಣವಾ? ಕುಡಿತದ ಚಟ ಕಾರಣವ? ಅಥವಾ ಬೇರೆ ಕಾರಣ ಇತ್ತಾ? ಅನ್ನೋದನ್ನ ಪೊಲೀಸರು ತನಿಖೆ ನಡೆಸ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+