ತರುಣ್-ಸೋನಲ್ ದಂಪತಿಯಿಂದ ಗುಡ್ ನ್ಯೂಸ್ ಯಾವಾಗ? ಮಾಲತಿ ಸುಧೀರ್‌ ಹೇಳಿದ್ದೇನು?

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್ ಮೊಂಥೆರೋ ತಾರಾ ಜೋಡಿ ಕಳೆದ ವರ್ಷ ಆಗಸ್ಟ್ 11ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟು ಏಳು ತಿಂಗಳು ಕಳೆಯುತ್ತಿದ್ದು, ಗುಡ್‌ ನ್ಯೂಸ್‌ ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿರುತ್ತಾರೆ. ಈ ಪ್ರಶ್ನೆಗೆ ಇದೀಗ ತರುಣ್‌ ಸುಧೀರ್‌ ಅವರ ತಾಯಿ ಮಾಲತಿ ಸುಧೀರ್‌ ಉತ್ತರ ಕೊಟ್ಟಿದ್ದಾರೆ.

ಪಬ್ಲಿಕ್‌ ನೆಕ್ಸ್ಟ್‌ ಯೂಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ ಅವರು, 'ನಾನು ತರುಣ್‌ ಸುಧೀರ್‌ ಅವರ ಮುದ್ದಿನ ಅಮ್ಮ, ಸೋನಲ್‌ ಅವರ ಮುದ್ದಿನ ಅತ್ತೆ ಎನ್ನುವುದು ಸತ್ಯ. ಅದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಮನೆಯ ವಾತಾವರಣ ತುಂಬಾ ಚೆನ್ನಾಗಿದೆ. ತರುಣ್‌ ಮೂರು ಸಿನಿಮಾಗಳನ್ನು ಮಾಡುತ್ತಿದ್ದಾನೆ. ಅದರಲ್ಲಿ ಅವನು ಬ್ಯುಸಿಯಾಗಿದ್ದಾನೆ. ನಮಗೆ ಮೊದಲು ದುಡಿಮೆ. ನಮ್ಮ ಜೀವನವೇ ಚಿತ್ರರಂಗ ಹೀಗಾಗಿ ಬೆಳಗ್ಗಿನಿಂದ ಸಂಜೆತನಕ ಕೆಲಸದಲ್ಲಿ ಅವನು ಬ್ಯುಸಿಯಾಗಿರುತ್ತಾನೆ'.

Malathi Sudheer Talks About Tharun Sudhir Wife Sonal Monteiro Pair

'ಸೋನಲ್ ಕೂಡ ಒಂದು ಮೂರು ನಾಲ್ಕು ಸಿನಿಮಾ ಮಾಡುತ್ತಿದ್ದಾಳೆ. ಅವಳು ಬೆಳಗ್ಗೆ ಹೋಗಿ ಸಂಜೆ ತನಕ ಶೂಟಿಂಗ್‌ ಮುಗಿಸಿಕೊಂಡು ಬರುತ್ತಾಳೆ. ಸಂಜೆ ಇಬ್ಬರು ಜೊತೆಯಲ್ಲಿ ಇರುತ್ತಾರೆ. ಭಾನುವಾರ ಸಮಯ ಸಿಕ್ಕಿದರೆ, ನಮ್ಮ ತರುಣ್‌ಗೆ ಒಳ್ಳೆಯ ಮೂಡ್‌ ಇದ್ದರೆ ಇಬ್ಬರೂ ಒಟ್ಟಿಗೆ ಹೊರಗಡೆ ಹೋಗಿ ಬರುತ್ತಾರೆ' ಎಂದರು.

Take a Poll

ತಮ್ಮ ಮತ್ತು ಸೋನಲ್‌ ಬಾಂಧವ್ಯದ ಬಗ್ಗೆ ಮಾತನಾಡಿದ ಅವರು, 'ನಮಗೆ ಹೆಣ್ಣು ಮಕ್ಕಳು ಇಲ್ಲ. ಹೀಗಾಗಿ ಅವಳೇ ನನ್ನ ಮಗಳು. ನಮ್ಮ ದೊಡ್ಡ ಸೊಸೆ ಆದರೂ ಅಷ್ಟೇ, ಸೋನಾಲ್‌ ಆಸರೂ ಅಷ್ಟೇ ಅವರೇ ನಮ್ಮ ಮನೆಯ ಹೆಣ್ಣು ಮಕ್ಕಳು. ಇವರಿಬ್ಬರು ನಮಗೆ ಹೆಣ್ಣು ಮಕ್ಕಳು ಇಲ್ಲ ಎನ್ನುವ ಕೊರತೆಯನ್ನು ಕಮ್ಮಿ ಮಾಡಿದ್ದಾರೆ ಎನ್ನುವ ಖುಷಿ ನಮಗೆ ಇದೆ' ಎಂದು ಹೇಳಿದರು.

ಅತ್ತೆ ಮನೆಯಲ್ಲಿ ಅಡುಗೆ ಮಾಡುತ್ತಾರಾ ನಟಿ ಸೋನಲ್‌

ಇನ್ನು ಸೋನಾಲ್‌ ಬಿಡುವಿನ ವೇಳೆಯಲ್ಲಿ ಅಡುಗೆ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಲತಿ ಸುಧೀರ್‌,' ನಮ್ಮ ಮನೆಯಲ್ಲಿ ಅಡುಗೆಯವರು ಇದ್ದಾರೆ. ಅಡುಗೆಯವರ ಜೊತೆ ನಾನು ಸಹಾಯ ಮಾಡುತ್ತೇನೆ. ಅವಳು ಕೂಡ ಅಡುಗೆ ಮನೆಯಲ್ಲಿ ನಿಂತು ಅದೇನು ಇದೇನು ಅಂತಾ ಕೇಳುತ್ತಿರುತ್ತಾಳೆ. ಅವಳು ಮಂಗಳೂರು ಕಡೆಯವರಲ್ವಾ ಮೀನು ಅಡುಗೆ ಅದೆಲ್ಲಾ ಮಾಡುತ್ತಾರೆ. ಆದರೆ ನಾವು ಮೀನೆಲ್ಲಾ ಅಷ್ಟು ತಿನ್ನುವುದಿಲ್ಲ. ನಮಗೆ ಬೇರೆ ನಾನ್‌ವೆಜ್‌ ಇಷ್ಟ. ನಮ್ಮ ತರುಣ್‌ಗೆ ಏನಿಷ್ಟ ಅಂತೆಲ್ಲಾ ನಮಗೆ ಗೊತ್ತಲ್ಲಾ ಹೀಗಾಗಿ ಸ್ವಲ್ಪ ನಾನೇ ನಿಂತು ಅಡುಗೆ ಮಾಡುತ್ತಿರುತ್ತೇನೆ. ಅವಳು ಕೂಡ ನೋಡುತ್ತಾ ಇರುತ್ತಾಳೆ. ಅಷ್ಟೇ ಅಲ್ಲ ಅವಳ ಯಜಮಾನರಿಗೆ ಬೆಳಗ್ಗೆ ಎದ್ದು ಜ್ಯೂಸ್‌ ಮಾಡಿಕೊಡುತ್ತಾಳೆ' ಎಂದರು.

Malathi Sudheer Talks About Tharun Sudhir Wife Sonal Monteiro Pair

ಸೊಸೆಗಾಗಿ ತುಳು ಕಲಿತಾರಾ ಮಾಲತಿ ಸುಧೀರ್‌

ಇನ್ನು ಸೊಸೆಗಾಗಿ ತುಳು ಕಲಿಯುವ ಬಗ್ಗೆ ಮಾತನಾಡಿದ ಅವರು, 'ನಾನು ತುಳು ನಾಟಕದಲ್ಲಿ ನಟಿಸಿರುವುದರಿಂದ ನನಗೆ ತುಳು ಸ್ವಲ್ಪ ಬರುತ್ತದೆ. ಆ ತುಳು ನಾಟಕದಲ್ಲಿ ನಾನು ಹುಚ್ಚಿ ಪಾತ್ರ ಮಾಡಿದ್ದೆ. ಅದಕ್ಕೆ ಅವಾರ್ಡ್ ಕೂಡ ಬಂತು. ಒಂದೇ ಒಂದು ತುಳು ನಾಟಕದಲ್ಲಿ ಅಭಿನಯಿಸಿದ್ದೆ' ಎಂದು ಹೇಳಿದರು.

ತರುಣ್ ಸುಧೀರ್‌ ಹಾಗೂ ಸೋನಲ್ ದಂಪತಿಗಳಿಂದ ಗುಡ್ ನ್ಯೂಸ್ ಯಾವಾಗ?

ತರುಣ್ ಸುಧೀರ್‌ ಹಾಗೂ ಸೋನಲ್ ದಂಪತಿಗಳಿಂದ ಗುಡ್ ನ್ಯೂಸ್ ಯಾವಾಗ ಕೊಡುತ್ತಾರೆ. ಮಾಲತಿ ಸುಧೀರ್‌ ಅವರು ಯಾವಾಗ ಅಜ್ಜಿ ಆಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಎಲ್ಲದಕ್ಕೂ ದೇವರು ಕಣ್ಣು ಬಿಡಬೇಕು. ಇನ್ನು ಈಗ ಮದುವೆಯಾಗಿದ್ದಾರೆ. ನಮಗೂ ಅಜ್ಜಿಯಾಗಬೇಕು ಎನ್ನುವ ಆಸೆ ತುಂಬಾ ಇದೆ. ಆದರೆ ಸಮಯ ಬೇಕು ಅದಕೆಲ್ಲಾ. ಹುಟ್ಟಿದ ತಕ್ಷಣವೇ ಮಗು ಕೈಗೆ ಸಿಗುವುದಿಲ್ಲ. ಹನ್ನೆರಡು ತಿಂಗಳು ಕಾಯಲೇಬೇಕಾ. ಅದೇ ರೀತಿ ಕಾಯುತ್ತಿದ್ದೇವೆ' ಎಂದರು.

ದರ್ಶನ್ ಬಗ್ಗೆ ಮಾಲತಿ ಸುಧೀರ್‌ ಹೇಳಿದ್ದೇನು?

ನಟ ದರ್ಶನ್‌ ಬಗ್ಗೆ ಮಾತನಾಡಿದ ಅವರು, ದರ್ಶನ್‌ ನನ್ನ ಮಗ. ಅವನು ಅವತ್ತು ಮಗನೇ, ಆಮೇಲೂ ನನ್ನ ಮಗನೇ, ಈಗಲೂ ನನ್ನ ಮಗನೇ, ಮುಂದೆನೂ ಮಗನೇ, ದರ್ಶನ್‌ ಯಾವತ್ತಿಗೂ ನನ್ನ ಮಗನೇ. ಅವನ ಜೊತೆಗಿನ ತಾಯಿ ಬಾಂಧವ್ಯ ಹೋಗುವುದೇ ಇಲ್ಲ. ಅವನ ಆರೋಗ್ಯ ಚೆನ್ನಾಗಿ ಆಗಬೇಕು. ಅವನು ಮತ್ತೆ ಚೆನ್ನಾಗಿ ಚೇತರಿಸಿಕೊಂಡು. ಮತ್ತೆ ಜನರಿಗೆ ಸಹಾಯ ಮಾಡುವ ಕರ್ಣ ಆಗಲಿ. ಅವನು ಕರ್ಣ ಅಲ್ಲದೇ ಚಿತ್ರರಂಗಕ್ಕೂ ಒಳ್ಳೆಯದೇ ಮಾಡಲಿ. ಒಳ್ಳೆಯದು ಮಾಡುತ್ತಿದ್ದಾನೆ.

Malathi Sudheer Talks About Tharun Sudhir Wife Sonal Monteiro Pair

ಅವನಿಂದ ಸಾವಿರಾರು ಜನ ಬದುಕುತ್ತಿದ್ದಾರೆ. ಸಿನಿಮಾ ರಂಗದವರು ಮಾತ್ರವಲ್ಲ ಹೊರಗಿನವರು ಕೂಡ ಅವನ ಹೆಸರು ಹೇಳಿಕೊಂಡು ಬದುಕುತ್ತಿದ್ದಾರೆ. ನಮಗೆ ಅಷ್ಟು ಸಹಾಯ ಮಾಡಿದರು, ಇಷ್ಟು ಸಹಾಯ ಮಾಡಿದರು ಅಂತಾ ಎಲ್ಲಾ ಹೇಳುತ್ತಾರೆ. ಅವನಿಗೆ ಕರ್ಣನ ಬುದ್ಧಿ ಬಂದಿದೆ. ಆ ಬುದ್ಧಿ ನನ್ನ ಮಗನಲ್ಲಿ ಶಾಶ್ವತವಾಗಿರಲಿ ಎಂದು ನಾನು ಹಾರೈಸುತ್ತೇನೆ ಎಂದು ಹೇಳಿದರು.

ತರುಣ್‌ ಸುಧೀರ್‌ ಮದುವೆ ಬಗ್ಗೆ ಕಣ್ಣೀರು ಹಾಕಿದ್ದ ತಾಯಿ

ತರುಣ್‌ ಸುಧೀರ್‌ ಹಾಗೂ ಸೋನಲ್ ಮೊಂಥೆರೋ ಮದುವೆಯಾಗಿ ಏಳು ತಿಂಗಳು ಕಳೆಯುತ್ತಿದ್ದು, ಮಾಲತಿ ಸುಧೀರ್‌ ಅವರು ತಮ್ಮ ಬಹು ವರ್ಷದ ಕನಸು ನನಸಾದ ಖುಷಿಯಲ್ಲಿದ್ದಾರೆ. ಆದರೆ ಈ ಹಿಂದೆ ತರುಣ್‌ ಸುಧೀರ್‌ ಅವರ ತಾಯಿ ಮಗನಿಗೆ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವ ನೋವನ್ನು ಹಂಚಿಕೊಂಡಿರುವ ವಿಡಿಯೋವೊಂದು ವೈರಲ್‌ ಆಗಿತ್ತು.

ಗೋಲ್ಡ್‌ನ್‌ ಸ್ಟಾರ್‌ ಗಣೇಶ್‌ ನಡೆಸಿಕೊಡುತ್ತಿದ್ದ ಗೋಲ್ಡ್‌ನ್‌ ಗ್ಯಾಂಗ್‌ಗೆ ತರುಣ್‌ ಸುಧೀರ್‌ ಹಾಗೂ ಅವರ ಆಪ್ತ ಗೆಳೆಯರು ಬಂದಿದ್ದ ಸಂದರ್ಭದಲ್ಲಿ ತರುಣ್‌ ಸುಧೀರ್‌ ಮಾಲತಿ ಕೂಡ ಬಂದಿದ್ದರು. ಈ ವೇಳೆ ತರುಣ್‌ ಯಾಕೆ ಮದುವೆಯಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು.

'ಅವನ ಅಣ್ಣ-ಅತ್ತಿಗೆ ಇರುತ್ತಾರೆ. ಆದರೆ ಇವನಿಗೆ ಅಂತಾ ನೀನು ಊಟ ಮಾಡಿದ್ಯಾ ಅಂತಾ ಕೇಳೋರೆ ಇಲ್ಲ. ನೀವೆಲ್ಲಾ ಎಷ್ಟು ಒಳ್ಳೆ ಸ್ನೇಹಿತರು. ನೀವೇ ಈಗ ತಂದೆ-ತಾಯಿ ಅವನಿಗೆ ಈಗ. ಆದರೆ ಅವನಿಗೆ ಸಂಗಾತಿ ಅಂತಾ ಬಂದರೆ ಒಳ್ಳೆಯದು ಅಲ್ವಾ, ನನಗೆ ಯೋಚನೆ ಆಗುತ್ತದೆ. ಇವನೇನು ಸುಂದರ ಇಲ್ವಾ, ರೂಪವಂತ ಇಲ್ವಾ, ಇವನಿಗೆ ಒಳ್ಳೆಯ ಗುಣ ಇಲ್ವಾ ಎಂದು' ನೋವು ಹೊರಹಾಕಿದ್ದರು.

'ತರುಣ್‌ ಇಂದಿನವರೆಗೂ ಒಂದು ಅಡಿಕೆ ಹೋಳನ್ನು ಕೈಯಲ್ಲಿ ಮುಟ್ಟಿಲ್ಲ. ಒಂದು ಸಿಗರೇಟು ಮುಟ್ಟಿಲ್ಲ. ಇಷ್ಟು ಒಳ್ಳೆ ಗುಣ ಇರುವ ಹುಡುಗನಿಗೆ ಒಂದು ಹೆಣ್ಣು ಯಾಕೆ ಸಿಗ್ತಿಲ್ಲ. ಇವನಿಗೆ ಯಾಕೆ ಸೆಟ್‌ ಆಗುತ್ತಿಲ್ಲ. ಪ್ರತಿ ದಿನ ರಾತ್ರಿ- ಹಗಲು ಇದೇ ಆಲೋಚನೆ ನನಗೆ. ದೇವರಲ್ಲಿ ದಿನ ಇದನ್ನೇ ಪ್ರಾರ್ಥನೆ ಮಾಡುತ್ತೇನೆ' ಎಂದು ಕಣ್ಣೀರು ಹಾಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+