ನಟ ಶಿವರಾಜ್‌ಕುಮಾರ್ ತಬ್ಬಿಕೊಂಡು ಕಿಚ್ಚ ಸುದೀಪ್‌ ಭಾವುಕ

Dr.Shivarak Kumar: ನಟ ಶಿವರಾಜ್ಕುಮಾರ್‌ ಅನಾರೋಗ್ಯ ಹಿನ್ನೆಲೆ ಅವರು ಇಂದು (ಡಿಸೆಂಬರ್ 19) ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾರೆ. ಇನ್ನು ಅಭಿಮಾನಿಗಳು ಶಿವಣ್ಣ ಬೇಗ ಹುಷರಾಗಿ ಬರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ಇದರ ನಡುವೆಯೇ ಇಂದು ಕಿಚ್ಚು ಸುದೀಪ್‌ ಶಿವರಾಜ್‌ ಕುಮಾರ್‌ ಅವರನ್ನು ಭೇಟಿಯಾಗಿ ಅವರನ್ನು ತಬ್ಬಿಕೊಂಡು ಭಾವುಕರಾದರು ಎಂದು ತಿಳಿದುಬಂದಿದೆ.

ನಟ ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಅಣ್ಣ-ತಮ್ಮಂದಿರಂತೆ ಮೊದಲಿನಿಂದಲೂ ಆತ್ಮೀಯತೆಯಿಂದ ಇದ್ದಾರೆ. ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಅವರನ್ನು ಗೀತಾಕ್ಕ ಎಂದೇ ಕರೆಯುವ ಸುದೀಪ್ ಇಬ್ಬರ ಮೇಲೆ ಅಷ್ಟೇ ಅಪಾರ ಗೌರವ ಹೊಂದಿದ್ದಾರೆ. ಇನ್ನು ಇಂದು ಅನಾರೋಗ್ಯ ಹಿನ್ನೆಲೆ ಅಮೆರಿಕಾಗೆ ಚಕಿತ್ಸೆಗೆಂದು ತೆರಳುತ್ತಿರುವ ನಟ ಶಿವಕುಮಾರ್‌ ಮನೆಗೆ ಭೇಟಿ ನೀಡಿದ ಕಿಚ್ಚ ಸುದೀಪ್ ಕೆಲವೊತ್ತು ಅವರೊಂದಿಗೆ ಮಾತನಾಡಿದರು. ಬಳಿಕ ಪ್ರೀತಿಯ ಅಪ್ಪುಗೆ ನೀಡಿದ್ದು, ಈ ವೇಳೆ ಸುದೀಪ್ ಭಾವುಕರಾದರು ಎಂದು ತಿಳಿದುಬಂದಿದೆ.

Kiccha Sudeep Emotional Hug to Actor Shiva Rajkumar

ಮತ್ತೊಂದೆಡೆ ಚಿಕಿತ್ಸೆಗಾಗಿ ಅಮೆರಿಕಗೆ ತೆರಳುತ್ತಿರುವ ಶಿವಣ್ಣ ಬೇಗ ಹುಷಾರಾಗಿ ಬರಲಿ ಎಂದು ಅಭಿಮಾನಿಗಳು ಸಹ ಪ್ರಾರ್ಥಿಸಿದ್ದಾರೆ. ಅಲ್ಲದೆ, ಕುಟುಂಬಸ್ಥರು, ಸಿನಿ ರಂಗದ ಗಣ್ಯರು ಹಾಗೂ ರಾಜಕಾರಣಿಗಳು ಸಹ ಶಿವರಾಜ್‌ಕುಮಾರ್‌ ಮನೆಗೆ ಭೇಟಿ ನೀಡಿ ಅವರೊಂದಿಗೆ ಮಾತನಾಡಿದರು.

ಬಿ.ಸಿ.ಪಾಟೀಲ್ ಸಹ ಶಿವರಾಜ್ ಕುಮಾರ್ ನಿವಾಸಕ್ಕೆ ತೆರಳಿ ಅವರಿಗೆ ಹೂಗುಚ್ಛ ನೀಡಿ ಶೀಘ್ರ ಗುಣಮುಖವಾಗಿ ಬನ್ನು ಶುಭ ಹಾರೈಸಿದ್ದಾರೆ. ಈ ವೇಳೆ ಸಚಿವ ಮಧು ಬಂಗಾರಪ್ಪ ಕೂಡ ಶಿವಣ್ಣ ಅವರ ಮನೆಯಲ್ಲೇ ಇದ್ದರು. ಮಧು ಬಂಗಾರಪ್ಪ ಶಿವಣ್ಣ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರ ಸಹೋದರರಾಗಿದ್ದಾರೆ. ನಟ ವಿನೋದ್ ರಾಜ್​ ಕುಮಾರ್ ಸಹ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಕೆವವೊತ್ತು ಮಾತಾಡಿದರು. ಹೀಗೆ ಸಿನಿ ರಂಗ ಹಾಗೂ ರಾಜಕೀಯ ಗಣ್ಯರು ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎಂದು ಶಿವಣ್ಣಗೆ ಶುಭಹಾರೈಸಿದ್ದಾರೆ.

ಈಗಾಗಲೇ ಶಿವರಾಜ್ ಕುಮಾರ್ ಅವರು ತಮ್ಮ ಅನಾರೋಗ್ಯದ ಬಗ್ಗೆ ಮಾಧ್ಯಮದವರ ಬಳಿ ಹೇಳಿಕೊಂಡಿದ್ದರು. ಅದರ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನವನ್ನೂ ಪಡೆದರು. ಈ ವೇಳೆ ಶಿವಣ್ಣ ಮತ್ತು ಪತ್ನಿ ಗೀತಾ ಶಿವರಾಜ್‌ಕುಮಾರ್‌ ಸಮೇತ ತಿಮ್ಮಪ್ಪನಿಗೆ ಮುಡಿಕೊಟ್ಟಿದ್ದರು.

ಡಿಸೆಂಬರ್ 24ರಂದು ನನ್ನ ಸರ್ಜರಿ ಇದೆ. ಇದಾದ ಬಳಿಕ ಅಮೆರಿಕಾದಲ್ಲಿಯೇ ಈ ಚಿತ್ರ ನೋಡುತ್ತೇನೆ ಎಂದು ಈ ಹಿಂದೆ ಶಿವರಾಜ್‌ಕುಮಾರ್‌ ಹೇಳಿಕೊಂಡಿದ್ದರು. ಈ ಚಿತ್ರದ ವಿಷಯಗಳನ್ನ ನೋಡುತ್ತಿರುತ್ತೇನೆ. ಟ್ರೋಲ್ ಸಾಂಗ್ ಮಾಡಿರಿವ ನಟಿ ರೀಷ್ಮಾ ನಾಣಯ್ಯ ಚೆನ್ನಾಗಿಯೇ ನಟನೆ ಮಾಡಿದ್ದಾರೆ. ಉಪೇಂದ್ರ ಅವರು ಓಂ ಚಿತ್ರ ಮಾಡಿದ್ದಾರೆ. ಓಂ-2 ಚಿತ್ರ ಮಾಡುವ ಕನಸಿದೆ. ಅದು ಕೂಡ ಆದಷ್ಟು ಬೇಗ ಆಗಲಿ. ಆದರೆ, ಇದೀಗ ಯುಐ ಸಿನಿಮಾ ಮಾಡಿದ್ದು, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಎನ್ನುವ ನಂಬಿಕೆ ಕೂಡ ಇದೆ ಎಂದು ಹೇಳಿದ್ದಾರೆ.

ಅಲ್ಲದೆ, ನಟ ಶಿವರಾಜ್‌ಕುಮಾರ್‌ ಅವರೇ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದು, ಬಚ್ಚಿಟ್ಟುಕೊಳ್ಳುವುದೇನಿಲ್ಲ. ನನ್ನ ಆರೋಗ್ಯದ ಆರಂಭದಲ್ಲಿ ನನಗೂ ಭಯ ಆಯ್ತು. ಬಳಿಕ ಮನೆಯವರು ಧೈರ್ಯ ತುಂಬಿದರು. ಆಪರೇಷನ್ ಮಾಡಿಸಬೇಕಿದೆ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+