Kiccha Sudeep: 30 ವರ್ಷಗಳ ಸಿನಿ ಪಯಣ: ವಿಶೇಷ ಪೋಸ್ಟ್ ಹಂಚಿಕೊಂಡು ಧನ್ಯವಾದ ಹೇಳಿದ ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಇಂದಿಗೆ ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ಅವರು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇಲ್ಲಿವರೆಗೆ ತನಗೆ ಸಾಥ್ ನೀಡಿದ ಚಿತ್ರರಂಗ ಹಾಗೂ ತನ್ನ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. "30 ವರ್ಷಗಳು, ಅಂತ್ಯವಿಲ್ಲದ ಕೃತಜ್ಞತೆ" ಎಂದು ಆರಂಭವಾಗುವ ಭಾವನಾತ್ಮಕ ಸಂದೇಶದ ಮೂಲಕ, ತಮ್ಮ ಮೂರು ದಶಕಗಳ ಸಿನಿ ಪಯಣವನ್ನು ನೆನೆದು ಹೃದಯಸ್ಪರ್ಶಿ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಎಂಬ ಅದ್ಭುತ ಲೋಕದಲ್ಲಿ ಮೂರು ದಶಕಗಳನ್ನು ಪೂರೈಸಿ ನಿಂತಿರುವ ಈ ಕ್ಷಣದಲ್ಲಿ ನನ್ನ ಹೃದಯ ತುಂಬಿ ತುಳುಕುತ್ತಿದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಕನಸುಗಳು, ಸಂಶಯಗಳು, ಅಸಂಖ್ಯಾತ ನಿರೀಕ್ಷೆಗಳೊಂದಿಗೆ ಬಂದಿದ್ದ ಒಂದು ಹುಡುಗನಿಂದ ಇಲ್ಲಿಯವರೆಗೆ ಬಂದ ಈ ಪಯಣ ನಾನು ಊಹಿಸಿರದಷ್ಟು ದೊಡ್ಡದಾಗಿದೆ. ಇದಕ್ಕೆ ಕಾರಣ ನೀವೆಲ್ಲರೂ ಎಂದು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

"ಅಭಿಮಾನಿಗಳು ನನ್ನ ಶಕ್ತಿ" ನನ್ನನ್ನು ಪ್ರತಿದಿನ ಮುಂದಕ್ಕೆ ತಳ್ಳುವ ಶಕ್ತಿ, ಉತ್ಸಾಹ ಮತ್ತು ಪ್ರೇರಣೆ ನನ್ನ ಅಭಿಮಾನಿಗಳೇ. ನಿಮ್ಮ ಪ್ರೀತಿ ಇಲ್ಲದೆ ನಾನು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಿರ್ದೇಶಕರು, ಕಥೆಗಾರರಿಗೆ ವಿಶೇಷ ಕೃತಜ್ಞತೆ ಹೇಳಿರುವ ಕಿಚ್ಚ, ತಮ್ಮ ಕಥೆಗಳ ಹೊಣೆಗಾರಿಕೆಯನ್ನು ನನ್ನ ಮೇಲೆ ಇಟ್ಟು ನಂಬಿದ ನಿರ್ದೇಶಕರು ಮತ್ತು ಬರಹಗಾರರಿಗೆ ಧನ್ಯವಾದ ಹೇಳಿದ್ದಾರೆ. ನನ್ನೊಳಗಿನ ಹೊಸತನವನ್ನು ಹುಡುಕಿ ಹೊರತೆಗೆದಿದ್ದಕ್ಕಾಗಿ ಅವರಿಗೆ ಕೃತಜ್ಞತೆಗಳು ಎಂದಿದ್ದಾರೆ.
ನಿರ್ಮಾಪಕರು ಮತ್ತು ತಾಂತ್ರಿಕ ತಂಡಕ್ಕೂ ಧನ್ಯವಾದ ತಿಳಿಸಿದ್ದಾರೆ. ಧೈರ್ಯ ಮತ್ತು ನಂಬಿಕೆಯೊಂದಿಗೆ ಕನಸುಗಳಿಗೆ ಜೀವ ನೀಡಿದ ನಿರ್ಮಾಪಕರಿಗೆ, ಜೊತೆಗೆ ಸಹನಟರು ಹಾಗೂ ತಾಂತ್ರಿಕ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಗೌರವ ಸಲ್ಲಿಸಿದ್ದಾರೆ. ಲೈಟ್ ಬಾಯ್ಸ್‌ನಿಂದ ಹಿಡಿದು ಕ್ಯಾಮೆರಾಮನ್, ಆರ್ಟ್, ಕಾಸ್ಟ್ಯೂಮ್, ಸ್ಪಾಟ್ ಬಾಯ್ಸ್, ಎಡಿಟರ್‌ಗಳವರೆಗೆ ಸಿನಿಮಾವೆಂದರೆ ಸಂಪೂರ್ಣ ತಂಡದ ಪರಿಶ್ರಮ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗ ನನಗೆ ಗುರುತು ನೀಡಿದೆ
ಮಾಧ್ಯಮಗಳು ಮತ್ತು ಕನ್ನಡ ಚಿತ್ರರಂಗಕ್ಕೆ ವಿಶೇಷ ಸ್ಥಾನ ಎಂದಿರುವ ಸುದೀಪ್, ಟೆಲಿವಿಷನ್ ಮತ್ತು ಮಾಧ್ಯಮ ನನ್ನ ಧ್ವನಿಯನ್ನು ಜನರಿಗೆ ತಲುಪಿಸಿದವು. ಪ್ರಶ್ನಿಸಿದವು, ಆಚರಿಸಿದವು ಹಾಗೂ ನನ್ನ ಬೆಳವಣಿಗೆಗೆ ಕಾರಣವಾದವು ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗ ನನಗೆ ಗುರುತು, ಹೆಮ್ಮೆ ಮತ್ತು ಮನೆ ನೀಡಿದೆ. ಕನ್ನಡ ಸಿನಿಮಾವನ್ನು ನಾನು ಸದಾ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ ಎಂದು ಭಾವುಕರಾಗಿ ಹೇಳಿದ್ದಾರೆ.
30 years. Infinite gratitude. 🎬❤️
— Kichcha Sudeepa (@KicchaSudeep) January 31, 2026
Standing here after three decades in this crazy, beautiful film world, my heart is just… full. From a boy with dreams, doubts and wild hope to whatever this has become — it’s bigger than I ever imagined because of YOU.
Fans — you’re my… pic.twitter.com/4gipzvWKeg
ಎಲ್ಲವನ್ನೂ ಮರಳಿ ಕೊಡುತ್ತೇನೆ
ಈ ಎಲ್ಲ ಯಶಸ್ಸಿನ ಮಧ್ಯೆಯೂ ನನ್ನನ್ನು ನೆಲೆಯಲ್ಲಿಟ್ಟವರು ನನ್ನ ಕುಟುಂಬ ಮತ್ತು ಸ್ನೇಹಿತರು. ಅವರು ನನ್ನನ್ನು ಮಾನವೀಯವಾಗಿಯೇ ಉಳಿಸಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. "ಯಶಸ್ಸು ನಮ್ಮದಲ್ಲ, 30 ವರ್ಷಗಳು ಕಲಿಸಿದ ಪಾಠ ಒಂದೇ, ಅದು ವಿನಯ. ಪ್ರತಿಯೊಂದು ಯಶಸ್ಸೂ ನಮಗೆ ಸಾಲವಾಗಿ ಬಂದದ್ದು. ಮುಂದೆಯೂ ಇನ್ನಷ್ಟು ಶ್ರಮಿಸಿ, ಕಲೆಗೆ ಗೌರವ ನೀಡಿ, ಸಿನಿಮಾ ನನಗೆ ಕೊಟ್ಟ ಎಲ್ಲವನ್ನೂ ಮರಳಿ ಕೊಡುತ್ತೇನೆ ಎಂದು ಸುದೀಪ್ ಭರವಸೆ ನೀಡಿದ್ದಾರೆ. ಕೊನೆಯಲ್ಲಿ ತುಂಬಿದ ಹೃದಯದೊಂದಿಗೆ "ನಿಮಗೆಲ್ಲ ಧನ್ಯವಾದ" ಎಂದು ಸುದೀಪ್ ತನ್ನ 30 ವರ್ಷಗಳ ಸಿನಿ ಪಯಣವನ್ನು ಮೆಲುಕು ಹಾಕಿದ್ದಾರೆ.
ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರು. ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಮತ್ತು ಟಿವಿ ನಿರೂಪಕರಾಗಿ ತಮ್ಮದೇ ಆದ ಛಾಪು ಮೂಡಿಸಿರುವ ಸುದೀಪ್, ಮೂರು ದಶಕಗಳ ಕಾಲ ನಿರಂತರವಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ. 2001ರಲ್ಲಿ ಬಿಡುಗಡೆಯಾದ 'ಹುಚ್ಚ' ಸಿನಿಮಾ ಸುದೀಪ್ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು. ಈ ಚಿತ್ರದ ಅಪಾರ ಯಶಸ್ಸಿನ ಬಳಿಕ ಅವರು 'ಕಿಚ್ಚ' ಎಂಬ ಬಿರುದನ್ನು ಪಡೆದು ಮನೆಮಾತಾದರು. ಕನ್ನಡಕ್ಕೆ ಮಾತ್ರ ಸೀಮಿತವಾಗದೇ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಗಳಲ್ಲೂ ಸುದೀಪ್ ತಮ್ಮ ಛಾಪು ಮೂಡಿಸಿದ್ದಾರೆ.
-
Ramkumar: ರಾಜ್ಕುಮಾರ್ ಕುಟುಂಬದಲ್ಲಿ ಶಿವಣ್ಣನ ಜೊತೆ ನನ್ನ ಮೊದಲ ಸ್ನೇಹ, ನಂತರ ಪೂರ್ಣಿಮಾ ಪರಿಚಯವಾದ್ರು: ನಟ ರಾಮ್ಕುಮಾರ್ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ












Click it and Unblock the Notifications