ಡಿ-ಬಾಸ್ ದರ್ಶನ್ & ನಿರ್ದೇಶಕ ದಿನಕರ್ ಇಲ್ಲದಿದ್ದರೆ ‘ಉಗ್ರಂ’ ರಿಲೀಸ್ ಕೂಡ ಆಗುತ್ತಿರಲಿಲ್ಲವಂತೆ!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಶಾಂತ್ ನೀಲ್ & ಕೆಜಿಎಫ್ ಸಿನಿಮಾ ಹೆಸರು ಎಂದೆಂದಿಗೂ ಅಳಿಸಲಾಗದು. ಪ್ರಶಾಂತ್ ನೀಲ್ ಅವರು ಸದ್ಯಕ್ಕೆ ಒಂದು ಸಿನಿಮಾಗೆ ಕೋಟಿ.. ಕೋಟಿ.. ದುಡಿಯುತ್ತಾರೆ. ಆದರೆ ಇದೇ ಪ್ರಶಾಂತ್ ನೀಲ್ ಅವರು ತಮ್ಮ ಮೊದಲ ಸಿನಿಮಾ ಅಂದ್ರೆ 'ಉಗ್ರಂ' ಮಾಡುವಾಗ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದರಂತೆ ಗೊತ್ತಾ? ನೀಲ್ ಈ ಸಿನಿಮಾಗೆ ಮನೆಯನ್ನೇ ಮಾರಿಕೊಂಡಿದ್ದರಂತೆ, ಅದನ್ನ ಸ್ವತಃ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ಅವರ ಕೆಪಾಸಿಟಿ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಗೆ ಗೊತ್ತಾಗಿದ್ದು ಇವರ ಜೊತೆ ಸಿನಿಮಾ ಮಾಡಲು ಸ್ಟಾರ್ ಹೀರೋಗಳು ಸಾಲಾಗಿ ನಿಲ್ಲುತ್ತಾರೆ. ಆದರೆ ಇದೇ ಪ್ರಶಾಂತ್ ನೀಲ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ದಿನಗಳಲ್ಲಿ ಭಾರಿ ಸಂಕಷ್ಟಗಳನ್ನ ಎದುರಿಸಿದ್ದರಂತೆ. ಅದು ಅಂತಿಂತಹ ಕಷ್ಟಗಳು ಅಲ್ಲ, ಉಗ್ರಂ ಸಿನಿಮಾ ನಿರ್ಮಿಸೋದಕ್ಕೆ ಸ್ವತಃ ಪ್ರಶಾಂತ್ ನೀಲ್ ತಮ್ಮ ಮನೆಯನ್ನೇ ಮಾರಿಕೊಂಡಿದ್ದರು ಎನ್ನುವ ಸುದ್ದಿ ಇದೀಗ ಸಂಚಲನ ಸೃಷ್ಟಿಸಿದೆ. 'ಸಲಾರ್' ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ನೀಡಿದ ಇಂಟರ್‌ವ್ಯೂವ್ ವೇಳೆ ಈ ಸ್ಫೋಟಕ ವಿಚಾರ ಬಯಲಾಗಿದೆ. ಜೊತೆಯಲ್ಲಿ ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್ ದರ್ಶನ್ ಬಗ್ಗೆಯು ಮಾತನಾಡಿದ್ದಾರೆ ನೀಲ್.

'ದರ್ಶನ್ ಅವರು ಇರದೇ ಇದ್ದಿದ್ದರೆ...'
ಹೌದು, ಪ್ರಶಾಂತ್ ನೀಲ್ ಇದೀಗ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಶ್ರೀಮುರಳಿ ಅವರ ಜೊತೆ 'ಉಗ್ರಂ' ಮಾಡುವಾಗ ತುಂಬಾ ಕಷ್ಟ ಎದುರಾಗಿತ್ತಂತೆ. ಅದರಲ್ಲೂ ಆಗ ನಟನಾಗಿ ಶ್ರೀಮುರಳಿ ಅವರಿಗೂ ದೊಡ್ಡ ಹಿನ್ನಡೆ ಆಗುತ್ತಿತ್ತು. ಹೀಗಿದ್ದಾಗ ಶ್ರೀಮುರಳಿ ಅಭಿನಯಿಸಿದ್ದ 'ಉಗ್ರಂ' ಸಿನಿಮಾ ರಿಲೀಸ್ ಮಾಡೋದು ಕೂಡ ಕಷ್ಟವಾಗಿತ್ತಂತೆ. ಇಂತಹ ಸಮಯದಲ್ಲಿ, ಪ್ರಶಾಂತ್ ನೀಲ್ ಅವರಿಗೆ ಸಹಾಯ ಮಾಡಿದ್ದು ಯಾರು ಗೊತ್ತಾ? ಒನ್ಸ್ ಅಗೈನ್ ಡಿ-ಬಾಸ್ ದರ್ಶನ್ ಅನ್ನೋದನ್ನ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.
ಸಿನಿಮಾಗಾಗಿ ಮನೆ ಮಾರಿಕೊಂಡರು..
ದರ್ಶನ್ ಸರ್ ಮತ್ತು ದಿನಕರ್ ಸರ್ ಸಹಾಯ ಮಾಡದೇ ಇದ್ದಿದ್ದರೆ 'ಉಗ್ರಂ' ಸಿನಿಮಾವನ್ನ ರಿಲೀಸ್ ಮಾಡೋದು ಕೂಡ ಕಷ್ಟ ಆಗುತ್ತಿತ್ತು. ಆದರೆ ಅವರು ಮಾಡಿದ ಸಹಾಯ ನಮಗೆ ದೊಡ್ಡ ಬಲ ನೀಡಿತ್ತು ಎಂದಿದ್ದಾರೆ ಪ್ರಶಾಂತ್ ನೀಲ್. ಇದೇ ಸಮಯದಲ್ಲಿ ತಮಗೆ ಅಲ್ಲಿ ಎದುರಾದ ಸಂಕಷ್ಟಗಳಿಂದ, ಪ್ರಶಾಂತ್ ನೀಲ್ ಹೇಗೆ ಮನೆಯನ್ನೇ ಮಾರಿಕೊಂಡರು ಎಂಬ ಮಾಹಿತಿಯನ್ನೂ ಶೇರ್ ಮಾಡಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಅವರ ಈ ಹೇಳಿಕೆ ಮತ್ತು ನಟ ದರ್ಶನ್ & ಡೈರೆಕ್ಟರ್ ದಿನಕರ್ ಅವರ ಸಹಾಯವನ್ನು ನೆನೆಸಿಕೊಂಡ ಮಾತು ಇದೀಗ ವೈರಲ್ ಆಗುತ್ತಿದೆ.
ಕನ್ನಡಿಗರು ಸೇರಿ ನಿರ್ಮಿಸಿರುವ ಸಿನಿಮಾ
ಇನ್ನು ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸಲಾರ್' ಸಿನಿಮಾ ಇನ್ನೇನು ರಿಲೀಸ್‌ಗೆ ರೆಡಿಯಾಗಿದೆ. ನಾಳೆಯೇ 'ಸಲಾರ್' ಸಿನಿಮಾ ಸಾವಿರಾರು ಥಿಯೇಟರ್‌ಗಳಲ್ಲಿ, ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಹೀಗಾಗಿ ಕುತೂಹಲ ಕೂಡ ದುಪ್ಪಟ್ಟಾಗಿದೆ. ಫ್ಯಾನ್ಸ್‌ಗೆ ಈ ಸಿನಿಮಾ ಹಬ್ಬದೂಟ ಉಣಬಡಿಸುವ ನಿರೀಕ್ಷೆ ಇದೆ. ಕನ್ನಡ ನಿರ್ಮಾಪಕ & ಕನ್ನಡದ ನಿರ್ದೇಶಕರು ಸೇರಿ 'ಸಲಾರ್' ಸಿನಿಮಾ ನಿರ್ಮಾಣ ಮಾಡಿದ್ದಾರೆ.
'ಸಲಾರ್' ಸಿನಿಮಾಗೆ ಒಂದು ಅಂದಾಜಿನ ಪ್ರಕಾರ, 400 ಕೋಟಿ ರೂಪಾಯಿಗೂ ಹೆಚ್ಚು ಹಣ ಬಂಡವಾಳವಾಗಿ ಹಾಕಲಾಗಿದೆ. ಅಲ್ಲದೆ ಈಗಾಗಲೇ ಸಲಾರ್ ಸಾಕಷ್ಟು ದೊಡ್ಡ ಮೊತ್ತದ ಹಣ ಬಾಚಿದ್ದು, ರಿಲೀಸ್ ಆಗುವ ಮೊದಲೇ ಸೇಫ್ ಝೋನ್ ತಲುಪಿದೆ. ಈ ವಿಶೇಷ ಸಮಯದಲ್ಲಿ ಪ್ರಶಾಂತ್ ನೀಲ್ ಅವರು ನೀಡಿದ ವಿಶೇಷ ಸಂದರ್ಶನ ಕೂಡ ವೈರಲ್ ಆಗುತ್ತಿದೆ. ಅಲ್ಲದೆ ಪ್ರಶಾಂತ್ ನೀಲ್ ಉಗ್ರಂ ಸಿನಿಮಾ ಮಾಡುವಾಗ ಅನುಭವಿಸಿದ್ದ ಕಷ್ಟಗಳು ರಿವೀಲ್ ಆಗಿವೆ. ಹಾಗೇ ನೀಲ್ ಅವರ ಮೇಲಿನ ಅಭಿಮಾನಿಗಳ ಪ್ರೀತಿ ಈಗ ಮತ್ತಷ್ಟು ಹೆಚ್ಚಾಗಿದೆ.












Click it and Unblock the Notifications