Darshan Thoogudeepa: ದರ್ಶನ್‌ಗೆ ಹಲವು ವರ್ಷಗಳಿಂದ ಇರೋ ಗಂಭೀರ ಸಮಸ್ಯೆ ಬಿಚ್ಚಿಟ್ಟ ನಿರ್ದೇಶಕ
ನಟ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಅವರಿಗೆ ಬೆನ್ನುನೋವು ತೀವ್ರವಾಗಿರುವ ಕಾರಣ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಿಗೆ ಈಗಾಗಲೇ ತಿಳಿಸಿದ್ದಾರೆ. ಆದರೆ, ದರ್ಶನ್ ಅವರ ಕುರಿತು ಮತ್ತೊಂದು ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಹಲವು ವರ್ಷಗಳಿಂದ ದರ್ಶನ್ ಅವರು ಒಂದು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ. ಈ ಬಗ್ಗೆ ದರ್ಶನ್ ಬಳಗದ ವ್ಯಕ್ತಿಯೇ ಹೇಳಿದ್ದಾರೆ.
ದರ್ಶನ್ ಅವರು ನನ್ನ ಪ್ರೀತಿಯ ರಾಮು ಸಿನಿಮಾ ಪ್ರೇಮಿಗಳ ದಿನವಾದ ಇಂದು ರೀರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ದರ್ಶನ್ ಅವರು ವಿಶೇಷವಾದ ಕುರುಡನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಸಿನಿಮಾ ದರ್ಶನ್ ಅವರ ಸಿನಿ ಕೆರಿಯರ್‌ಗೆ ಒಂದು ತಿರುವು ಕೊಟ್ಟ ಸಿನಿಮಾ ಎಂದೇ ಹೇಳಲಾಗುತ್ತಿದೆ. ಅಷ್ಟರಮಟ್ಟಿಗೆ ದರ್ಶನ್ ಅವರ ಈ ಪಾತ್ರವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಈ ಸಿನಿಮಾದದಲ್ಲಿ ದರ್ಶನ್ ಅವರು ನಿಜವಾದ ಕುರುಡರಂತೆಯೇ ಅಭಿನಯಿಸಿದ್ದಾರೆ. ಅವರ ಪಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ದರ್ಶನ್ ಅವರ ಆಪ್ತ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ಶಾಕಿಂಗ್ ವಿಚಾರವೊಂದನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ದರ್ಶನ್ ಅವರು ಈ ಪಾತ್ರ ಮಾಡಿದ್ದು ಹೇಗೆ ಎಂಬುದನ್ನು ಸ್ವವಿವರವಾಗಿ ತಿಳಿಸಿದ್ದಾರೆ.
"ನನ್ನ ಪ್ರೀತಿಯ ರಾಮು ಸಿನಿಮಾ ಇಡೀ ಶೂಟಿಂಗ್ ನಡೆಯುವಾಗ ನಾನು ದರ್ಶನ್ ಅವರ ಜೊತೆಗಿದ್ದೆ. ದರ್ಶನ್ ಅವರು ಆ ಪಾತ್ರಕ್ಕಾಗಿ ಕಣ್ಣನ್ನು ಹಾಗೆ ಮಾಡಿ, ಮಾಡಿ ಪ್ರಾಕ್ಟೀಸ್ ಮಾಡಿಕೊಂಡಿದ್ರು. ಈ ಸಿನಿಮಾ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಬಂದಿತ್ತು. ಎಲ್ಲ ನಟರೂ ಆ ಪಾತ್ರದ ವೇಳೆ ಕಣ್ಣನ್ನು ನ್ಯಾಚುರಲ್ ಆಗಿ ಮಾಡಿದ್ದಾರೆ. ಆದರೆ, ದರ್ಶನ್ ಅವರ ಕಣ್ಣುಗಳು ಗೊತ್ತೇ ಆಗದಂತೆ ಅಭಿನಯಿಸುತ್ತಿದ್ದರು. ಅವರು ಆ ಪಾತ್ರಕ್ಕಾಗಿ ಅಷ್ಟು ಹೋಂ ವರ್ಕ್ ಮಾಡಿದ್ದರು" ಎಂದು ತರುಣ್ ಸುಧೀರ್ ಹೇಳಿದ್ದಾರೆ.

ಆ ಪಾತ್ರವನ್ನು ಅವರು ತುಂಬಾ ಎಫರ್ಟ್ ಹಾಕಿ ಮಾಡಿದ್ರು. ಆ ಸಿನಿಮಾ ಶೂಟಿಂಗ್ ಮುಗಿಯುವ ವೇಳೆಗೆ ದರ್ಶನ್ ಅವರ ಒಂದು ಕಣ್ಣು ಆಪರೇಷನ್ ಮಾಡಬೇಕಾಯಿತು. ಅಷ್ಟರ ಮಟ್ಟಿಗೆ ಈ ಪಾತ್ರದಿಂದ ದರ್ಶನ್ ಅವರ ಕಣ್ಣು ಡ್ಯಾಮೇಜ್ ಆಗಿತ್ತು. ಇವತ್ತಿಗೂ ದರ್ಶನ್ ಅವರಿಗೆ ಆ ಕಣ್ಣಿನ ಸಮಸ್ಯೆ ಇದೆ ಎಂದು ತರುಣ್ ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಆ ಸಿನಿಮಾಗಾಗಿ ದರ್ಶನ್ ಅಷ್ಟು ಡೆಡಿಕೇಟ್ ಮಾಡಿದ್ದರು. ಹಾಗಾಗಿ ಆ ಸಿನಿಮಾ ಮೇಲೆ ನಮಗೆಲ್ಲ ತುಂಬಾ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಮಟ್ಟಕ್ಕೆ ಆ ಸಿನಿಮಾ ರೀಚ್ ಆಗಲಿಲ್ಲ. ಆದರೆ ಅದೇ ದರ್ಶನ್ ನಟಿಸಿದ ಮತ್ತೊಂದು ಸಿನಿಮಾದಲ್ಲಿ ತುಂಬಾ ಸಿಂಪಲ್ ಆಗಿ ಅವರ ಲುಕ್ ಇತ್ತು. ನನ್ನ ಪ್ರೀತಿಯ ರಾಮು ಆಗಿ ಒಂದೆರಡು ವಾರದ ಬಳಿಕ ರಿಲೀಸ್ ಆದ ಸಿನಿಮಾ ಬ್ಲಾಕ್‌ಬಸ್ಟರ್ ಆಯ್ತು. ಅದೇ "ದಾಸ" ಸಿನಿಮಾ ಎಂದು ತರುಣ್ ಸುಧೀರ್ ಹೇಳಿದ್ದಾರೆ.












Click it and Unblock the Notifications