Anchor Anushree Wedding : ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಅನುಶ್ರೀ; ಖುಷಿಯಿಂದ ಪತ್ನಿ ಹಣೆಗೆ ಮುತ್ತಿಟ್ಟ ರೋಷನ್
ಕರಾವಳಿ ಚೆಲುವೆ. ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಇಂದು (ಆಗಸ್ಟ್ 28) ಬೆಂಗಳೂರಿನಲ್ಲಿ ಕೊಡಗಿನ ಉದ್ಯಮಿ ರೋಷನ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಹಲವು ವರ್ಷಗಳಿಂದ ಆಂಕರ್ ಅನುಶ್ರೀ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನ ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಅನುಶ್ರೀ ವಿವಾಹದ ಬಗ್ಗೆ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇಂದು (ಆಗಸ್ಟ್ 28) ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಇನ್ನೂ ಅನುಶ್ರೀ ಅವರು ತಾಳಿ ತಟ್ಟುವ ವೇಳೆ ಭಾವುಕರಾಗಿದ್ದು, ಪತ್ನಿ ಅನುಶ್ರಿಗೆ ರೋಷನ್ ಅವರು ಮುತ್ತಿಟ್ಟಿದ್ದಾರೆ.
ಗೌರಿ ಗಣೇಶ ಹಬ್ಬದಂದು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ಮೆಹೆಂದಿ ಶಾಸ್ತ್ರ, ಹಳದಿ ಶಾಸ್ತ್ರ ನೆರವೆರಿತ್ತು. ಮದುವೆ ಮಂಟಪ ಸೇರಿದಂತೆ ರೆಸಾರ್ಟ್‌ನಾದ್ಯಂತ ಹೂವಿನ ಅಲಂಕಾರ ಮಾಡಲಾಗಿತ್ತು. ಇದೀಗ ಆಂಕರ್ ಅನುಶ್ರೀ ಹಾಗೂ ರೋಷನ್ ಅವರ ವಿವಾಹ ಮಹೋತ್ಸವ ಸಂಪನ್ನಗೊಂಡಿದೆ. ಕೊಡಗು ಮೂಲದ ರಾಮಮೂರ್ತಿ ಮತ್ತು ಸಿಸಿಲಿಯಾ ಪುತ್ರ ರೋಷನ್ ಅವರನ್ನು ಅನುಶ್ರೀ ಮದುವೆಯಾಗಿದ್ದಾರೆ.

ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ನಡೆಯಿತು. ಪ್ರೀತಿಸಿದ ಹುಡುಗ ಜೊತೆಗೆ 37 ವರ್ಷದ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಖಾಸಗಿ ವಿವಾಹ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ತಾರೆಯರು ಹಾಗೂ ಆಪ್ತರು ಭಾಗಿಯಾಗಿದ್ದರು. ಅಲ್ಲದೇ ನಟ ಶಿವರಾಜ್ ಕುಮಾರ್,ಗೀತಾ ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ನಟ ರಾಜ್ ಬಿ. ಶೆಟ್ಟಿ, ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಕಾವ್ಯಾ ಶಾ, ಚೈತ್ರಾ ಜೆ. ಆಚಾರ್, ಶರಣ್, ಸೋನಲ್ ಮೊಂಥೆರೋ ಸೇರಿದಂತೆ ಅನೇಕರು ನವಜೋಡಿಗೆ ಶುಭ ಹಾರೈಸಿದರು.
ಇನ್ನೂ ಮದುವೆ ಬಳಿಕ ಅನುಶ್ರೀ ಅವರು ಮಾತನಾಡಿ, ಸಿಂಪಲ್ ಆಗಿ ಮದುವೆ ಆಗಬೇಕು ಎಂಬುದು ದೊಡ್ಡ ಆಸೆ ಆಗಿತ್ತು. ಅದರಂತೆಯೇ ಮದುವೆ ನೆರವೇರಿದೆ. ಮದುವೆ ಬಹಳ ಸುಂದರವಾಗಿ, ಸರಳವಾಗಿ ನಡೆದಿದೆ. ಬಹಳ ಕಡಿಮೆ ಜನರ ಎದುರು ನಮ್ಮಿಬ್ಬರ ವಿವಾಹ ಆಗಬೇಕು ಎಂಬುದು ಆಸೆ ಆಗಿತ್ತು. ಇವರ ಹೆಸರು ರೋಷನ್ ರಾಮಮೂರ್ತಿ. ಕುಶಾಲ ನಗರದಲ್ಲಿ ಇರುವವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಈಗ ನನ್ನ ಮದುವೆ ಆಗಿದ್ದಾರೆ. ಮದುವೆಗೆ ಬಂದಿರುವ ಎಲ್ಲರಿಗೂ ಧನ್ಯವಾದಗಳು ಎಂದು ಅನುಶ್ರೀ ಅವರು ಹೇಳಿದರು.
ನಮ್ಮದು ಸಿಂಪಲ್ ಲವ್ ಸ್ಟೋರಿ. ಅದನ್ನು ಯಾರು ಹೇಳಿದರೂ ನಂಬುತ್ತಾ ಇರಲಿಲ್ಲ. ನಾವಿಬ್ಬರು ಫ್ರೆಂಡ್ಸ್ ಆದೆವು. ನನಗೆ ಅವರು ಇಷ್ಟ ಆದರು. ಅವರಿಗೆ ನಾನು ಇಷ್ಟ ಆದೆ. ಲವ್ ಆಯಿತು. ಮದುವೆ ಆದೆವು. ರೋಷನ್ ಕೂಡ ಅಪ್ಪು ಸರ್ ಅವರನ್ನು ಬಹಳ ಇಷ್ಟಪಡುವವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ನಾವು ಭೇಟಿ ಮಾಡಿದ್ದು. ಒಂದು ಲೆಕ್ಕದಲ್ಲಿ ಅಪ್ಪು ಸರ್ ಅವರೇ ನಮ್ಮನ್ನು ಸೇರಿಸಿದ್ದಾರೆ ಎಂದು ಆಂಕರ್ ಅನುಶ್ರೀ ಹೇಳಿದ್ದಾರೆ.












Click it and Unblock the Notifications