Puneeth Rajkumar: ಅಪ್ಪು ಸಾಯುವ ಹಿಂದಿನ ದಿನ ನಡೆದಿದ್ದೇನು? ಬರ್ತಡೆ ಪಾರ್ಟಿಯ ಸತ್ಯ ಬಿಚ್ಚಿಟ್ಟ ಗುರು ಕಿರಣ್‌

ಕನ್ನಡಿಗರ ಅಚ್ಚುಮೆಚ್ಚಿನ ಅಪ್ಪು ಲಘು ಹೃದಯಾಘಾತದಿಂದ ಉಸಿರು ಚೆಲ್ಲಿದ್ದ ದಿನವನ್ನ ಎಂದಿಗೂ ಮರೆಯುವಂತಿಲ್ಲ. ನಟ ಪುನೀತ್ ರಾಜ್‌ಕುಮಾರ್ ಅನ್ನು ಎಲ್ಲರೂ 'ಡೌನ್ ಟು ಅರ್ತ್' ವ್ಯಕ್ತಿ ಎನ್ನುತ್ತಿದ್ದರು. ಸ್ಟಾರ್‌ ಪಟ್ಟವಿದ್ದರೂ ಎಲ್ಲರೊಟ್ಟಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುತ್ತಿದ್ದ ಮನುಷ್ಯ ಆದರೆ ಅವರ ಕೀರ್ತಿ ಮಾತ್ರ ದೇಶ ದಾಟಿ ವಿದೇಶಗಳಲ್ಲಿಯೂ ಹರಡಿತ್ತು. ಲಕ್ಷಾಂತರ ಅಭಿಮಾನಿ ಬಳಿಗ ಅಪ್ಪುಗಾಗಿ ಕಣ್ಣೀರು ಹಾಕಿತ್ತು. ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಕರ್ನಾಟಕದ ಚಾನೆಲ್‌ಗಳಲ್ಲಿಯಂತೂ ಸತತ ಮೂರು ದಿನದಿಂದಲೂ ಅಪ್ಪುವಿನದ್ದೇ ಮಾತು. ಅಪ್ಪು ಸಾಯುವ ಹಿಂದಿನ ದಿನ ನಡೆದಿದ್ದೇನು? ಆ ಬರ್ತಡೆ ಪಾರ್ಟಿಯಲ್ಲಿ ಆಗಿದ್ದೇನು ಎನ್ನುವ ಬಗ್ಗೆ ಸಂಗೀತ ನಿರ್ದೇಶಕ ಗುರುಕಿರಣ್‌ ಬಿಚ್ಚಿಟ್ಟಿದ್ದಾರೆ.

ಅಕ್ಟೋಬರ್‌ 28 ,1970 ರಂದು ಜನಿಸಿದವರು ಗುರು ಕಿರಣ, ತಮ್ಮ 51 ನೇ ವರ್ಷದ ಜನ್ಮದಿನವನ್ನು 2021 ರಂದು ಗುರು ಕಿರಣ್‌ ಆಚರಿಸಿಕೊಂಡರು, ಅಕ್ಟೋಬರ್‌ 28 ರಂದು ತಮ್ಮ ಮನೆಯಲ್ಲೇ ಗುರು ಕಿರಣ್‌ ಬರ್ತಡೆ ಪಾರ್ಟಿ ಆಯೋಜಿಸಿದ್ದರು. ಆ ಪಾರ್ಟಿಯಲ್ಲಿ ನಟ ಪುನೀತ್‌ ರಾಜ್‌ ಕುಮಾರ್‌ ಅವರು ಸಹ ಭಾಗವಹಿಸಿದ್ದರು. ಆದರೆ ಮಾರನೇ ದಿನವೇ ಅಪ್ಪು ಚಿರನಿದ್ರೆಗೆ ಜಾರಿದರು. ಅಂದಿನ ತಮ್ಮ ಬರ್ತಡೆ ಪಾರ್ಟಿಯಲ್ಲಿ ಏನಾಯ್ತು? ಎಂಬುದನ್ನ ಸಂಗೀತ ನಿರ್ದೇಶಕ ಗುರುಕಿರಣ್‌ ಇದೀಗ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ.

Guru Kiran reveals what happened the day before Puneeth Rajkumar died

ಅವತ್ತು ನನ್ನ ಹುಟ್ಟು ಹಬ್ಬ ನಮ್ಮ ಮನೆಯಲ್ಲಿ ಗೆಟ್‌ ಟು ಗೆದರ್‌ ಇತ್ತು. ಅಂಬರೀಶ್‌ ಇಲ್ಲ ಅಂತ ಎರಡು ವರ್ಷ ನಾನು ಸೆಲೆಬ್ರೇಷನ್‌ ಮಾಡಿರಲಿಲ್ಲ. ಅವರತ್ತು ಚಿತ್ರರಂಗದವರೂ ಎಲ್ಲರೂ ಜೊತೆ ಸೇರಿದ್ವಿ, ಸಿಕ್ಕಾಪಟ್ಟೆ ಚೆನ್ನಾಗಿತ್ತು ಆ ದಿನ ಎಂದು ಗುರು ಕಿರಣ್‌ ಹೇಳಿದ್ದಾರೆ. ಅವತ್ತು ಎಲ್ಲಾರೂ ಒಳ್ಳೆ ಸಮಯವನ್ನ ಕಳೆದ್ವಿ. ಪುನೀತ್‌ ಅವರ ಫೋನ್‌ನಲ್ಲಿ ಗಂಧದ ಗುಡಿ ಚಿತ್ರದ ಕೆಲವೊಂದು ಕ್ಲಿಪ್ಸ್‌ ಇತ್ತು. ಅದನ್ನೆಲ್ಲಾ ನಮಗೆ ಅಪ್ಪು ತೋರಿಸ್ತಾ ಇದ್ದರು. ಫ್ಯೂಚರ್‌ ಪ್ರಾಜೆಕ್ಟ್‌ ಬಗ್ಗೆ ನಾವೆಲ್ಲಾ ಮಾತಾಡ್ತಾ ಇದ್ವಿ. ನಾವು ಒಳ್ಳೆಯ ಟೈಮ್‌ ಸ್ಪೆಂಡ್‌ ಮಾಡಿದ್ವಿ ಎಂದು ಗುರು ಕಿರಣ್‌ ಅವರು ಹೇಳಿದರು.

ಇನ್ನೂ ಕಳದೆ ಒಂದು ವಾರದಿಂದ ನಟ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಬೆನ್ನು ನೋವಿತ್ತು ಅಂತ ನಂಗೆ ಆಮೇಲೆ ಗೊತ್ತಾಯಿತು. ಆದರೆ, ಇಲ್ಲಿದ್ದಾಗ ಅದೇನೂ ಗೊತ್ತಾಗಲಿಲ್ಲಿ ಎಂದು ಹೇಳಿದರು. ಇನ್ನೂ ಅವತ್ತು ನನ್ನ ಕೆಲವು ಫ್ರೆಂಡ್‌ ಸಹ ಬಂದಿದ್ದರು. ಬರೀ ಚಿತ್ರರಂಗದಿಂದಲ್ಲ.. ಬಿಸಿನೆಸ್‌ ವಲಯದರಿಂದಲೂ ನನ್ನ ಸ್ನೇಹಿತರು ಬಂದಿದ್ದರು. ಕೆಲವರನ್ನ ಪುನೀತ್‌ ಅವರೇ ಹೋಗಿ ಮಾತನಾಡಿಸಿದ್ದಾರೆ. ಹಾಯ್‌ ಐ ಆಮ್‌ ಪುನೀತ್‌ ಅಂತ. ಮಾರನೇ ದಿನ ನಿಧನವಾರ್ತೆ ಕೇಳಿದಾಗ ಎಲ್ಲರಿಗೂ ಶಾಕ್‌ ಆಗಿತ್ತು ಎಂದು ಸಂಗೀತ ನಿರ್ದೇಶಕ ಗುರುಕಿರಣ ಭಾವುಕರಾಗಿದ್ದಾರೆ.

ನನ್ನ ಬರ್ತಡೆ ದಿನ ರಾತ್ರಿ 11.30 ರವರೆಗೂ ಪುನೀತ್‌ ರಾಜ್‌ ಕುಮಾರ್‌ ಇದ್ದರು. ಕೇಕ್‌ ಕಟಿಂಗ್‌ ನಂತರ ಸ್ವಲ್ಪ ಹೊತ್ತು ಮಾತನಾಡಿದ ಬಳಿಕ ಅವರು ಹೊರಟಿದ್ದು. ಮಾರನೇ ದಿನ ನಾನು ಲೇಟಾಗಿ ಎದ್ದೆ. ಸ್ವಲ್ಪ ಹೊತ್ತಿಗೆ ಫೋನ್‌ ಬಂತು. ರೂಮರ್ಸ್‌ ಅಂದು ಕೊಂಡೆ. ಆಮೇಲೆ ಸ್ನಾನವನ್ನೂ ಮಾಡದೆ ಎದ್ದು ಹೊರೆಟೆ. ಕಣ್ಣಲ್ಲಿ ನೋಡುವವರೆಗೂ ನಂಬೋಕೆ ಆಗ್ತಿರ್ಲಿಲ್ಲ. ಹಿಂದಿನ ದಿನ ಮೀಟ್‌ ಆಗಿದ್ವಿ.ಒಳ್ಳೆಯ ಸಮಯವನ್ನ ಅವರ ಜೊತೆಗೆ ಕಳೆದಿದ್ದೆ. ಈ ತರ ಯಾರಿಗೂ ಎಕ್ಸ್‌ಪೀರಿಯೆನ್ಸ್‌ ಬರಬಾದರು ಅಂತ ಸಂಗೀತ ನಿರ್ದೇಶಕ ಗುರು ಕಿರಣ್‌ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+