Amruthadhare serial: ಗೌತಮ್-ಭೂಮಿಕಾ ಮನೆಯಲ್ಲಿ ಮಗನಿಗೆ ನಾಮಕರಣ ಶಾಸ್ತ್ರ: ಇಟ್ಟ ಹೆಸರೇನು ಗೊತ್ತಾ?
ಅಮೃತಧಾರೆ' ಧಾರಾವಾಹಿಯಲ್ಲಿ ದಿನಕ್ಕೊಂದು ಘಟನೆಗಳು ನಡೆಯುತ್ತಿವೆ. ಗೌತಮ್ ಎಂಬ ಉದ್ಯಮಿ ತನ್ನಿಗಿಂತ ಹತ್ತು ವರ್ಷ ಚಿಕ್ಕವಯಸ್ಸಿನ ಭೂಮಿಕಾ ಎಂಬ ಮಧ್ಯಮ ವರ್ಗದ ಶಾಲಾ ಶಿಕ್ಷಕಿಯನ್ನ ವಿವಾಹವಾಗುತ್ತಾನೆ. ಈ ಮದುವೆ ಪ್ರಾರಂಭದಲ್ಲಿ ಸುಲಭವಾಗಿರದೆ, ಇಬ್ಬರೂ ತಮ್ಮದೇ ಆದ ಕಾರಣಗಳಿಂದ ಈ ಸಂಬಂಧವನ್ನು ಒಪ್ಪಿಕೊಳ್ಳುತ್ತಾರೆ. ಸಮಯ ಕಳೆದಂತೆ ಅವರ ನಡುವೆ ನಿಜವಾದ ಸ್ನೇಹ, ಗೌರವ ಮತ್ತು ಪ್ರೀತಿ ಬೆಳೆಯುತ್ತದೆ.
ಮೊದಲಿನಿಂದಲೂ ಗೌತಮ್ ಕುಟುಂಬದ ಸದಸ್ಯರು ಆಸ್ತಿ ವಿಚಾರವಾಗಿ ಹಲವು ತಂತ್ರಗಾರಿಕೆಯನ್ನ ನಡೆಸಿರುತ್ತಾರೆ. ಈ ಹಿಂದೆ ಗೌತಮ್ ಮೇಲೆ ರೌಡಿಗಳು ದಾಲಿ ಮಾಡಿದ ಸಂದರ್ಭದಲ್ಲಿ ಮನೆಯವರಿಗೆ ಆಸ್ತಿಯನ್ನ ಭಾಗ ಮಾಡಿ ಹೆಚ್ಚು ಆಸ್ತಿಯನ್ನ ಭೂಮಿಕಾ ಹೆಸರಿಗೆ ಗೌತಮ್ ಬರೆದಿದ್ದರು. ಹೆಚ್ಚಿನ ಆಸ್ತಿ ಸಿಗಲಿಲ್ಲ ಎಂದು ಶಕುಂತಲಾ ಹಾಗೂ ಜೈದೇವ್ ಭೂಮಿಕಾ ಹಾಗೂ ಮಗುವನ್ನ ಕೊಲ್ಲಲು ಸಂಚು ಹಾಕಿದ್ರು. ಇದೀಗ ಎಲ್ಲಾ ಸವಾಲು ಹಾಗೂ ಕಷ್ಟಗಳನ್ನ ಎದುರಿ ಭೂಮಿಕಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ, ಕುತಂತ್ರಿಗಳು ಹೆಣ್ಣು ಮಗುವನ್ನ ಕಿಡ್ನಾಪ್ ಮಾಡಿದ್ದು, ಇದೀಗ ಗೌತಮ್ ಮನೆಯಲ್ಲಿ ನಾಮಕರಣ ಸಂಭ್ರಮ ಶಾಸ್ತ್ರ ಜೋರಾಗಿದೆ.

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಹಾಗೂ ಭೂಮಿಕಾ ದಂಪತಿಗೆ ಮಗು ಜನಿಸಿದ್ದು, ಇದರಿಂದಾಗಿ ಇಡೀ ಕುಟುಂಬದಲ್ಲಿ ಖುಷಿಯ ವಾತಾವರಣ ಮೂಡಿದೆ. ಇದೀಗ ಮಗುವಿಗೆ ನಾಮಕರಣ ಶಾಸ್ತ್ರ ನಡೆದಿದೆ. ಮಗುವಿಗೆ ಏನು ಹೆಸರು ಇಡಬೇಕು ಎಂಬ ವಿಚಾರವನ್ನು ಇಷ್ಟು ದಿನ ಗುಟ್ಟಾಗಿಯೇ ಇಡಲಾಗಿತ್ತು.ಆದರೆ, ಇದೀಗ ರಿವೀಲ್ ಮಾಡಲಾಗಿದೆ. ಸಿಂಪಲ್ ಆಗಿ ನಾಮಕರಣ ಶಾಸ್ತ್ರ ನಡೆಸಲಾಗಿದೆ.
ಗೌತಮ್ ಮತ್ತು ಭೂಮಿಕಾ ದಂಪತಿಗಳು ತಮ್ಮ ಮಗನಿಗೆ ನಾಮಕರಣ ಶಾಸ್ತ್ರ ನಡೆದಿದೆ. ಭೂಮಿಕಾ ಹಾಗೂ ಗೌತಮ್ ಮಗನಿಗೆ ಯಾವ ಹೆಸರಿಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದರು. ಹಳೆಯ ಸಂಪ್ರದಾಯದಲ್ಲಿ ತಾತನ ಹೆಸರನ್ನು ಮೊಮ್ಮಕ್ಕಳಿಗೆ ಇಡಲಾಗುತ್ತದೆ. ಗೌತಮ್ ತಂದೆಯ ಹೆಸರು ರಘುವೀರ್ ದೀವಾನ್. ಇಲ್ಲೂ ಸಹ ಗೌತಮ್ ಅವರ ತಂದೆ ರಘುವೀರ್ ಎಂಬ ಹೆಸರಿಡಲು ಯೋಚಿಸಲಾಗಿತ್ತು. ಆದರೆ, ಮನೆಯವರು ಆ ಹೆಸರು ಹಳೆಯ ಹೆಸರು ಎಂದು ತಿರಸ್ಕರಿಸಲಾಯಿತು
ಮಗನ ನಾಮಕರಣ ಶಾಸ್ತ್ರ ಎಂದು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಭೂಮಿಕಾ ಮಗನ ನಾಮಕರಣ ಶಾಸ್ತ್ರ ಎಂದು ಖುಷಿಯಲ್ಲಿದ್ದಾರೆ. ಒಂದು ಕಡೆ ಮಗುವಿಗೆ ನಾಮಕರಣ ಶಾಸ್ತ್ರ ನಡೆಯುತ್ತಿದ್ದರೆ, ಮತ್ತೊಂದು ಕಡೆ ಗೌತಮ್ ಗೆ ಮಗಳು ಇಲ್ಲ ಎಂಬ ಬೇಸರ ಮೂಡಿದೆ. ಈ ಸಂದರ್ಭದಲ್ಲಿ ಮಗಳು ನಮ್ಮ ಜೊತೆಯಲ್ಲಿದ್ದರೇ ಇನ್ನಷ್ಟು ಅದ್ದೂರಿಯಾಗಿ ನಾಮಕರಣ ಶಾಸ್ತ್ರ ಮಾಡಬಹುದಿತ್ತು ಎನ್ನುವ ಚಿಂತೆ ಗೌತಮ್‌ಗೆ ಇದೆ. ಮಗನಿಗೆ ಯಾವ ಹೆಸರಿಡಬೇಕು ಎಂಬುದು ಗೌತಮ್ ಹಾಗೂ ಭೂಮಿಕಾಗೆ ಬಿಡಲಾಗಿತ್ತು. ಹೀಗಾಗಿ ಇಬ್ಬರು ಚರ್ಚೆ ಮಾಡಿ ಒಂದು ಹೆಸರು ನಿರ್ಧರಿಸೋದಾಗಿ ಹೇಳಿದರು.
ನಾಮಕರಣ ಶಾಸ್ತ್ರದಲ್ಲಿ ಗೌತಮ್ ಹಾಗೂ ಭೂಮಿಕಾ ಸೇರಿ ಒಂದು ಹೆಸರನ್ನು ಆಯ್ಕೆ ಮಾಡಿದರು. ಆ ಹೆಸರೇ ಆಕಾಶ್. ಈ ಹೆಸರು ಕೇಳಿ ಮನೆಯವರೆಲ್ಲರೂ ಖುಷಿ ಪಟ್ಟರು. ಅಳಿಯ ಗೌತಮ್ ಹೆಸರು ಸೆಲೆಕ್ಟ್ ಮಾಡಿರುವುದು ಖುಷಿಯಾಗಿದೆ ಎಂದು ಭೂಮಿಕಾ ತಾಯಿ ಹೇಳಿದರು. ಮಗನ ನಾಮಕರಣ ಶಾಸ್ತ್ರದಲ್ಲೂ ಗೌತಮ್ ಗೆ ನೋವು ಕಾಡುತ್ತಿತ್ತು. ಮಗನ ನಾಮಕರಣ ಶಾಸ್ತ್ರದ ಜೊತೆಗೆ ಮಗಳ ನಾಮಕರಣವು ಆಗುತ್ತಿತ್ತು ಎಂದು ಗೌತಮ್ ಹಾಗೂ ಗೌತಮ್ ಸ್ನೇಹಿತ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications