Guru Prasad: ಗುರು ಪ್ರಸಾದ್ ಆತ್ಮಹ*ಗೆ ಟ್ವಿಸ್ಟ್: ಕೊನೆಯ ಆಡಿಯೋ ವೈರಲ್!
ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರ ಆತ್ಮಹ* ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್‌ವೊಂದು ಬಂದಿದೆ. ಗುರುಪ್ರಸಾದ್ ಅವರು ಆತ್ಮಹ* ಮಾಡಿಕೊಳ್ಳುವುದಕ್ಕೆ ಹಿಂದಿನ ದಿನ ಮಾತನಾಡಿದ ಆಡಿಯೋ ಇದು ಎಂದು ಹೇಳಲಾಗಿದ್ದು. ಕನ್ನಡ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಗುರುಪ್ರಸಾದ್ ಅವರು ಈಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಕನ್ನಡಕ್ಕೆ ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದ ಅವರ ಕೊನೆಯ ಸಿನಿಮಾ ಮಕಾಡೆ ಮಲಗಿತ್ತು. ಕೊನೆಯ ಸಿನಿಮಾದಲ್ಲಿ ಸಾಕಷ್ಟು ಡಬಲ್ ಮೀನಿಂಗ್ ಡೈಲಾಗ್‌ಗಳು ಇದ್ದವು ಎಂದು ಕನ್ನಡಿಗರು ಅಸಮಾಧಾನ ಹೊರ ಹಾಕಿದ್ದರು. ಆದರಿಂದ ಅವರು ನೊಂದಿದ್ದರು ಎಂದು ಹೇಳಲಾಗಿತ್ತು. ಅಲ್ಲದೆ ಅವರ ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿತ್ತು. ಇದೀಗ ಹೊಸ ಆಡಿಯೋದಲ್ಲಿ ಬೇರೆಯದೇ ವಿಷಯವಿದೆ.
ನಟ ಗುರು ಪ್ರಸಾದ್ ಅವರ ಸಾವಿನ ನಂತರವೂ ಅವರ ಜೀವನ ಕೆಲವೊಂದು ಕಹಿ ಹಾಗೂ ಸುದ್ದಿಗಳು ಆಗಾಗ್ಗೆ ಹೊರ ಬರುತ್ತಲ್ಲೇ ಇವೆ. ಇದೀಗ ಅವರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ ಎದ್ದೇಳು ಮಂಜುನಾಥ 2 ಚಿತ್ರಕ್ಕೆ ಅವರ ಪತ್ನಿಯೇ ತಡೆಯೊಡುತ್ತಿರುವುದು ಹಾಗೂ ಅವರು ಆತ್ಮಹ* ಮಾಡಿಕೊಳ್ಳುವುದಕ್ಕಿಂತ ಅವರ ಪತ್ನಿಯೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗುತ್ತಿದೆ. ಅವರ ಪತ್ನಿ ಸುಮಿತ್ರ ಎನ್ನುವವರೊಂದಿಗೆ ಕೊನೆಯ ದಿನ ಮಾತನಾಡಿದ ಆಡಿಯೋ ವೈರಲ್ ಆಗಿದೆ. ಆತ್ಮಹತ್ಯೆ ಹಾಗೂ ಹಣಕಾಸಿನ ಸಮಸ್ಯೆಯ ಬಗ್ಗೆ ಅವರು ಅತ್ಯಂತ ನೋವಿನಿಂದ ಮಾತನಾಡಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಸಿನಿಮಾ ಆಗಿರುವ ಎದ್ದೇಳು ಮಂಜುನಾಥ 2ರ ಬಿಡುಗಡೆಗೆ ಅವರ ಪತ್ನಿ ತಡೆಯಾಜ್ಞೆ ತಂದಿದ್ದಾರೆ ಎಂದು ವರದಿಯಾಗಿದೆ. ಗುರು ಅವರ ಸಿನಿಮಾ ರಿಲೀಸ್ ಮಾಡಬಾರದು ಎಂದು ಅವರು ಒತ್ತಾಯಿಸಿದ್ದರೆ. ಇದೇ ಸಮಯದಲ್ಲಿಯೇ ಆಡಿಯೋ ಸಹ ವೈರಲ್ ಆಗಿದೆ. ಈ ಎರಡೂ ಘಟನೆಗಳು ಒಂದರ ಹಿಂದೆ ನಡೆದಿರುವುದು ಸಹ ಇದೀಗ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಆಡಿಯೋವನ್ನು ವೈರಲ್ ಮಾಡಿದವರು ಯಾರು, ಈಗ ಯಾಕೆ ಆಡಿಯೋ ವೈರಲ್ ಆಗುತ್ತಿದೆ ಎನ್ನುವ ಪ್ರಶ್ನೆಯೂ ಎದುರಾಗಿದೆ.
ಸಾವಿಗೂ ಹಿಂದಿನ ದಿನ ಗುರು - ಸುಮಿತ್ರಾ ಆಡಿಯೋ ವೈರಲ್!
ಗುರು ಅವರು ಸಾವನ್ನಪ್ಪುವ ಒಂದು ದಿನ ಮೊದಲು ಅವರ ಪತ್ನಿಯೊಂದಿಗೆ ಜಗಳವಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ವೈರಲ್ ಆಗಿದೆ. ಸಾವಿಗೂ ಮುನ್ನ ಅವರ ಪತ್ನಿ ಹಾಗೂ ಗುರುಪ್ರಸಾದ್ ಅವರ ನಡುವೆ ವಾಗ್ವಾದ ನಡೆದಿರುವುದು ಬಹಿರಂಗವಾಗಿದೆ.
ಗುರು ಪ್ರಸಾದ್: ನಿನಗೆ ಮತ್ತೆ ಮಗುವಿಗೆ ಸಾಯೋಕು ಮುಂಚೆ ಏನಾದ್ರು ಮಾಡಿಟ್ಟು ಸಾಯ್ತಿನಿ. ಇಲ್ಲಿ ಈಗ ನಾನು ಒಂದೊಂದು ರೂಪಾಯಿಗೂ ಒದ್ದಾಡ್ತಿದೀನಿ. ಸ್ವಲ್ಪ ತಾಳ್ಮೆಯಿಂದ ಇರು.
ಸುಮಿತ್ರಾ: ನಿಮಗೆ ತೊಂದರೆ ಕೊಡ್ಬಾರದು ಅಂತಲೇ ನಾನು ಜಗಳ ಮಾಡಿಕೊಳ್ಳದೆ ಹೊರಗೆ ಬಂದಿದ್ದೇನೆ. ನೀವು ಬೇಕಾದರೆ ಮಗುವಿಗೆ ಏನಾದರೂ ಮಾಡಿ. ನಿಮಗೆ ತೊಂದರೆ ಕೊಡುವುದಕ್ಕೆ ನನಗೆ ಇಷ್ಟವಿಲ್ಲ.
ಗುರು ಪ್ರಸಾದ್: ನಿಮ್ಮ ಪ್ಲ್ಯಾನ್ ನನಗೆ ಗೊತ್ತಿದೆ. ಬ್ಯುಸಿನೆಸ್ ಮಾಡಿ ಹಣ ಬಂದರೆ ನಿಮಗೆ ಕೊಟ್ಬಿಟ್ಟು ಸಾಯ್ತೀನಿ. ನನಗೆ ಈಗ ಆರೋಗ್ಯ ಸಹ ಕೈಕೊಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಈ ಆಡಿಯೋವನ್ನು ಗುರು ಪ್ರಸಾದ್ ಅವರೇ ಸಾವಿಗೂ ಮುಂಚೆ ಅವರ ಆತ್ಮೀಯರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಈ ಆಡಿಯೋ ಈಗ ಯಾಕೆ ವೈರಲ್ ಆಗುತ್ತಿದೆ ಎನ್ನುವ ಅನುಮಾನ ಶುರುವಾಗಿದೆ.












Click it and Unblock the Notifications