ಕಾಟೇರ ನೋಡಿದ್ರಾ? ಅಭಿಮಾನಿ ಪ್ರಶ್ನೆಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರವೇನು

ಮಂಗಳವಾರ ಬೆಳ್ಳಂಬೆಳಗ್ಗೆಯೇ ನಟ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದರು. ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ತಮ್ಮ ಮುಂದಿನ ಚಿತ್ರದ ಬಗ್ಗೆ ಕೂಡ ಮಾತನಾಡಿದರು.

ಸಾವಿರಾರು ಅಭಿಮಾನಿಗಳು ಪ್ರಶ್ನೆಗಳನ್ನು ಕೇಳಿದರು. ಸಿಕ್ಕ ಸಮಯದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ಅಭಿಮಾನಿಯೊಬ್ಬರು ದರ್ಶನ್ ಅಭಿನಯದ ಕಾಟೇರ ಸಿನಿಮಾ ಯಾವಾಗ ನೋಡ್ತೀರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದು, ಈಗಾಗಲೇ ನೋಡಿದ್ದೇನೆ ಎನ್ನುವಂತೆ ಉತ್ತರ ನೀಡಿದ್ದಾರೆ.

 Did Sudeep Watch Kaatera Movie? Heres His Answer to a Fans Question

ಸುದೀಪ್‌ ಅವರಿಗೆ ಕಾಟೇರ ಸಿನಿಮಾ ನೋಡುವಂತೆ ಈ ಮೊದಲು ಚಿತ್ರತಂಡವೇ ಆಹ್ವಾನ ನೀಡಿತ್ತು. ಆದರೆ ಮ್ಯಾಕ್ಸ್ ಸಿನಿಮಾ ಶೂಟಿಂಗ್‌ನಲ್ಲಿ ನಿರತರಾಗಿದ್ದ ಕಾರಣ ಅವರು ಚಿತ್ರವನ್ನು ನೋಡುವ ಭರವಸೆ ನೀಡಿದ್ದರು. ಈಗ ಅಭಿಮಾನಿಗಳಿಗೆ ನಾನು ಸಿನಿಮಾ ನೋಡಿದ್ದೇನೆ ಎಂದಿದ್ದಾರೆ.

ಆರ್ ಸಿಬಿ ಕಪ್ ಗೆಲ್ಲುತ್ತಾ?

ಮತ್ತೊಬ್ಬ ಅಭಿಮಾನಿ ಈ ವರ್ಷವಾದರೂ ಆರ್ ಸಿಬಿ ಕಪ್ ಗೆಲ್ಲುತ್ತಾ ಎಂದು ಪ್ರಶ್ನೆ ಮಾಡಿದ್ದು, ಉತ್ತರ ನೀಡಿರುವ ಸುದೀಪ್ ನಾನು ಅದರ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಿದ್ದೇನೆ ಅವರ ಆಟವನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಒಂದು ಮಾತು ಹೇಳಿ ಎಂದು ಕೇಳಿರುವ ಪ್ರಶ್ನೆಗೆ 'ಸ್ಪೂರ್ತಿದಾಯಕ' ಎಂದು ಉತ್ತರ ನೀಡಿದ್ದಾರೆ. ಸಲ್ಮಾನ್‌ ಖಾನ್‌ರನ್ನು ನನ್ನ ಸಹೋದರ ಎಂದು ಕೂಡ ಹೇಳಿದ್ದಾರೆ.

ಮ್ಯಾಕ್ಸ್ ಸಿನಿಮಾ ಬಗ್ಗೆ ಹೇಳಿದ್ದೇನು?

ಸುದೀಪ್ ಅವರ ಮುಂದಿನ ಸಿನಿಮಾ ಮ್ಯಾಕ್ಸ್ ಬಗ್ಗೆ ಭಾರಿ ನಿರೀಕ್ಷೆ ಇದೆ. ಸಿನಿಮಾ ಯಾವಾಗ ರಿಲೀಸ್ ಎನ್ನುವ ಬಗ್ಗೆ ಮಾಹಿತಿ ಕೊಡಿ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಶೀಘ್ರದಲ್ಲೇ ಮಾಹಿತಿ ತಿಳಿಸುವುದಾಗಿ ಹೇಳಿದರು. ಅತಿ ಶೀಘ್ರದಲ್ಲೇ ಚಿತ್ರದ ಸೆಟ್‌ನಿಂದ ಒಂದು ಸ್ಟಿಲ್ ಬಿಡುಗಡೆ ಮಾಡುವಂತೆ ಕೂಡ ಕೇಳಿದ್ದಾರೆ.

ಬಿಲ್ಲ ರಂಗ ಭಾಷ ಬಗ್ಗೆ ಹೇಳಿದ್ದೇನು?

ಸುದೀಪ್ ಬಿಲ್ಲ ರಂಗ ಭಾಷ ಎನ್ನುವ ಸಿನಿಮಾನದಲ್ಲಿ ನಟಿಸುವುದಾಗಿ ಘೋಷಣೆ ಮಾಡಿ ಹಲವು ವರ್ಷಗಳೇ ಕಳೆದಿದ್ದರು ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದ ಸುದೀಪ್ 2024ರಲ್ಲೇ ಈ ಸಿನಿಮಾ ಬಗ್ಗೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+