Audio Viral About Darshan: ರೇಣುಕಾಸ್ವಾಮಿ ಮೇಲೆ ಭಯಾನಕವಾಗಿ ದರ್ಶನ್ ಹಲ್ಲೆ- ಫೋನ್ ಸಂಭಾಷಣೆಯ ಆಡಿಯೋ ವೈರಲ್
ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ದರ್ಶನ್ ಅವರಿಗೆ ನಿಜವಾಗಿ ತೊಂದರೆಯಾಗಿದ್ದರೆ ಒಂದು ದೂರು ನೀಡಬಹುದಿತ್ತು ಅಥವಾ ಪೊಲೀಸರಿಗೆ ಒಂದು ಮಾತು ಹೇಳಬಹುದಿತ್ತು. ಆದರೆ ರೇಣುಕಾಸ್ವಾಮಿ ಅನ್ನು ಕರೆಸಿ ಹೊಡೆದಿರುವುದು ತುಂಬಾ ದೊಡ್ಡ ತಪ್ಪು. ಇದು ಒಬ್ಬ ನಾಯಕ ನಟನಿಗೆ ಶೋಭೆ ತರುವಂತಹ ಕೆಲಸವಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.
ಇದೇ ಪ್ರಕರಣದಲ್ಲಿ ಪೊಲೀಸ್ ಹಾಗೂ ಪೊಲೀಸ್ ಆಪ್ತ ಅವರದ್ದು ಎನ್ನಲಾದ ಫೋನ್ ಕಾಲ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಹಾಗಾದರೆ ದರ್ಶನ್ ಕೊಲೆ ವಿಚಾರದಲ್ಲಿ ವೈರಲ್ ಆದ ಸಂಭಾಷಣೆಯಲ್ಲಿ ಏನಿದೆ ಎಂದು ನೋಡೋಣ.

ಪೊಲೀಸ್ ಆಪ್ತ:- ದರ್ಶನ್ ಕಡೆಯ ಹುಡುಗರು ಕೊಲೆ ಮಾಡಿದ್ದಾರಾ?
ಪೊಲೀಸ್: ಇಲ್ಲ ಎಲ್ಲರೂ ಸೇರಿ ಹೊಡೆದಿದ್ದಾರೆ. ಬರೆ ಹಾಕಿದ್ದಾರೆ. ಲಾರಿಗೆ ತಲೆ ಹೊಡೆದಿದ್ದಾರೆ. ಇವರುಗಳ ಹೊಡೆತಕ್ಕೆ ಆ ಚಿಕ್ಕ ಹುಡುಗ(ರೇಣುಕಾಸ್ವಾಮಿ) ಸಹಿಸಿಕೊಳ್ಳಲು ಆಗುತ್ತಾ? ಕೋಳೆಯನ್ನ ಎಸೆಯುವಂತೆ ಆ ಚಿಕ್ಕ ಹುಡುಗನ್ನ (ರೇಣುಕಾಸ್ವಾಮಿ) ಎಸೆಯುತ್ತಾನೆ ದರ್ಶನ್. ಎಲ್ಲಾ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ ಎಲ್ಲಾ ಕಡೆಯಿಂದ ದರ್ಶನ್ ಬಂಧನ ಮಾಡುವುದು ಬೇಡ ಅಂತ ಒತ್ತಡಗಳು ಶುರುವಾಗಿದೆ.
ಪೊಲೀಸ್ ಆಪ್ತ:- ಕಾಂಗ್ರೆಸ್ ಇಂಥವರಿಗೆ ಸಹಕಾರ ನೀಡಲ್ಲ ಅನ್ಸುತ್ತೆ?
ಪೊಲೀಸ್: ಹೌದು... ಇಲ್ಲಿ ಯಾರೂ ಕೂಡ ರಾಜಕೀಯ ತಂದಿಲ್ಲ. ಆದರೆ ಅಧಿಕ ಒತ್ತಡ ಬಂತು ಬಂಧಿಸಬೇಡಿ (ದರ್ಶನ್) ಅಂತ. ಆದರೆ ಯಾವುದಕ್ಕೂ ಜಗ್ಗಿಲ್ಲ. ಎತ್ತಾಕ್ಕೊಂಡು ಬಂದು ಇಟ್ಟಿದ್ದಾರೆ. ಯಾಕೆಂದರೆ ಕೇಸ್ ತುಂಬಾ ಸ್ಟ್ರಾಂಗ್ ಆಗಿದೆ. ಇನ್ನೂ ಇವತ್ತಿಂದ ಆಟ ಶುರುವಾಗುತ್ತೆ.
ಪೊಲೀಸ್ ಆಪ್ತ:- ಗುಪ್ತಾಂಗಕ್ಕೆ ಹೊಡೆದಿರುವುದಕ್ಕೆ ಆ ವ್ಯಕ್ತಿ(ರೇಣುಕಾಸ್ವಾಮಿ) ಸತ್ತಿದ್ದಾ?
ಪೊಲೀಸ್: ಹೌದು... ಅಲ್ಲದೆ ಅವರು (ದರ್ಶನ್ ಆಂಡ್ ಗ್ಯಾಮಗ್) ಸಿಕ್ಕಾಪಟ್ಟೆ ಟಾರ್ಚರ್ ಮಾಡಿದ್ದಾರೆ. ರಾಡಲ್ಲಿ ಒಡೆದಿದ್ದಾರೆ. ಬೋನ್ಸರ್‌ಗಳು ಹೊಡೆಯುವುದನ್ನು ತಡೋಕೆ ಆಗುತ್ತಾ ಆ ಚಿಕ್ಕ ಹುಡುಗ (ರೇಣುಕಾಸ್ವಾಮಿ)? ಕುಡಿದು ಬಂದು ಹಾಗೆಲ್ಲಾ ಹೊಡೆದರೆ ಆ ಹುಡುಗ ಹೇಗ್ ಬದುಕ್ತಾನೆ? ಸುಮ್ನೆ ವಾರ್ನ್ ಮಾಡಿ ಸ್ಟೇಷನ್‌ಗೆ ಕಂಪ್ಲೇಂಟ್ ಕೊಟ್ಟಿದ್ದರೆ ಆಗೋಗಿರೋದು.

ಪೊಲೀಸ್ ಆಪ್ತ:- ಇದು ಬೋನ್ಸರ್‌ಗಳು ಮಾಡಿದ ಕೊಲೆನಾ?
ಪೊಲೀಸ್: ಎಲ್ಲರೂ ಮಾಡಿದ್ದಾರೆ. ಎಲ್ಲರೂ ಹೊಡೆದಿದ್ದಾರೆ. 13 ಜನ ಸೇರಿ ಮಾಡಿದ್ದಾರೆ. ಈ ಕೇಸ್‌ನಲ್ಲಿ ಬೇಲ್ ಸಿಗೋದು ಬಾರಿ ಕಷ್ಟ. ಒಂದು ವರ್ಷ ಅವರಿಗೆ (ದರ್ಶನ್) ಆಗಲ್ಲ ಬೇಲ್. ಆರು ತಿಂಗಳು ಹೊರಗಡೆ ಬರೋಕ್ ಆಗಲ್ಲ. ಹೈ ಕೋರ್ಟ್‌ಗೆ ಹೋದರೂ ಬೇಲ್ ಸಿಗಲ್ಲ. ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಎಷ್ಟೊಂದು ಭೀಕರ ಗಾಯಗಳು ಆಗಿದೆ ಗೊತ್ತಾ? ಮೂಗು ಕಟ್ ಆಗಿದೆ.
ಪೊಲೀಸ್ ಆಪ್ತ:- ಅಷ್ಟೊಂದು ಸಿಟ್ಟು ಯಾಕೆ?
ಪೊಲೀಸ್: ಅವರು (ದರ್ಶನ್) ತುಂಬಾ ರೂಡ್. ಅವನು(ದರ್ಶನ್) ಕುಡಿದರೆ ಅವನನ್ನು ಹಿಡಿಯೋರೇ ಇಲ್ಲ. ಆ ಹುಡುಗಿಗೂ (ಪವಿತ್ರಾ ಗೌಡ) ಹೊಡೆದಿದ್ದಾನೆ. ಆ ಹುಡುಗಿ ಆಸ್ಪತ್ರೆಗೆ ಅಡ್ಮಿಟ್ ಆಗಿ ಸೋಮವಾರ ಡಿಸ್ಚಾರ್ಜ್ ಆಗಿ ಬಂದಿದಾಳೆ. ಇವರಲ್ಲಿ ನಾಲ್ಕು ಜನ (ದರ್ಶನ್ ಗ್ಯಾಂಗ್) ಬಂದು ನಾವೇ ಕೊಲೆ ಮಾಡಿದ್ದು ಅಂತ ಕಾಮಾಕ್ಷಿ ಪಾಳ್ಯೆ ಪೊಲೀಸ್ ಠಾಣೆಯಲ್ಲಿ ಶರಣರಾದ್ರು. ಕಾಮಾಕ್ಷಿ ಪಾಳ್ಯೆ ಸ್ಟೇಷನ್ ಅಲ್ಲಿ ಶರಣಾದವರು ಒಬ್ಬೊಬ್ಬರು ಒಂದೊಂದು ಸ್ಟೇಟ್‌ಮೆಂಟ್ ಕೊಟ್ಟರು. ವಿಚಾರಣೆ ಮಾಡುವಾಗ ನಾವು ಪ್ರತ್ಯೇಕವಾಗಿ ಕುಡಿಸಿ ಮಾಡಿದ್ವಿ. ಆದರೆ ಇಲ್ಲೊಬ್ಬ ಒಂದು ಹೋಳ್ತಿದ್ದಾ ಇನ್ನೊಬ್ಬ ಇನ್ನೊಂದು ಹೇಳ್ತಾ ಇದ್ದ. ಸ್ಟೇಷನ್ ಮೆಟ್ಟಲು ಹತ್ತಿದರೆ ಸುಳ್ಳು ಹೇಳಿದರೆ ನಡೆಯಲ್ಲ. ನಾವು ಬಾಯಿ ಬಿಡಿಸ್ತೀವಿ. ಸಿನಿಮಾ ಥರ ಆಗಲ್ಲ.
ಪೊಲೀಸ್ ಆಪ್ತ:- ಮೃತದೇಹನಾ ಅಲ್ಲಿ ಯಾಕೆ ಎಸದ್ರು?
ಪೊಲೀಸ್: ಇನ್ನೇನ್ ಮಾಡ್ತಾರೆ. ಎಷ್ಟು ದೂರ ಎತ್ಕೊಂಡು ಹೋಗಲು ಆಗುತ್ತೆ. ಏನೋ ಮಾಡ್ಲಿಕ್ ಹೋಗಿ ಏನೋ ಆಗೋಯ್ತು ಈ ಮ.... ಇದು ಒಬ್ಬರ ಜೀವದ ಪ್ರಶ್ನೆ ಅಲ್ವಾ? ವಾರ್ನಿಂಗ್ ಕೊಟ್ಟಿದ್ದರೆ ಸಾಕಾಗಿರುವುದು. ಎಂಥಹ ಪವರ್ ಫುಲ್ ಇರೋ ವಕೀಲರು ಬಂದ್ರೂ ಇವರಿಗೆ (ದರ್ಶನ್ ಆಂಡ್ ಗ್ಯಾಂಗ್) ಆರು ತಿಂಗಳು ಬೇಲ್ ಕೊಡಿಸೋದು ಕಷ್ಟ ಇದೆ.












Click it and Unblock the Notifications