Darshan Thoogudeepa: ರಾಜಕಾಲುವೆ ಒತ್ತುವರಿ ಆರೋಪ.. ದರ್ಶನ್ ತೂಗುದೀಪ್ ಒತ್ತಡಕ್ಕೆ ಮಣಿದ ಸರ್ಕಾರ?
ದರ್ಶನ್ ತೂಗುದೀಪ್ ಅವರಿಗೆ ಬಳ್ಳಾರಿ ಜೈಲಿನಿಂದ ಹೊರಗೆ ಬಂದರೂ ಸಮಸ್ಯೆಗಳು ಮಾತ್ರ ಹೆಚ್ಚಾಗುತ್ತಲೇ ಇವೆ. ಅಭಿಮಾನಿಗಳ ಪಾಲಿನ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರಿಗೆ ಈಗ ಬೆನ್ನು ಸಮಸ್ಯೆ ನರಕದಂತೆ ಕಾಡುತ್ತಿದ್ದು, ಕಾಲು ಕೂಡ ಊತ ಬಂದಿದೆ. ಹಾಗೇ ಕಾಲಿನಲ್ಲಿ ಸ್ಪರ್ಶ ಜ್ಞಾನ ಕಡಿಮೆ ಆಗುತ್ತಿದೆ ಎಂಬ ಸ್ಫೋಟಕ ಆರೋಪ ಕೂಡ ಕೇಳಿ ಬಂದಿದೆ. ಇಂತಹ ಆಘಾತಕಾರಿ ಸಮಯದಲ್ಲೇ, ರಾಜ ಕಾಲುವೆ ಒತ್ತುವರಿ ಆರೋಪ.. ದರ್ಶನ್ ತೂಗುದೀಪ್ ಒತ್ತಡಕ್ಕೆ ಮಣಿದ ಸರ್ಕಾರ? ಅಂತಾ....
ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ನರಳುವ ಸಮಯದಲ್ಲೇ ಹೊರಗಡೆ ದರ್ಶನ್ ತೂಗುದೀಪ್ ಅವರ ಮನೆ ಹೊಡೆದು ಹಾಕಲು ಭರ್ಜರಿ ಸಿದ್ಧತೆ ನಡೆದಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಯಾಕಂದ್ರೆ ರಾಜರಾಜೇಶ್ವರಿ ನಗರದ ದರ್ಶನ್ ತೂಗುದೀಪ್ ಮನೆಗೆ ದೊಡ್ಡ ಕಂಟಕ ಎದುರಾಗಿತ್ತು. ಅಷ್ಟಕ್ಕೂ ರಾಜರಾಜೇಶ್ವರಿ ನಗರದ ದರ್ಶನ್ ತೂಗುದೀಪ್ ಅವರ ಮನೆ ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಇದೆ. ಹೀಗಾಗಿ ದರ್ಶನ್ ತೂಗುದೀಪ್ ಅವರ ರಾಜರಾಜೇಶ್ವರಿ ನಗರದ ಮನೆಯನ್ನ ಒಡೆದು ಹಾಕುವ ಬಗ್ಗೆ....

ರಾಜರಾಜೇಶ್ವರಿ ನಗರದ ಮನೆಗೆ ಕಂಟಕ?
ರಾಜರಾಜೇಶ್ವರಿ ನಗರದ ದರ್ಶನ್ ತೂಗುದೀಪ್ ಅವರ ಮನೆ ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಹಲವು ದಿನಗಳಿಂದ ಕೂಡ ಇದೆ. ಆದರೆ ಒತ್ತುವರಿ ತೆರವು ಮಾಡಲು ಈಗಾಗಲೇ ದರ್ಶನ್ ತೂಗುದೀಪ್ ಅವರು ತಡೆಯಾಜ್ಞೆ ತಂದಿದ್ದಾರೆ ಎನ್ನಲಾಗಿದೆ.
ಹೀಗಿದ್ದರೂ ನಾವು ಯಾರದ್ದೇ ಮುಲಾಜು ನೋಡದೆ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರ ಸರ್ಕಾರ ಗುಡುಗಿತ್ತು. ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆ ಕೂಡ ಬಿಬಿಎಂಪಿ ಒಡೆದು ಹಾಕಿ ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುತ್ತೆ ಎಂಬ ಮಾತು ಕೇಳಿ ಬಂದಿತ್ತು.
ಜೆಸಿಬಿ & ಬುಲ್ಡೋಜರ್ಸ್ ನುಗ್ಗಲಿವೆ ಎನ್ನಲಾಗಿತ್ತು!
ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಭಾರಿ ಮಳೆ ಬಂದು ಸಿಕ್ಕಾಪಟ್ಟೆ ಪ್ರವಾಹ ಬಂದಾಗ ಕೂಡ ಸಿಎಂ ಸಿದ್ದರಾಮಯ್ಯ, ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಿ ಎನ್ನುವ ಆದೇಶ ಹೊರಡಿಸಿದ್ದರು. ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ರಾಜರಾಜೇಶ್ವರಿ ನಗರದ ಮನೆಯ ಮೇಲೆ ಕೂಡ ಕಾರ್ಯಾಚರಣೆ ನಡೆಯಲಿದೆ, ಜೆಸಿಬಿ & ಬುಲ್ಡೋಜರ್ಸ್ ನುಗ್ಗಲಿವೆ ಎನ್ನಲಾಗಿತ್ತು. ಆದರೂ ಇಲ್ಲಿಯವರೆಗೂ ಕಾರ್ಯಾಚರಣೆ ಆರಂಭ ಆಗಿಲ್ಲ, ಹೀಗಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಸರ್ಕಾರದ ಕುರಿತು ಆಕ್ರೋಶ ಕೂಡ ಮೊಳಗಿದೆ. ಹಾಗಾದ್ರೆ ಸೋಷಿಯಲ್ ಮೀಡಿಯಾದಲ್ಲಿ ಜನ ಏನು ಹೇಳುತ್ತಿದ್ದಾರೆ? ಮುಂದೆ ಓದಿ.
ಬಿಬಿಎಂಪಿ ಅಧಿಕಾರಿಗಳು ಸೈಲೆಂಟ್ ಆಗಿದ್ದಾರಾ?
ರಾಜಕಾಲುವೆ ಒತ್ತುವರಿ ಆರೋಪ ಇದ್ದರೂ ಸಿದ್ದರಾಮಯ್ಯ ಅವರ ಸರ್ಕಾರ ಯಾಕೆ ಸೈಲೆಂಟ್ ಆಗಿದೆ? ದರ್ಶನ್ ತೂಗುದೀಪ್ ಒತ್ತಡಕ್ಕೆ ಮಣಿದ ಸರ್ಕಾರ? ಎನ್ನುತ್ತಾ ಕನ್ನಡಿಗರು ಇದೀಗ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ರಾಜರಾಜೇಶ್ವರಿ ನಗರದ ಮನೆ ರಾಜಕಾಲುವೆ ಒತ್ತುವರಿ ಆರೋಪದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಫುಲ್ ಸೈಲೆಂಟ್ ಆಗಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications