Darshan Thoogudeepa: ನಟ ದರ್ಶನ್ ತೂಗುದೀಪ್‌ಗೆ ಆಘಾತ, ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ರದ್ದು?
ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ಏನೇನೋ ಅಲ್ಲೋಲ ಕಲ್ಲೋಲ ನಡೆದು ಹೋಗಿ ಬರೋಬ್ಬರಿ 1 ವರ್ಷ ಕಳೆದಿದೆ. ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯ ಕೊಲೆ ಕೇಸ್‌ನಲ್ಲಿ, ದರ್ಶನ್ ತೂಗುದೀಪ್ ಸೇರಿದಂತೆ 17 ಜನ ಅರೆಸ್ಟ್ ಆಗಿದ್ದರು. ಇವರ ವಿಚಾರಣೆ ನಡೆದು ಸೆಂಟ್ರಲ್ ಜೈಲಿಗೆ ಕೂಡ ಕಳುಹಿಸಲಾಗಿತ್ತು. ಅಂತಿಮವಾಗಿ ಜಾಮೀನು ಪಡೆದು ಹೊರಗೆ ಬಂದಿದ್ದ ನಟ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಕೇಸ್‌ನ 17 ಆರೋಪಿಗಳಿಗೆ ಇದೀಗ ದಿಢೀರ್ ಆಘಾತ ಎದುರಾಗಿದೆ.
ಅಂದಹಾಗೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು ಎಂಬ ಆರೋಪವನ್ನ ಮಾಡಲಾಗಿತ್ತು. ಹೀಗೆ ರೇಣುಕಾಸ್ವಾಮಿ ಬೆಂಗಳೂರಿಗೆ ಬಂದ ನಂತರ, ಪಟ್ಟಣಗೆರೆಯ ಶೆಡ್ ಒಳಗೆ ಭಾರಿ ಹಿಂಸೆ ಮಾಡಿ ಹತ್ಯೆ ಮಾಡಿದ್ದ ಆರೋಪ ಮಾಡಲಾಗಿತ್ತು. ಈ ವಿಚಾರ ಕೆಲವು ದಿನಗಳ ನಂತರ, ಹೊರ ಜಗತ್ತಿಗೆ ಗೊತ್ತಾಗಿ ಪೊಲೀಸರು 17 ಆರೋಪಿಗಳನ್ನ ಅರೆಸ್ಟ್ ಮಾಡಿದ್ದರು. ಹೀಗೆ ಹಲವು ವಿಚಾರಣೆ ಬಳಿಕ ಅಂತಿಮವಾಗಿ ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಕೇಸ್‌ನ 17 ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಆದರೆ ಅವರಿಗೆಲ್ಲಾ ಇದೀಗ ಭಾರಿ ದೊಡ್ಡ ಆಘಾತವೇ ಎದುರಾಗಿದೆ.

ನಟ ದರ್ಶನ್ ತೂಗುದೀಪ್‌ಗೆ ಆಘಾತ
ಕನ್ನಡ ನಟ ದರ್ಶನ್ ತೂಗುದೀಪ್ ಅವರಿಗೆ ಇದೀಗ ಸುಪ್ರೀಂಕೋರ್ಟ್ ವಿಚಾರಣೆ ಆಘಾತವನ್ನೇ ನೀಡಿದೆ. ಅಷ್ಟಕ್ಕೂ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮಾನ್ಯ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ & ಆರ್. ಮಹಾದೇವನ್ ಅವರ ಪೀಠ 'ಹೈಕೋರ್ಟ್ ತನ್ನ ವಿವೇಚನೆ ಚಲಾಯಿಸಿದ ರೀತಿ ಕಾಣುತ್ತಿಲ್ಲ' ಎಂದು ಹೇಳಿದೆ. ಹಾಗೂ ಈ ಕೇಸ್ ವಿಚಾರಣೆಯನ್ನ ಜುಲೈ 22ಕ್ಕೆ ಮುಂದೂಡಿಕೆ ಮಾಡಲಾಗಿದ್ದು, ಮತ್ತೆ ದರ್ಶನ್ ತೂಗುದೀಪ್ ಅವರು ಸೇರಿದಂತೆ ಪ್ರಕರಣದ ಇತರ ಆರೋಪಿಗಳಿಗೆ ಆಘಾತ ಎದುರಾಗಿದೆ. ಹೀಗೆ ಬೆಂಗಳೂರು ಪೊಲೀಸರು ಕೂಡ, ರೇಣುಕಾಸ್ವಾಮಿ ಪ್ರಕರಣದಲ್ಲಿ ತಮ್ಮ ಕಾನೂನು ಹೋರಾಟ ಮುಂದುವರಿಸಿದ್ದಾರೆ.












Click it and Unblock the Notifications