Darshan Thoogudeepa: ಆಪರೇಷನ್ ಮಾಡಿಸಿಕೊಳ್ಳದೇ ಇದ್ದರೆ ದರ್ಶನ್‌ಗೆ ಮತ್ತೆ ಜೈಲೂಟ ಫಿಕ್ಸ್!
ಜೈಲಿನಿಂದ ರಿಲೀಸ್ ಆದರೂ ಕೂಡ ದರ್ಶನ್ ಗೆ ಟೆನ್ಷನ್ ಮಾತ್ರ ಕಡಿಮೆ ಆಗುತ್ತಿಲ್ಲ. ಅನಾರೋಗ್ಯದ ಬೆನ್ನಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್‌ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಆಪರೇಷನ್ ಮಾಡಿಸಿಕೊಳ್ಳದೇ ಇದ್ದರೆ ದರ್ಶನ್ ಮತ್ತೆ ಜೈಲು ಪಾಲಾಗೋದು ಫಿಕ್ಸ್ ಆಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ದರ್ಶನ್ ಅವರು ಷರತ್ತುಬದ್ಧ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದಾರೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್‌ಗೀಗ ನೆಮ್ಮದಿಯಾಗಿ ಇರುವುದು ಕಷ್ಟವಾಗಿದೆ. ಅನಾರೋಗ್ಯದ ನಡುವೆ ಮತ್ತೆ ಜೈಲು ಪಾಲಾಗುವ ಚಿಂತೆ ಕಾಡತೊಡಗಿದೆ. ಹೀಗಾಗಿ ದರ್ಶನ್‌ಗೆ ಜೈಲಿನಲ್ಲಿ ಇರುವಾಗಲೂ ಟೆನ್ಷನ್, ಹೊರ ಬಂದ ಮೇಲೂ ಟೆನ್ಷನ್ ಹೆಚ್ಚಾಗಿದೆ. ಟೆನ್ಷನ್‌ನಲ್ಲೇ ದರ್ಶನ್ ಕಾಲ ಕಳೆಯುವಂತಾಗಿದೆ.

ಹೌದು.. ದರ್ಶನ್ ರಿಲೀಸ್ ಆಗಿ ಒಂದು ವಾರದಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿಕಿತ್ಸೆ ಪಡೆಯುತ್ತಿರುವ ದಾಸನಿಗೆ ಆಪರೇಷನ್ ಕಂಟಕ ಶುರುವಾಗಿದೆ. ಆಪರೇಷನ್ ಮಾಡಿಸಿಕೊಳ್ಳದೇ ಇದ್ದರೆ ಮತ್ತೆ ಜೈಲೂಟ ಫಿಕ್ಸ್ ಆಗುವ ಸಾಧ್ಯತೆ ಇದೆ. ಅನಾರೋಗ್ಯ ಹಿನ್ನೆಲೆ ಆರು ವಾರಗಳ ಕಾಲ ಬೇಲ್ ಪಡೆದು ಹೊರಬಂದಿರುವ ದರ್ಶನ್ ಆಪರೇಷನ್ ಮಾಡಿಸಿಕೊಳ್ಳದೇ ಇದ್ದರೆ ಮತ್ತೆ ಜೈಲಿಗೆ ಹೋಗುವ ಲಕ್ಷಣಗಳು ಇವೆ. ಹೀಗಾಗಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್‌ಗೆ ಇದೊಂದು ದೊಡ್ಡ ಚಿಂತೆಯಾಗಿ ಕಾಡತೊಡಗಿದೆ.
ಬುಧವಾರ ನಟನ ಹೆಲ್ತ್ ರಿಪೋರ್ಟ್ ಕೋರ್ಟ್‌ಗೆ ಸಲ್ಲಿಸಲಾಗಿದೆ. ವೈದ್ಯಕೀಯ ವರದಿಯಲ್ಲಿ ನಟದ ಆಪರೇಷನ್ ಬಗ್ಗೆ ಇನ್ನೂ ಕೂಡ ತೀರ್ಮಾನ ಮಾಡಿಲ್ಲ ಅಂತ ಉಲ್ಲೇಖ ಮಾಡಲಾಗಿದೆ. ಇದೊಂದು ವಿಷಯ ಈಗ ದರ್ಶನ್ ಮತ್ತೆ ಜೈಲುಪಾಲಾಗುವ ಲಕ್ಷಣವನ್ನು ತೋರಿಸುತ್ತಿದೆ.
ಅಂದಹಾಗೆ ದರ್ಶನ್ ಅವರು ಜಾಮೀನು ಪಡೆದಿರುವುದು ಸರ್ಜರಿಗಾಗಿ. ಆದರೆ ಆಪರೇಷನ್ ಬಗ್ಗೆ ಅವರಿನ್ನೂ ತೀರ್ಮಾನವೇ ಮಾಡಿಲ್ಲ. ಒಂದು ವೇಳೆ ಆಪರೇಷನ್ ಮಾಡಿಸಿಕೊಳ್ಳದೇ ಇದ್ದರೆ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ.
ಸರ್ಕಾರದ ಅಂಗಳದಲ್ಲಿ ದರ್ಶನ್ ಜಾಮೀನು ಭವಿಷ್ಯ
ಹೌದು.. ದರ್ಶನ್ ಅಪರೇಷನ್ ಮಾಡಿಸಿಕೊಳ್ಳಲು ಜಾಮೀನು ಪಡೆದುಕೊಂಡಿದ್ದಾರೆ. ಆದರೆ ಸದ್ಯ ಆಪರೇಷನ್ ಬಗ್ಗೆ ನಿರ್ಧಾರ ಕೈಗೊಳ್ಳದ ಕಾರಣ ಎಸ್‌ಪಿಪಿ ಜಾಮೀನು ರದ್ದು ಕೋರಲು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಆಪರೇಷನ್ ಮಾಡಿಸದೇ ಇದ್ದರೆ ಬೇಲ್ ಅವಧಿಗೂ ಮುನ್ನ ದರ್ಶನ್ ಜೈಲು ಸೇರುವ ಸಾಧ್ಯತೆ ಇದೆ.
ಹೀಗಾಗಿ ದರ್ಶನ್ ಜಾಮೀನು ಭವಿಷ್ಯ ಸದ್ಯ ರಾಜ್ಯ ಸರ್ಕಾರದ ಅಂಗಳದಲ್ಲಿ ಇದೆ. ಗೃಹ ಇಲಾಖೆ ಅನುಮತಿ ನೀಡಿದರೆ ಮಧ್ಯಂತರ ಬೇಲು ರದ್ದು ಕೋರಿ ಈ ವಾರವೇ ಸುಪ್ರೀಂಗೆ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಅರ್ಜಿ ಸಲ್ಲಿಸಿದಲ್ಲಿ, ದರ್ಶನ್ ಅವಧಿಗೂ ಮುನ್ನ ಜೈಲು ಪಾಲಾಗುವ ಲಕ್ಷಣ ಇದೆ.
ಪವಿತ್ರಾ ಜಾಮೀನು ಅರ್ಜಿ ಮುಂದೂಡಿಕೆ
ಪವಿತ್ರಾ ಗೌಡ ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿದೆ. ಇದರಿಂದಾಗಿ ಪವಿತ್ರಾ ಗೌಡಗೆ ನಿರಾಸೆಯಾಗಿದೆ. ಪವಿತ್ರಾ ಸೇರಿದಂತೆ ಅನುಕುಮಾರ್, ನಾಗರಾಜ್, ಲಕ್ಷ್ಮಣ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ನವೆಂಬರ್ 21ಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.
ಒಟ್ಟಿನಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕರೂ ಕೂಡ ನೆಮ್ಮದಿಯಿಲ್ಲ. ಮತ್ತೆ ಜೈಲುಪಾಲಾಗುವ ಟೆನ್ಷನ್ ಶುರುವಾಗಿದೆ. ಜೈಲು ಸೇರುವ ಭಯದಿಂದಾಗಿ ದರ್ಶನ್ ಆಪರೇಷನ್ ಮಾಡಿಸಿಕೊಳ್ತಾರಾ ಕಾದು ನೊಡಬೇಕಿದೆ.
ಶಿವಣ್ಣನಿಗೆ ಜೈ ಎಂದ ದರ್ಶನ್ ಫ್ಯಾನ್ಸ್..!
ಕನ್ನಡದ ಹ್ಯಾಟ್ರಿಕ್ ಹೀರೋ ನಟ ಶಿವರಾಜ್‌ಕುಮಾರ್ ಅವರು ತಮ್ಮ ಭೈರತಿ ರಣಗಲ್ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡುತ್ತ ಶಿವಣ್ಣ, ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನ್ನಾಡಿದ್ದಾರೆ.
'ನಾವು ದರ್ಶನ್ ಅಭಿಮಾನಿಗಳ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ನಟ ದರ್ಶನ್ ಆರಾಧ್ಯ ದೈವ. ಬೇರೆ ನಟರ ಅಭಿಮಾನಿಗಳು ಹೇಗೋ ಅವರ ಫ್ಯಾನ್ಸ್‌ಗಳು ಕೂಡ ಹಾಗೆ ಅಲ್ಲವೇ? ದರ್ಶನ್ ವೈಯಕ್ತಿಕ ಜೀವನ ಏನೇ ಇರಬಹುದು. ಈ ಕಾರಣಕ್ಕೆ ಸಹಜವಾಗಿ ಅವರ ಅಭಿಮಾನಿಗಳಿಗೆ ನೋವಾಗಿದೆ. ಸಮಾಜ ಅವರ ನೋವಿಗೆ ಸ್ಪಂದಿಸಬೇಕಿದೆ. ಅಭಿಮಾನಿಗಳ ನೋವನ್ನು ಕೆರಳಿಸುವುದು ಉರಿಯುವ ಬೆಂಕಿಗೆ ತುಪ್ಪ ಹಾಕಿದಂತೆ. ಅದು ಸರಿಯಲ್ಲ. ಅವರಿಗಾದ ನೋವನ್ನು ಅರ್ಥ ಮಾಡಿಕೊಂಡು ಸಮಾಧಾನ ಮಾಡಬೇಕಿದೆ' ಎಂದಿದ್ದಾರೆ. ಈ ಮಾತು ಕೇಳಿದ ಫ್ಯಾನ್ಸ್ ಶಿವಣ್ಣನಿಗೆ ಜೈಕಾರ ಹಾಕಿದ್ದಾರೆ.












Click it and Unblock the Notifications