Darshan Thoogudeepa: ‘ಡಾಲಿ ಬಕೇಟ್ ಹಿಡಿಯೋದು ಮೊದಲು ಬಿಡು...’ ಡಿ-ಬಾಸ್ ಅಭಿಮಾನಿಗಳಿಂದ....
ಡಾಲಿ ಧನಂಜಯ್ ವಿರುದ್ಧ ಇದೀಗ ಭಾರಿ ಆಕ್ರೋಶ ಮೊಳಗುತ್ತಿದೆ, ಒಂದು ಕಡೆ ಇದೀಗ ಡಾಲಿ ಧನಂಜಯ್ ತನ್ನ ಚಪ್ಪಲಿಯನ್ನ ಸಹಾಯಕನ ಕೈಯಿಂದ ಹಾಕಿಸಿಕೊಂಡಿದ್ದಾರೆ ಎಂಬ ಆರೋಪ ದೊಡ್ಡದಾಗುತ್ತಿದೆ. ಈ ನಡುವೆ ಡಾಲಿ ಧನಂಜಯ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ತಿರುಗಿಬಿದ್ದಿದ್ದು, 'ಡಾಲಿ ಬಕೇಟ್ ಹಿಡಿಯೋದು ಮೊದಲು ಬಿಡು...' ಡಿ-ಬಾಸ್ ಅಭಿಮಾನಿಗಳಿಂದ....
ಡಾಲಿ ಧನಂಜಯ್ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹಾಗೇ ಈ ನಟನ ಬಗ್ಗೆ ಅಭಿಮಾನಿಗಳಿಗೆ ಕೂಡ ಭಾರಿ ನಿರೀಕ್ಷೆಗಳು ಕೂಡ ಇವೆ. ಆದರೂ ನಟ ಡಾಲಿ ಧನಂಜಯ್ ಈಗ ಮಾಡಿಕೊಂಡ ಅದೊಂದು ಎಡವಟ್ಟು, ಆಕ್ರೋಶ ಮೊಳಗುವಂತೆ ಮಾಡಿದೆ. ಇಂತಹ ಸಮಯದಲ್ಲೇ ಡಾಲಿ ಧನಂಜಯ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ಆಕ್ರೋಶ ಹೊರ ಹಾಕಿ ಎಚ್ಚರಿಕೆ ನೀಡುತ್ತಿದ್ದಾರೆ, ಯಾಕೆ ಗೊತ್ತಾ?

'ಡಾಲಿ ಬಕೇಟ್ ಹಿಡಿಯೋದು...'
ಶಿವಣ್ಣ ನಟನೆಯ 'ಭೈರತಿ ರಣಗಲ್' ತೆರೆಗೆ ಬಂದು ದೊಡ್ಡ ಸದ್ದು ಮಾಡುತ್ತಿದೆ. ಈ ಸಿನಿಮಾ ನೋಡಿದ ಕನ್ನಡ ಪ್ರೇಕ್ಷಕರು 100% ವೋಟ್ ಮಾಡಿ, ಜೈ ಶಿವಣ್ಣ ಅಂತಿದ್ದಾರೆ. ಅದೇ ರೀತಿ ಡಾಲಿ ಧನಂಜಯ್ ಕೂಡ ನಟ ಶಿವರಾಜ್‌ಕುಮಾರ್ ಅವರ ಸಿನಿಮಾ ನೋಡಲು ಅಭಿಮಾನಿ ರೀತಿಯೇ ಗೆಟಪ್ ಹಾಕಿಕೊಂಡು ಹೋಗಿದ್ದರು. ಥೇಟ್ 'ಭೈರತಿ ರಣಗಲ್' ಸಿನಿಮಾದಲ್ಲಿ ನಟ ಶಿವಣ್ಣ ಅವರ ಗೆಟಪ್ ಹಾಕಿಕೊಂಡು ಡಾಲಿ ಧನಂಜಯ್ ಥಿಯೇಟರ್‌ಗೆ ಬಂದ್ದಿದ್ದರು. ಈ ಸಮಯದಲ್ಲೇ ದೊಡ್ಡ ಎಡವಟ್ಟು ಆಗಿತ್ತು!
ಹೌದು, 'ಭೈರತಿ ರಣಗಲ್' ಸಿನಿಮಾದಲ್ಲಿ ನಟ ಶಿವಣ್ಣ ಅವರು ಕಪ್ಪು ಶರ್ಟ್ & ಕಪ್ಪಾಗಿರುವ ಪಂಚೆ ತೊಟ್ಟು ಭರ್ಜರಿಯಾಗಿ ಮಿಂಚು ಹರಿಸಿದ್ದಾರೆ. ಹೀಗಿದ್ದಾಗ ಥೇಟ್ ಶಿವಣ್ಣ ರೀತಿಯ ಕಾಸ್ಟ್ಯೂಮ್ ಹಾಕಲು ಸಿದ್ಧವಾಗಿದ್ದ ಡಾಲಿ ಧನಂಜಯ್ ತಮ್ಮ ಕೆಲಸದ ವ್ಯಕ್ತಿಯಿಂದ ಕಾಲಿಗೆ ಚಪ್ಪಲಿ ಹಾಕಿಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅಸಲಿ ವಿಷಯ ಇದಲ್ಲ, ಈ ವಿಡಿಯೋ ನೋಡಿದ ಕನ್ನಡಿಗರು ಇದೀಗ ಡಾಲಿ ಧನಂಜಯ ವಿರುದ್ಧ ಕೆರಳಿದ್ದಾರೆ. ಅದ್ರಲ್ಲೂ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಏನು ಹೇಳಿದ್ದಾರೆ ಗೊತ್ತಾ?
ಡಿ-ಬಾಸ್ ದರ್ಶನ್ ಜೈಲಿಗೆ ಹೋಗಿದ್ದಾಗ...
ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ಸಮಯದಲ್ಲಿ, ಡಾಲಿ ಧನಂಜಯ್ ಬಳಿ ಪ್ರಶ್ನೆ ಒಂದನ್ನ ಕೇಳಲಾಗಿತ್ತು. ಈ ಪ್ರಶ್ನೆಗೆ ಡಾಲಿ ಧನಂಜಯ್ ಉತ್ತರವನ್ನೆ ನೀಡಲಿಲ್ಲ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆಯೇ ಅವಮಾನ ಮಾಡಿದ್ದರು ಎಂಬ ಆರೋಪ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗದ್ದು.
ಇಂತಹ ಸಮಯದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಡಾಲಿ ಧನಂಜಯ್‌ಗೆ ಆವಾಜ್ ಹಾಕುತ್ತಿದ್ದು, 'ಡಾಲಿ ಬಕೇಟ್ ಹಿಡಿಯೋದು ಮೊದಲು ಬಿಡು...' ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಹೀಗೆ ಡಾಲಿ ಧನಂಜಯ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ದೊಡ್ಡ ಯುದ್ಧವೇ ಆರಂಭವಾಗಿದೆ!
ದರ್ಶನ್ ತೂಗುದೀಪ್ ಅವರ ಬೇಲ್ ಕ್ಯಾನ್ಸಲ್?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಜೋರಾಗಿದ್ದು, ಬಳ್ಳಾರಿ ಜೈಲಿನಿಂದ ಹೊರ ಬಂದು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಬೆನ್ನು ಮೂಳೆಯಲ್ಲಿ ಸಮಸ್ಯೆ ಇರುವ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬೆಂಗಳೂರಿನ ಬಹುದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಐಷಾರಾಮಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಮಯದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಹೊಸ ಟೆನ್ಷನ್ ಶುರುವಾಗಿದ್ದು, ದರ್ಶನ್ ತೂಗುದೀಪ್ ಜಾಮೀನು ಅಂದ್ರೆ ಬೇಲ್ ಕ್ಯಾನ್ಸಲ್ ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications