6,900 ಗಂಟೆಗಳ ನಂತರ ಬಳ್ಳಾರಿ ಜೈಲಿಗೆ ದಿಢೀರ್ ಮತ್ತೆ ಡಿ-ಬಾಸ್ ದರ್ಶನ್ ತೂಗುದೀಪ್ ಸಾಧ್ಯತೆ... Darshan Thoogudeepa

ಕನ್ನಡ ಮತ್ತು ಕನ್ನಡಿಗರ ಸಿನಿಮಾ ಇಂಡಸ್ಟ್ರಿಯ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೃದಯದ ಬಡಿತ ಏರುಪೇರು ಆಗುತ್ತಿತ್ತು, ಒಂದು ಕಡೆ ಡೆವಿಲ್ ಸಿನಿಮಾ ರಿಲೀಸ್‌ಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡ ಸಮಯದಲ್ಲೇ ಭಾರಿ ದೊಡ್ಡ ಸುದ್ದಿ ಕಾಯುತ್ತಾ ಇತ್ತು. ಅದರಲ್ಲೂ ಸ್ವತಃ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೂ ಸಿಕ್ಕಾಪಟ್ಟೆ ಟೆನ್ಷನ್ ಶುರುವಾಗಿತ್ತು, ಕಳೆದ ಕೆಲವು ದಿನಗಳಿಂದ ಭಾರಿ ಏರುಪೇರು ಕೂಡ ಕಾಡುತ್ತಿತ್ತು. ಹೀಗಿದ್ದಾಗಲೇ, 6,900 ಗಂಟೆಗಳ ನಂತರ ಬಳ್ಳಾರಿ ಜೈಲಿಗೆ ದಿಢೀರ್ ಮತ್ತೆ ಡಿ-ಬಾಸ್ ದರ್ಶನ್ ತೂಗುದೀಪ್ ಸಾಧ್ಯತೆ...

ಅಂದಹಾಗೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು ಎಂಬ ಆರೋಪವನ್ನು ಮಾಡಲಾಗಿತ್ತು. ಹೀಗೆ ರೇಣುಕಾಸ್ವಾಮಿ ಬೆಂಗಳೂರಿಗೆ ಬಂದ ನಂತರ, ಪಟ್ಟಣಗೆರೆಯ ಶೆಡ್ ಒಳಗೆ ಭಾರಿ ಹಿಂಸೆ ಮಾಡಿ ಹತ್ಯೆ ಮಾಡಿದ್ದ ಆರೋಪ ಮಾಡಲಾಗಿತ್ತು. ಈ ವಿಚಾರ ಕೆಲವು ದಿನಗಳ ನಂತರ ಹೊರ ಜಗತ್ತಿಗೆ ಗೊತ್ತಾಗಿ ಪೊಲೀಸರು 17 ಆರೋಪಿಗಳನ್ನ ಅರೆಸ್ಟ್ ಮಾಡಿದ್ದರು. ಹೀಗೆ ಹಲವು ವಿಚಾರಣೆ ಬಳಿಕ ಅಂತಿಮವಾಗಿ ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಕೇಸ್‌ 17 ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಇದೀಗ ಆರೋಪಿಗಳಿಗೆ ದೊಡ್ಡ ಆಘಾತವೇ ಎದುರಾಗಿದೆ!

Darshan Thoogudeepa Fans Are Curiously Watching This News And Creating Social Media Trend

ಡಿ-ಬಾಸ್ ದರ್ಶನ್ ಅಭಿಮಾನಿಗಳ ಕಣ್ಣೀರು...

ಹೌದು, ಇದೀಗ ಮಾನ್ಯ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಭಾರಿ ದೊಡ್ಡ ಸಂಚಲನ ಸೃಷ್ಟಿಸಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೇಲ್ ಅಂದ್ರೆ ಜಾಮೀನು ಪಡೆದಿದ್ದ ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೇರಿ ಇತರ ಆರೋಪಿಗಳ ಜಾಮೀನು ಆದೇಶವನ್ನು ಪ್ರಶ್ನೆ ಮಾಡಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮಾನ್ಯ ನ್ಯಾಯಮೂರ್ತಿಗಳು ಇಂದು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಜಾಮೀನು ರದ್ದು ಮಾಡಲಾಗಿದ್ದು, ಮತ್ತೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಎಲ್ಲಾ ಆರೋಪಿಗಳನ್ನ ಶಿಫ್ಟ್ ಮಾಡಲಾಗಿದೆ.

ಮಂಡ್ಯ ಟು ಇಂಡಿಯಾ ಡಿ-ಬಾಸ್...

ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಕೋಟ್ಯಂತರ ಫ್ಯಾನ್ಸ್ ಪಾಲಿಗೆ ದೇವರು. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜೀವ ಬೇಕಾದರೂ ಕೊಡ್ತೀವಿ ಅಂತಾರೆ ಕೋಟಿ, ಕೋಟಿ ಅಭಿಮಾನಿಗಳು. ಎಲ್ಲೇ ಹೋದರೂ ಜೈ ಡಿ-ಬಾಸ್, ಜೈ ಡಿ-ಬಾಸ್ ಅನ್ನೋ ಘೋಷಣೆ ಮೊಳಗುತ್ತದೆ. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಮಂಡ್ಯ ಟು ಇಂಡಿಯಾ ಭರ್ಜರಿಯಾಗಿದೆ. ಇಂತಹ ಮಹತ್ವದ ಸಮಯದಲ್ಲೇ ಮತ್ತೆ ನಟ ದರ್ಶನ್ ಅವರು ಜೈಲು ಸೇರಿದ ವಿಚಾರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನೇ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+