Darshan Thoogudeepa: ಪೊಲೀಸ್ ಇಲಾಖೆಗೆ ಟಕ್ಕರ್ ಕೊಡಲು ದರ್ಶನ್ ಬಿಗ್ ಪ್ಲ್ಯಾನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಹಾಗೂ ಗ್ಯಾಂಗ್‌ಗೆ ನೀಡಿರುವ ಜಾಮೀನು ರದ್ದು ಕೋರಿ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದೀಗ ಪೊಲೀಸ್ ಇಲಾಖೆಗೆ ಟಕ್ಕರ್ ಕೊಡಲು ಕೊಲೆ ಆರೋಪಿ ದರ್ಶನ್ ಸಿದ್ಧತೆ ನಡೆಸಿದ್ದಾರೆ. ಹಾಗಾದರೆ ದರ್ಶನ್ ಮುಂದಿನ ಪ್ಲ್ಯಾನ್ ಏನು? ಪ್ರಕರಣದಿಂದ ಹೊರಬರಲು ದಾಸ ನಡೆಸಿದ ತಯಾರಿ ಹೇಗಿದೆ? ಯಾರನ್ನು ಭೇಟಿ ಮಾಡಲಿದ್ದಾರೆ ಡಿ-ಬಾಸ್?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ತೂಗದೀಪ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಹೈಕೋರ್ಟ್ ಜಾಮೀನು ನೀಡಿದೆ. ಆದರೆ ಇದನ್ನು ಪ್ರಶ್ನಿಸಿ ಪೊಲೀಸ್ ಇಲಾಖೆ ಸುಪ್ರೀಂಕೋರ್ಟ್ ಕದ ತಟ್ಟಿದೆ. ಇದರಿಂದಾಗಿ ದರ್ಶನ್ ಮತ್ತೆ ನಿದ್ದೆ ಗೆಡುವಂತಾಗಿದೆ. ಜೈಲಿನಿಂದ ಹೊರಬಂದರೂ ಕೂಡ ಒಂದಾದ ಮೇಲೆ ಒಂದರಂತೆ ಸಂಕಷ್ಟ ಎದುರಿಸುತ್ತಿರುವ ದಾಸ ಇದಕ್ಕೆಲ್ಲಾ ಫುಲ್ ಸ್ಟಾಪ್ ಇಡಲು ಪ್ಲ್ಯಾನ್ ಮಾಡಿದ್ದಾರಂತೆ. ಹಾಗಾದರೆ ಏನದು ಪ್ಲ್ಯಾನ್?

ಪೊಲೀಸ್ ಇಲಾಖೆಗೆ ಟಕ್ಕರ್ ಕೊಡಲು ದರ್ಶನ್ ಬಿಗ್ ಪ್ಲ್ಯಾನ್
ಈಗಾಗಲೇ ದರ್ಶನ್ ಸೇರಿದಂತೆ ಏಳು ಜನ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿದೆ. ಮುಂದಿನ ವಾರದಲ್ಲಿ ಸುಪ್ರೀಂ ಕೋರ್ಟ್ ಮತ್ತೆ ವಿಚಾರಣೆ ನಡೆಸುವ ಲಕ್ಷಣಗಳು ದಟ್ಟವಾಗಿವೆ. ಒಂದು ವೇಳೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದರೆ ದರ್ಶನ್ ಮತ್ತೆ ಜೈಲಿಗೆ ಹೋಗುವುದು ಗ್ಯಾರಂಟಿ. ಆದರೆ ಇದಕ್ಕೆಲ್ಲಾ ಅವಕಾಶ ನೀಡದೆ ಇರಲು ಡಿ-ಬಾಸ್ ಬಿಗ್ ಪ್ಲ್ಯಾನ್ ಮಾಡಿದ್ದಾರೆ.
ಹೌದು.. ದರ್ಶನ್ ಸುಪ್ರೀಂ ಕೋರ್ಟ್‌ನಲ್ಲಿ ಘಟಾನುಘಟಿ ವಕೀಲರನ್ನು ನೇಮಕಕ್ಕೆ ಪ್ರಯತ್ನಗಳನ್ನು ನಡೆಸಿದ್ದಾರೆ. ಅಭಿಷೇಕ್ ಸಿಂಘ್ವಿ ಅಥವಾ ಕಪಿಲ್ ಸಿಬಲ್ ನಿಯೋಜನೆಗೆ ದರ್ಶನ್ ತಯಾರಿ ಮಾಡಿದ್ದಾರೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಇದೇ ವಿಚಾರವಾಗಿ ಮಾತುಕತೆಗೆಂದು ದರ್ಶನ್ ಪರ ವಕೀಲರು ದೆಹಲಿಗೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟಾನುಘಟಿ ವಕೀಲರ ನಿಯೋಜನೆಗೆ ದಾಸ ಪ್ಲ್ಯಾನ್
ಇನ್ನೆರಡು ವಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ಆಗುವ ಸಾಧ್ಯತೆ ಇದೆ. ಅಷ್ಟರೊಳಗೆ ಅಭಿಷೇಕ್ ಸಿಂಘ್ವಿ ಅಥವಾ ಕಪಿಲ್ ಸಿಬಲ್ ನೇಮಕಕ್ಕೆ ದರ್ಶನ್ ಪ್ಲ್ಯಾನ್ ಮಾಡಿದ್ದಾರಂತೆ. ಇದಕ್ಕಾಗಿ ಹಿರಿಯ ವಕೀಲರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ ಕೊಲೆ ಆರೋಪಿ ದರ್ಶನ್.
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ಗೆ ಜಾಮೀನು ಸಿಗುತ್ತಿದ್ದಂತೆ ಪೊಲೀಸ್ ಇಲಾಖೆ ದರ್ಶನ್ ಹಾಗೂ ಗ್ಯಾಂಗ್‌ಗೆ ನೀಡಿರುವ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಏಳು ಜನ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಕೋರಿ ಪೊಲೀಸ್ ಇಲಾಖೆ ಅರ್ಜಿ ಸಲ್ಲಿಸಿದೆ. ಇದೀಗ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಪರ ವಾದ ಮಂಡಿಸಲು ದರ್ಶನ್ ಅವರು ಅಭಿಷೇಕ್ ಸಿಂಘ್ವಿ ಅಥವಾ ಕಪಿಲ್ ಸಿಬಲ್ ನಿಯೋಜನೆ ಮಾಡಲು ತಯಾರಿ ನಡೆಸಿದ್ದಾರೆ.
ಒಂದು ವೇಳೆ ಈ ಪ್ರಕರಣದಲ್ಲಿ ಹಿರಿಯ ವಕೀಲರಾದ ಅಭಿಷೇಕ್ ಸಿಂಘ್ವಿ ಅಥವಾ ಕಪಿಲ್ ಸಿಬಲ್ ಅವರು ದರ್ಶನ್ ಪರ ವಾದ ಮಂಡಿಸಿದ್ದೇ ಆದರೆ ದರ್ಶನ್ ಸೇಫ್ ಆಗೋದು ಪಕ್ಕಾ. ಹೀಗಾಗಿ ದರ್ಶನ್ ಈ ವಕೀಲರ ಮನೆ ಕದ ತಟ್ಟಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಪ್ಲ್ಯಾನ್‌ನಂತೆ ಎಲ್ಲವೂ ಆದರೆ ದರ್ಶನ್ ಸೇಫ್ ಆಗೋದು ಫಿಕ್ಸ್.
ಒಂದು ವೇಳೆ ದರ್ಶನ್ ಅಂದುಕೊಂಡಂತೆ ಆಗದೇ ಇದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಪರ ತೀರ್ಪು ಸಿಗುವುದು ಡೌಟ್ ಎನ್ನಲಾಗುತ್ತಿದೆ. ಇದಕ್ಕಾಗಿ ದರ್ಶನ್ ಮತ್ತೆ ನಿದ್ದೆಗೆಡುವಂತಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಪರ ವಾದ ಯಾರು ಮಂಡಿಸಿದರೆ ತಾವು ಸೇಫ್ ಅನ್ನೋದನ್ನು ದರ್ಶನ್ ಸಾಕಷ್ಟು ಅಳೆದು ತೂಗಿ ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ಗೆ ರಿಲೀಫ್ ಸಿಗುತ್ತಾ? ಅಥವಾ ಮತ್ತೆ ಸಂಕಷ್ಟಕ್ಕೆ ಸಿಕುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications