'ಖಳನಾಯಕ್' ಸಂಜಯ್ ದತ್‌ರನ್ನು ಭೇಟಿಯಾದ ಕನ್ನಡದ 'ಕಾಟೇರ' ದರ್ಶನ್; ಏನಿದು ಗಾಂಧಿನಗರದ ಗಾಸಿಪ್?
ಬೆಂಗಳೂರು, ಫೆಬ್ರವರಿ 08: ಕೆಜಿಎಫ್ ಚಿತ್ರದಲ್ಲಿ 'ಅಧಿರ'ನಾಗಿ ಕನ್ನಡಿಗರ ಮನೆ ಮನದಲ್ಲಿ ಜಾಗ ಪಡೆದ ಬಾಲಿವುಡ್ ನಟ ಸಂಜತ್ ದತ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮ್ ಆಕ್ಷನ್ ಕಟ್ ಹೇಳುತ್ತಿರುವ ಕನ್ನಡದ 'ಕೆಡಿ' ಸಿನಿಮಾದಲ್ಲಿ ಬಾಲಿವುಡ್‌ನ ಖಳನಾಯಕ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಖಳನಾಯಕ್ ಮತ್ತು ಕನ್ನಡದ ಕಾಟೇರನ ಬಗ್ಗೆ ಈಗ ಮತ್ತೊಂದು ಹೊಸ ಅಪ್‌ಡೇಟ್ ಸಿಕ್ಕಿದೆ.
ಹೌದು... ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್: ಚಾಪ್ಟರ್ 2' ನಲ್ಲಿ ಅಧೀರನ ಪಾತ್ರದಲ್ಲಿ ಮಿಂಚಿದ್ದ ಸಂಜಯ್ ದತ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಜೊತೆಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಕೂಡ ಇದೆ.

ಖಳನಾಯಕ್ ಭೇಟಿಯಾದ ಕಾಟೇರ!
ನಟ ಸಂಕಯ್ ದತ್ ಮತ್ತು ದರ್ಶನ್ ತೂಗುದೀಪ ಒಟ್ಟಾಗಿ ಸಿನಿಮಾ ಮಾಡ್ತಾರೆ ಅಮತ ಅವರ ಅಭಿಮಾನಿಗಳು ಸಕತ್ ಗಾಸಿಪ್ ಮಾಡ್ತಿದ್ದಾರೆ. ಇದಕ್ಕೆ ಕಾರಣ ಇಬ್ಬರು ಸ್ಟಾರ್ ನಟರು ಭೇಟಿಯಾಗಿ ಫೋಟೋಗಳಿಗೆ ಫೋಸ್ ನೀಡಿರುವುದು. ಇಬ್ಬರು ಕೂಡ ನಿನ್ನೆ ಭೇಟಿಯಾಗಿದ್ದಾರೆ. ಸಂಜಯ್ ದತ್ - ದರ್ಶನ್ ಭೇಟಿಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಜೊತೆಗೆ ಸಕತ್ ವೈರಲ್ ಆಗಿವೆ.
ಸಂಜಯ್ ದತ್ ಸದ್ಯ ಕನ್ನಡದ 'ಕೆಡಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾಕ್ಕೆ ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಲಿದ್ದಾರೆ. 'ಅಧೀರ'ನಿಗಾಗಿ ಆಯೋಜಿಸಿದ್ದ ಆಪರ್ಟಿಯಲ್ಲಿ ದರ್ಶನ್ ಕೂಡ ಭಾಘಿಯಾಗಿದ್ದು, ಇಬ್ಬರು ಒಟ್ಟಿಗೆ ಫೊಸ್ ನೀಡಿದ್ದಾರೆ. ಜೊತೆಗೆ ಕೆಡಿ ಸಿನಿಮಾ ತಂಡ ಕೂಡ ಸ್ಪೆಷಲ್ ಮೂಮೆಂಟ್‌ಗೆ ಸಾಕ್ಷಿಯಾಗಿದೆ.
ಧ್ರುವ ಸರ್ಜಾ ನಟಿಸುತ್ತಿರುವ ಬಹುಭಾಷೆಯಲ್ಲಿ ತೆರೆಕಾಣಲಿರುವ 'ಕೆಡಿ' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಚಿತ್ರತಂಡ ಮತ್ತು ದರ್ಶನ್ ಅವರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ನಿರ್ಮಣ ಸಂಸ್ಥೆ "ಇದು ಸ್ಪೆಷಲ್ ಮೀಟಿಂಗ್ ಹಾಗೂ ಸ್ಪೆಷಲ್ ಮೊಮೆಂಟ್' ಎಂದು ಶೀರ್ಷಿಕೆ ನೀಡಿದ್ದಾರೆ. ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಕೂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಾಟೇರ ಸಕ್ಸಸ್ ಖುಷಿಯಲ್ಲಿ ದರ್ಶನ್
ಕಳೆದ ವರ್ಷದ ಅಂತ್ಯದಲ್ಲಿ ತೆರೆಕಂಡ ದರ್ಶನ್ ತೂಗುದೀಪ ಮತ್ತು ತರುಣ್ ಸುಧೀರ್ ಕಾಂಬಿನೇಷನ್‌ನ 'ಕಾಟೇರ' ಭರ್ಜರಿ ಹಿಟ್ ಆಗಿದೆ. ಒಟಿಟಿಗೆ ಬರಲು ಸಿದ್ಧವಾದರೂ ಕೂಡ ಥಿಯೇಟರ್‌ಗಳಲ್ಲಿ'ಕಾಟೇರ'ನ ಹವಾ ನಿಂತಿಲ್ಲ. ಈ ಸಕ್ಸಸ್ ಅನ್ನು ಎಂಜಾಯ್ ಮಾಡ್ತಿದ್ದಾರೆ ನಟ ದರ್ಶನ್. ಈ ಸಿನಿಮಾದ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ನಾಯಕಿಯಾಗಿ ಕನ್ನಡ ಸಿನಿ ರಂಗಕ್ಕೆ ಕಾಲಿಟ್ಟಿದ್ದಾರೆ.
ಇನ್ನು, 'ಕೆಡಿ' ಬಳಿಕ ನಿರ್ದೇಶಕ ಪ್ರೇಮ್ ಅವರು ನಟ ದರ್ಶನ್ ಅವರಿಗೆ ಆಕ್ಷನ್ ಕಟ್ ಹೇಳುತ್ತಾರೆ ಎಂಬ ಗುಸು ಗುಸು ಇದೆ. ಇದೇ ಸಮಯದಲ್ಲಿ ಕೆವಿಎನ್ ಟೀಮ್ ಜೊತೆಗೆ ದರ್ಶನ್ ಮತ್ತು ಸಂಜಯ್ ದತ್ ಸೇರಿಕೊಂಡಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಖಳನಾಯಕ್ ಮತ್ತು ಕಾಟೇರ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸಂಜಯ್ ದತ್ - ದರ್ಶನ್ ಭೇಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.











Click it and Unblock the Notifications