100 ದಿನ ಪೂರೈಸಿದ ದರ್ಶನ್ ಅವರ ‘ಕಾಟೇರ’ ಗಳಿಸಿದ್ದು ಎಷ್ಟು ಕೋಟಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೆ ದೊಡ್ಡ ಮಟ್ಟಿಗೆ ಹೈಪ್ ಇರುತ್ತೆ, ಫ್ಯಾನ್ಸ್ ಕೂಡ ಕಾಯ್ತಾರೆ. ಅದೇ ರೀತಿ ಕಾಟೇರ ಕೂಡ ತುಂಬಾ ಅಂದ್ರೆ ತುಂಬಾನೆ ನಿರೀಕ್ಷೆ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆ ಮೀರಿಸಿದ್ದ ಸಿನಿಮಾ ಗುರಿ ಮುಟ್ಟಿದ್ದು, ಬರೋಬ್ಬರಿ 100 ದಿನಗಳ ಭರ್ಜರಿ ಪ್ರದರ್ಶನ ಕಂಡಿದ್ದು ಇಂದಿನಿಂದ ಕಿರುತೆರೆಗೆ ಕೂಡ ಎಂಟ್ರಿ ಕೊಟ್ಟಿದೆ. ಜೀ ಕನ್ನಡದಲ್ಲಿ ಇದೇ ಮೊದಲನೇ ಬಾರಿಗೆ 'ಕಾಟೇರ' ಸಿನಿಮಾ ಪ್ಲೇ ಆಗಲಿದ್ದು, ಕಾಟೇರ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯದಲ್ಲಿ ಡಿ. 29ಕ್ಕೆ ರಿಲೀಸ್ ಆದ ಕನ್ನಡಿಗರ ಕಾಟೇರ ವಿದೇಶದಲ್ಲೂ ಅಬ್ಬರಿಸಿತ್ತು. ಯುರೋಪ್, ಆಸ್ಟ್ರೇಲಿಯಾ ಸೇರಿ ಅರಬ್ ದೇಶದಲ್ಲೂ ಕನ್ನಡ ಸಿನಿಮಾ ಅಬ್ಬರಿಸಿ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಆಸ್ಟ್ರೇಲಿಯಾ ಮತ್ತಿತರ ಕಡೆಗೆ ಕಾಟೇರ ಸಿನಿಮಾ ಇದೇ ರೀತಿ ಅಬ್ಬರದ ಪ್ರದರ್ಶನ ನೀಡಿತ್ತು. ಅಲ್ಲದೆ ಹಲವು ದಾಖಲೆಗಳನ್ನ ಕಾಟೇರ ಸಿನಿಮಾ ಮುರಿದು ಬಿಸಾಡಿತ್ತು. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರ ಅಲ್ಲದೆ ಭಾರತೀಯ ಸಿನಿಮಾ ರಂಗದಲ್ಲೂ ಹೊಸ ದಾಖಲೆ ಬರೆದಿತ್ತು 'ಕಾಟೇರ'. ಹೀಗಾಗಿ ಜನರು ಕೂಡ ಕಾಟೇರ ಸಿನಿಮಾ ಟಿವಿಯಲ್ಲಿ ನೋಡಲು ಕಾಯುತ್ತಿದ್ದರು.

ಎಲ್ಲೆಲ್ಲೂ ಕಾಟೇರ ಅಬ್ಬರ ಜೋರು
ನಟ ದರ್ಶನ್ ಅವರ ಇಡೀ ಸಿನಿ ಕರಿಯರ್ ಈಗ ಝಗಮಗಿಸಿದೆ. ಕೋಟ್ಯಂತರ ಫ್ಯಾನ್ಸ್ ಕಾಟೇರ ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲೂ ಕಾಟೇರ ಹೀಗೆ ಅಬ್ಬರಿಸಿದ್ದನ್ನು ಕಂಡು ಫುಲ್ ಖುಷ್ ಆಗಿದ್ದಾರೆ. ಅದರ ಜೊತೆ, ಸ್ಯಾಂಡಲ್‌ವುಡ್‌ಗೆ ಈಗ ಹೊಸ ಗತ್ತು ಬಂದಿದೆ. ಮೊದಲ ದಿನದಿಂದಲೇ ಕಾಟೇರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಾ ಬಂದಿತ್ತು. ಹೀಗೆ, ಕೋಟಿ ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆದಿತ್ತು.
200 ಕೋಟಿ ರೂಪಾಯಿ ಗಳಿಕೆ?
ಈ ಹಿಂದೆ ಕೆಜಿಎಫ್, ಕಾಂತಾರ ಕೊಟ್ಟ ಶೈನಿಂಗ್ ಈಗ ಮತ್ತಷ್ಟು ಹೆಚ್ಚಾಗಿದೆ. ಹೀಗೆ, ಈ ಖುಷಿ ಹೆಚ್ಚಾಗಲು ಕಾಟೇರ ಕಾರಣವಾಗಿದೆ ಒಂದು ಲೆಕ್ಕಾಚಾರದ ಪ್ರಕಾರ ಕಾಟೇರ ಒಟ್ಟು 206 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ನಿರ್ಮಾಪಕರೇ ಆಗಲಿ ಅಥವಾ ಸಿನಿಮಾ ತಂಡವೇ ಆಗಲಿ ಸ್ಪಷ್ಟವಾಗಿ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕಾಟೇರ 200 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದಾರೆ.

ಓಟಿಟಿ ಅಖಾಡದಲ್ಲಿ ಕೂಡ, ಸಿನಿಮಾ ನೋಡಿದ್ದ ಕನ್ನಡಿಗರು ಒಳ್ಳೆಯ ರಿವ್ಯೂನ ಕೊಟ್ಟಿದ್ದರು. ಈ ಮೂಲಕ ಕಾಟೇರ ಸಂಭ್ರಮ ಮತ್ತೊಮ್ಮೆ ಎಲ್ಲೆಲ್ಲೂ ಮೊಳಗಿತ್ತು. ಹಾಗೇ ದರ್ಶನ್ ಅವರ ಈ ಸಿನಿಮಾಗೆ ಕನ್ನಡಿಗರು ಜೈಕಾರ ಹಾಕಿದ್ದಾರೆ. ಇದೀಗ ಕಿರುತೆರೆ ಅಂದ್ರೆ ಟಿವಿ ಚಾನೆಲ್‌ನಲ್ಲಿಯೂ ಭರ್ಜರಿಯಾಗಿ ಪ್ರದರ್ಶನ ಕಾಣಲು 'ಕಾಟೇರ' ಕಾಯುತ್ತಿದೆ. ಇನ್ನೇನು, ಕೆಲವೇ ಕ್ಷಣಗಳಲ್ಲಿ ಭರ್ಜರಿಯಾಗಿ 'ಕಾಟೇರ' ಅಬ್ಬರ ಶುರುವಾಗಲಿದೆ.
ಕನ್ನಡ ಸಿನಿಮಾಗಳಿಗೆ ಡಿಮ್ಯಾಂಡ್!
ಒಟ್ನಲ್ಲಿ ಕನ್ನಡ ಸಿನಿಮಾ ಜಗತ್ತಿಗೆ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಬೆಲೆ ಬಂದಿದ್ದು, ಈ ಮೂಲಕ ಎಲ್ಲೆಲ್ಲೂ ಕನ್ನಡ ಸಿನಿಮಾಗಳು ಜಗಮಗಿಸುತ್ತಿವೆ. ಅದರಲ್ಲೂ 'ಕಾಟೇರ' ಚಿತ್ರಕ್ಕೆ ಸಿಕ್ಕ ಅದ್ಭುತ ಯಶಸ್ಸು ಎಲ್ಲರ ಹುಬ್ಬೇರಿಸಿದೆ. ಹಾಗೇ ಮುಂದೆ ಕೂಡ ಇದೇ ರೀತಿ ಕನ್ನಡದ ಸಿನಿಮಾಗಳು ಅದ್ಭುತ ಸಾಧನೆ ಮಾಡಲಿ ಅನ್ನೋದೆ ಕನ್ನಡಿಗರ ಆಸೆಯಾಗಿದೆ. ಹೀಗಾಗಿ ಈಗ ಸಾಲು ಸಾಲು ಕನ್ನಡ ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿದ್ದು, ಭಾರಿ ನಿರೀಕ್ಷೆ ಹುಟ್ಟು ಹಾಕಿವೆ. ಈ ನಿರೀಕ್ಷೆಗಳನ್ನು ನಿಜ ಮಾಡಲು ಅಭಿಮಾನಿಗಳು ಕೂಡ ಕಾದು ಕೂತಿದ್ದಾರೆ. ಪರಭಾಷೆ ನಟ & ನಟಿಯರು ಕೂಡ ಕನ್ನಡ ಸಿನಿಮಾಗಳನ್ನು ನೋಡಲು ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ಮುಗಿಬಿದ್ದು ಬರುತ್ತಿರುವುದು ವಿಶೇಷ.
ಪ್ಯಾನ್ ಇಂಡಿಯಾ ಆಗುತ್ತಾ 'ಕಾಟೇರ'?
'ಕಾಟೇರ' ಸಿನಿಮಾ ಹಲವಾರು ದಾಖಲೆಗಳನ್ನು ನಿರ್ಮಾಣ ಮಾಡಿ ಈಗಾಗಲೇ ಪರಭಾಷಿಕರ ಗಮನವನ್ನ ಸೆಳೆದಿದೆ. ಹೀಗಿದ್ದಾಗ 'ಕಾಟೇರ' ಚಿತ್ರ ಪ್ಯಾನ್ ಇಂಡಿಯಾ ಲೆವೆಲ್‌ಗೆ ಹೋಗುತ್ತೆ, ಬೇರೆ ಬೇರೆ ಭಾಷೆಗೂ ಡಬ್ ಆಗಿ ರಿಲೀಸ್ ಆಗಲಿದೆ ಎಂಬ ಮಾತು ಓಡಾಡಿವೆ. ಆದ್ರೆ ಈ ಬಗ್ಗೆ ಇನ್ನೂ ದಿನಾಂಕ ಅಧಿಕೃತ ಘೋಷಣೆ ಆಗಿಲ್ಲ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ, ಹಾಗೇ ಕಾಟೇರ ಮತ್ತೊಂದು ಹೊಸ ಇತಿಹಾಸವನ್ನ ನಿರ್ಮಾಣ ಮಾಡಲಿ. ಜಾಗತಿಕ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಹೀಗೆಯೇ ಸದ್ದು ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ. ಹೀಗಾಗಿ 'ಕಾಟೇರ' ಸಿನಿಮಾ ಬಗ್ಗೆ ಈಗಲೂ ಕುತೂಹಲ ಬೆಳೆಯುತ್ತಿದ್ದು, ಫ್ಯಾನ್ಸ್ ಮತ್ತೊಂದು ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ.
ನಟ ದರ್ಶನ್ ಫ್ಯಾನ್ಸ್‌ಗೆ ಆಘಾತ?
'ಕಾಟೇರ' ಸಿನಿಮಾ ಮೂಲಕ ಇತ್ತೀಚೆಗೆ ಕಮಾಲ್ ಮಾಡಿದ್ದ ನಟ ದರ್ಶನ್ ಅವರು ಇದೇ ಸಂಭ್ರಮದಲ್ಲಿ 'ಡೆವಿಲ್' ಸಿನಿಮಾ ಶೂಟಿಂಗ್‌ಗೆ ಕೂಡ ಹಾಜರ್ ಆಗಿದ್ದರು. ಇದೇ ಕಾರಣ ಅಭಿಮಾನಿಗಳು ಕೂಡ ಡೆವಿಲ್ ಸಿನಿಮಾ ನೋಡಲು ಕಾಯುತ್ತಿದ್ದರು. ಆದರೆ 'ಡೆವಿಲ್' ಸಿನಿಮಾ ಶೂಟಿಂಗ್ ನಡೆಯುವಾಗ ತಮ್ಮ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಆಘಾತಕ್ಕೆ ಒಳಗಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ದರ್ಶನ್ ಅವರು ಬರೋಬ್ಬರಿ 1 ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಮೂಲಕ 'ಡೆವಿಲ್' ಸಿನಿಮಾ ಶೂಟಿಂಗ್ ಮುಂದೂಡಿಕೆ ಆಗಲಿದ್ದು, ಬಿಡುಗಡೆ ಕೂಡ ತಡವಾಗುವ ಸಾಧ್ಯತೆ ಇದೆ.












Click it and Unblock the Notifications