‘ನಮ್ದು ಏಕ್ ಮಾರ್ ದೋ ತುಕ್ಡಾ’: ಡಿ-ಬಾಸ್ ಹಿಂಗೆ ಹೇಳಿದ್ದು ಯಾರಿಗೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡದಾಗಿ ಬೆಳೆದು ನಿಂತಿದ್ದಾರೆ. ಆದರೆ ಅಭಿಮಾನಿಗಳ ಪಾಲಿನ 'ಡಿ-ಬಾಸ್' ದರ್ಶನ್ ಈ ರೀತಿಯ ಸಾಧನೆ ಮಾಡಲು ಭಾರಿ ದೊಡ್ಡ ದೊಡ್ಡ ಸವಾಲುಗಳನ್ನೇ ಎದುರಿಸಿದ್ದಾರೆ. ಇದೀಗ ಇದೇ ದರ್ಶನ್ ಅವರು, ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ 'ನಮ್ದು ಏಕ್ ಮಾರ್ ದೋ ತುಕ್ಡಾ' ಅಂತಾ ಹೇಳಿದ್ದಾರೆ. ಹಾಗಾದರೆ ನಟ ದರ್ಶನ್ ಅವರು ಹೀಗೆ ಹೇಳಿದ್ದು ಯಾರಿಗೆ? ಮುಂದೆ ಓದಿ.

ನಟ ದರ್ಶನ್‌ರ ಫ್ಯಾನ್ಸ್‌ಗೆ 2024ರಲ್ಲಿ ಸಿಕ್ಕಾಪಟ್ಟೆ ಸರ್ಪ್ರೈಸ್ ಸಿಗುತ್ತಿವೆ. ಒಂದ್ಕಡೆ ನಟ ದರ್ಶನ್ ಅಭಿನಯ ಮಾಡಿದ್ದ 'ಕಾಟೇರ' ಭರ್ಜರಿ ಯಶಸ್ಸನ್ನು ಗಳಿಸಿದೆ. ಈ ವೇಳೆ ಮತ್ತೊಂದು ದೊಡ್ಡ ಸಿನಿಮಾಗೂ ದರ್ಶನ್ ಸಜ್ಜಾಗಿದ್ದಾರೆ. ಹಾಗೇ ದರ್ಶನ್ ಅವರು 'ಭೂಮಿ ಪುತ್ರ' ಎಂಬ ಹೊಸ ಬಿರುದು ಪಡೆದಿದ್ದಾರೆ. ಇಷ್ಟೆಲ್ಲದರ ನಡುವೆ, ಹಂಪಿ ಉತ್ಸವದಲ್ಲೂ 'ಡಿ-ಬಾಸ್' ಹವಾ ಬಲು ಜೋರಾಗಿದೆ. ಹೀಗೆ ಹಂಪಿ ಉತ್ಸವದಲ್ಲಿಯೂ ತಮ್ಮ ಅಭಿಮಾನಿ ಸೆಲೆಬ್ರಿಟಿಗಳನ್ನು ಉದ್ದೇಶಿಸಿ ಮಾತನಾಡುವಾಗ ದರ್ಶನ್ ಅವರು 'ನಮ್ದು ಏಕ್ ಮಾರ್ ದೋ ತುಕ್ಡಾ' ಅಂತಾ ಹೇಳಿದ್ದಾರೆ. ಹಾಗಾದರೆ ದರ್ಶನ್ ಅವರು ಹೀಗೆ ಹೇಳಿದ್ದು ಯಾರಿಗೆ?

 Challenging Star Darshan Happy About B. Z. Zameer Ahmed Khans Social Works

ಜಮೀರ್ ಅವರ ಮಾತಿಗೆ ನಾನು...

ಅಂದಹಾಗೆ ಹಂಪಿ ಉತ್ಸವದಲ್ಲಿ ನಟ ದರ್ಶನ್ ಅವರು ಮಾತನಾಡುವ ವೇಳೆ ಕರ್ನಾಟಕದ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇನ್ನು ಇದೇ ಸಮಯದಲ್ಲಿ ತಾವು ತಮ್ಮ ಜೀವನದಲ್ಲಿ ಜಮೀರ್ ಅಹ್ಮದ್ ಖಾನ್ ಅವರನ್ನ ಬಿಟ್ಟು ಬೇರೆ ಯಾರಿಗೂ ಅಷ್ಟೊಂದು ಗೌರವ ಕೊಟ್ಟಿಲ್ಲ. ಜಮೀರ್ ಅಹ್ಮದ್ ಖಾನ್ ಅವರು ನನ್ನ ಕರೆದರೆ, ಅದು ಎಂತಹ ಕೆಲಸ ಇದ್ದರೂ ಬಿಟ್ಟು ಓಡಿ ಬರುತ್ತೇನೆ ಎಂದಿದ್ದಾರೆ. ಈ ವೇಳೆ, ಜಮೀರ್ ಅವರು ಮಾಡುತ್ತಿರುವ ಸಮಾಜಮುಖಿ ಕೆಲಸಗಳ ಬಗ್ಗೆ ಕೂಡ ನಟ ದರ್ಶನ್‌ರಿಂದ ಹೆಮ್ಮೆಯ ಮಾತುಗಳು ಕೇಳಿಬಂದಿವೆ. ಹಾಗೇ 'ನಮ್ಮ ಮಾತುಗಳು ಏಕ್ ಮಾರ್ ದೋ ತುಕ್ಡಾ ಇದ್ದಂತೆ, ಆದರೆ ಜಮೀರ್ ಅವರ ಮಾತಿಗೆ ನಾನು ಎಂದೆಂದೂ ತಲೆಬಾಗುವೆ' ಅಂತಾ ನಟ ದರ್ಶನ್ ಅವರು ಹೇಳಿದ್ದಾರೆ.

ಸಚಿವ ಜಮೀರ್ ಫುಲ್ ಖುಷ್!

ಹೀಗೆ ನಟ ದರ್ಶನ್ ಅವರು ಜಮೀರ್ ಅವರ ಬಗ್ಗೆ ಮುಕ್ತ ಮನಸ್ಸಿನಿಂದ ಮಾತನಾಡಿದಾಗ ಸಚಿವ ಜಮೀರ್ ಅವರು ಕೂಡ ಖುಷಿಯಾಗಿದ್ದಾರೆ. ಅಲ್ಲದೆ ಇದೇ ವೇದಿಕೆ ಮೇಲೆ ಫ್ಯಾನ್ಸ್ ಪಾಲಿನ ಡಿ-ಬಾಸ್ & ಜಮೀರ್ ಅವರ ನಡುವೆ ಎಷ್ಟು ಗಟ್ಟಿಯಾದ ಸ್ನೇಹ ಇದೆ ಎಂಬುದು ಮತ್ತೊಮ್ಮೆ ಇಡೀ ಜಗತ್ತಿಗೆ ಗೊತ್ತಾಗಿದೆ. ಅಲ್ಲದೆ ಅಭಿಮಾನಿಗಳು ಕೂಡ ಇದನ್ನು ನೋಡಿ, ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಹಾಗೇ ಇಬ್ಬರ ಸ್ನೇಹವು ಹೀಗೆಯೇ ಇರಲಿ ಎಂದು ಇದೀಗ ಹಾರೈಸುತ್ತಿದ್ದಾರೆ.

ಒಟ್ನಲ್ಲಿ ನಟ ದರ್ಶನ್ ಅವರ ಸಿನಿಮಾಗಳ ಅಬ್ಬರದ ಜೊತೆಗೆ ಅವರ ಒಂದೊಂದು ಮಾತು ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಯಾಕಂದ್ರೆ ಡಿ-ಬಾಸ್ ಒಂದು ಮಾತು ಹೇಳಿದರೆ ಅವರ ಅಭಿಮಾನಿಗಳು ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಹಾಗೂ ಅದನ್ನ ಅನುಸರಿಸುತ್ತಾರೆ. ಹೀಗಾಗಿಯೇ ದರ್ಶನ್ ಅವರ ಈ ಹೇಳಿಕೆ ಇದೀಗ ಫುಲ್ ವೈರಲ್ ಆಗುತ್ತಿದೆ.

ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಹೀಗೆ ದರ್ಶನ್ ಅವರ ಸಿನಿಮಾಗಳಿಗೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಾರೆ. ಇತ್ತೀಚೆಗೆ ಅವರ ಕಾಟೇರ ಸಿನಿಮಾ ರಿಲೀಸ್ ಆಗಿ ಅದ್ಧೂರಿಯಾಗಿ ಯಶಸ್ಸು ಕಂಡಿದೆ. ಆದರೆ ಈ ಸಂದರ್ಭದಲ್ಲಿ ದರ್ಶನ್ ಅವರು, ತಮ್ಮ ಜೀವನದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಹಾಗೇ ಸಚಿವ ಜಮೀರ್ ಮತ್ತೆ ತಮ್ಮ ನಡುವೆ ಇರುವ ಸ್ನೇಹದ ಬಗ್ಗೆಯೂ ನಟ ದರ್ಶನ್ ಅವರು ಮುಕ್ತವಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+