ನನ್ನ ಮೂತ್ರವನ್ನ ಬಿಯರ್‌ನಂತೆ 30 ದಿನ ಕುಡಿದೆ: ಖ್ಯಾತ ನಟ ಹೀಗೆ ಮಾಡಿದ್ದೇಕೆ?
ಬಾಲಿವುಡ್, ತೆಲುಗು ಸೇರಿದಂತೆ ಬಹುಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ, ಮಾಜಿ ಸಂಸದ ಪರೇಶ್ ರಾವಲ್ (Paresh Rawal) ಶಾಕಿಂಗ್ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿರುವ ಅವರು ವಿಭಿನ್ನ ಪಾತ್ರಗಳ ಮೂಲಕ ಮನೆಮಾತಾಗಿದ್ದಾರೆ. ಬಾಲಿವುಡ್ ಜೊತೆಗೆ ದಕ್ಷಿಣ ಚಿತ್ರರಂಗದಲ್ಲೂ ಛಾಪು ಮೂಡಿಸಿರುವ ಅವರು ತಮ್ಮ ಮೂತ್ರವನ್ನು ತಾವೇ ಕುಡಿಯುತ್ತಿದ್ದ ವಿಚಾರವನ್ನು ಹೇಳಿಕೊಂಡಿದ್ದಾರೆ. ನಟನ ಈ ಮಾತು ಕೇಳಿ ಸಿನಿಪ್ರಿಯರೆಲ್ಲ ಫುಲ್ ಶಾಕ್‌ನಲ್ಲಿದ್ದಾರೆ. ಆದರೆ ಯಾವ ಕಾರಣಕ್ಕೆ ತಮ್ಮ ಮೂತ್ರ ಕುಡಿಯುತ್ತಿದ್ದರು ಎಂದು ನಟ ಪರೇಶ್ ಅವರೇ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ರಾಜ್‌ಕುಮಾರ್ ಸಂತೋಷಿ ಅವರ "ಘಟಕ್" ಸಿನಿಮಾ ಶೂಟಿಂಗ್ ವೇಳೆ ತಮ್ಮ ಕಾಲಿಗೆ ಗಾಯವಾಗಿದ್ದನ್ನು ನೆನೆದಿದ್ದಾರೆ. ಈ ಘಟನೆಯಿಂದ ತಮ್ಮ ವೃತ್ತಿಜೀವನದಲ್ಲಿ ಏರಿಳಿತವಾಗಿ ಚಿಂತೆಗೀಡುಮಾಡಿತ್ತು ಎಂದು ಹೇಳಿಕೊಂಡಿದ್ದಾರೆ. ಕಾಲಿಗೆ ಗಾಯವಾದ ನಂತರ ಸಿನಿಮಾದ ಸಹ ನಟರಾದ ಟಿನ್ನು ಆನಂದ್ ಮತ್ತು ಡ್ಯಾನಿ ಡೆನ್ಜೊಂಗ್ಪಾ ಅವರು ನನ್ನನ್ನು ಚಿಕಿತ್ಸೆಗಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ದರು ಎಂದಿದ್ದಾರೆ.

ಆಸ್ಪತ್ರೆಯಲ್ಲಿದ್ದಾಗಲೇ ಖ್ಯಾತ ಸಾಹಸ ನಿರ್ದೇಶಕ ಮತ್ತು ಅಜಯ್ ದೇವಗನ್ ಅವರ ತಂದೆ ವೀರು ದೇವಗನ್ ನನ್ನನ್ನು ಭೇಟಿ ಮಾಡಿದರು. ರಾವಲ್ ಅವರ ಗಾಯದ ಬಗ್ಗೆ ಕಳವಳಗೊಂಡ ವೀರು ದೇವಗನ್ ವಿಚಿತ್ರ ಸಲಹೆಯೊಂದನ್ನು ನೀಡಿದರು. ಅದೇನೆಂದರೆ, ಪ್ರತಿದಿನ ಬೆಳಿಗ್ಗೆ ಮೊದಲು ತಮ್ಮ ಮೂತ್ರವನ್ನು ಕುಡಿಯುವಂತೆ ಹೇಳಿದ್ದರಂತೆ. ಅನೇಕ ಹೋರಾಟಗಾರರು ತ್ವರಿತ ಚಿಕಿತ್ಸೆ ಮತ್ತು ಉತ್ತಮ ಶಕ್ತಿಗಾಗಿ ತಮ್ಮ ಮೂತ್ರ ಕುಡಿಯುವ ಅಭ್ಯಾಸ ಅನುಸರಿಸುತ್ತಿದ್ದರು. ಹಾಗಾಗಿ ನೀವೂ ಇದನ್ನೇ ಮಾಡಿ, ಮದ್ಯ, ಮಟನ್ ಮತ್ತು ತಂಬಾಕು ಸೇವನೆ ಮಾಡದಂತೆ ಸಲಹೆ ನೀಡಿದ್ದರಂತೆ.
ಕಾಲಿನ ಗಾಯ ವಾಸಿಯಾಗಬೇಕು ಎಂದು ದೃಢನಿಶ್ಚಯ ಮಾಡಿಕೊಂಡಿದ್ದ ನಟ ಪರೇಶ್ ರಾವಲ್ ಅವರು ತಮ್ಮ ಮೂತ್ರವನ್ನು ಬಿಯರ್‌ನಂತೆ ಕುಡಿದಿದ್ದಾಗಿ ಹಾಸ್ಯಮಯವಾಗಿ ಹೇಳಿಕೊಂಡಿದ್ದಾರೆ. ಸುಮಾರು 30 ದಿನಗಳ ಕಾಲ ಸತತವಾಗಿ ಇದೇ ಕೆಲಸ ಮಾಡಿದೆ. ನನ್ನ ಮೂತ್ರವನ್ನು ನಾನೇ ಕುಡಿಯಬೇಕಾದರೆ, ನಾನು ಅದನ್ನು ಒಂದೇ ಬಾರಿಗೆ ಕುಡಿಯುವುದಿಲ್ಲ ಎಂದು ನಿರ್ಧರಿಸಿದ್ದೆ. ನಾನು ಅದನ್ನು ಬಿಯರ್‌ನಂತೆ ಸೇವಿಸಿದೆ. ಎಲ್ಲರಿಗೂ ಆಶ್ಚರ್ಯವಾಗುವಂತೆ, ನಂತರ ವೈದ್ಯರು ಅವರ ಎಕ್ಸ್-ರೇಗಳನ್ನು ಪರಿಶೀಲಿಸಿದಾಗ, ನಿರೀಕ್ಷೆಗಿಂತ ವೇಗವಾಗಿ ಆರೋಗ್ಯ ಸುಧಾರಿಸಿತ್ತು ಎಂದಿದ್ದಾರೆ. ನಾನು ಎರಡೂವರೆ ತಿಂಗಳಲ್ಲಿ ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ಈ ವಿಧಾನ ಅನುಸರಿಸಿದ್ದರಿಂದ ಕೇವಲ ಒಂದೂವರೆ ತಿಂಗಳಲ್ಲೇ ಡಿಸ್ಚಾರ್ಜ್ ಆದೆ. ಅದು ಮ್ಯಾಜಿಕ್‌ನಂತೆ ಇತ್ತು ಎಂದು ಪರೇಶ್ ಹೇಳಿದ್ದಾರೆ.
ಪರೇಶ್ ಅವರ ಮಾತನ್ನು ಕೇಳಿ ಅವರ ಅಭಿಮಾನಿಗಳನ್ನು ಆಘಾತಕ್ಕೆ ಒಳಗಾಗಿದ್ದಾರೆ. ಪರೇಶ್ ರಾವಲ್ ನನಗೆ ಬಿಯರ್‌ನಂತೆ ಮೂತ್ರ ಕುಡಿದಿರುವುದು ಕೇಳುವುದಕ್ಕೆ ಕಸಿವಿಸಿಯಾಗುತ್ತಿದೆ, ಇದು ಹೇಗೆ ಸಾಧ್ಯ? ಎಂದು ಕೇಳಿದ್ದಾರೆ. ನಟ ಹೇಳಿದಂತೆ ಕಾಲಿಗೆ ಗಾಯವಾದರೆ ಇನ್ಮುಂದೆ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲೇ ನಮ್ಮ ಮೂತ್ರ ಸೇವಿಸಿಕೊಂಡರೆ ಸಾಕೇ? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications