Bigg Boss Winner Speech: ತೆಲುಗು ಬಿಗ್‌ ಬಾಸ್‌ ವಿನ್ನರ್ ಕನ್ನಡಿಗನ ವಿಡಿಯೋ ಭಾರೀ ವೈರಲ್‌

Bigg Boss Winner Speech: ಬಿಗ್‌ ಬಾಸ್‌ ತೆಲುಗು ಸೀಸನ್‌ 8ರಲ್ಲಿ ಕನ್ನಡಿಗ ಗೆಲುವು ಸಾಧಿಸಿದ್ದಾರೆ. ಕರ್ನಾಟಕ ರಾಜ್ಯದ ಮೈಸೂರಿನ ನಿಖಿಲ್‌ ಅವರು ಬಿಗ್‌ ಬಾಸ್‌ ಟ್ರೋಪಿ ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಅಲ್ಲದೆ, ಇದೀಗ ಅವರು ಕರುನಾಡ ಭಾಷೆ ಮಾತನಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಮೈಸೂರಿನ ನಿಖಿಲ್‌ ಅವರು ಬಿಗ್ ಬಾಸ್ ತೆಲುಗು ಸೀಸನ್ 8ರಲ್ಲಿ 100 ದಿನಕ್ಕೂ ಹೆಚ್ಚು ದಿನ ಇದ್ದು ಅಲ್ಲಿನ ಸ್ಪರ್ಧಿಗಳನ್ನೆಲ್ಲ ಹಿಂದಿಕ್ಕಿ ಟ್ರೋಪಿ ಗೆದ್ದಿದ್ದಾರೆ. ಇದೀಗ ನಿಖಿಲ್ ಅವರು ಕಾರಿನಲ್ಲಿ ಟ್ರೋಪಿ ಹಿಡಿದು ತೆರಳುವಾದ ಕನ್ನಡದಲ್ಲಿ ಮಾತನಾಡಿದ್ದು, ಈ ವಿಡಿಯೋ ಎಲ್ಲಡೆ ವೈರಲ್‌ ಆಗುತ್ತಿದೆ. ಹಾಗಾದ್ರೆ ಏನೆಲ್ಲಾ ಮಾತನಾಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.

Bigg Boss Telugu season 8 Winner s Kannada Speech viral

ನಿಖಿಲ್ ಅವರ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನವರಾಗಿದ್ದಾರೆ. ತೆಲುಗು ಬಿಗ್ ಬಾಸ್‌ನಲ್ಲಿ ಈಗಾಗಲೇ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಅಷ್ಟೇ ಸಾಲದೆಂಬಂತೆ ಇದೀಗ ಮತ್ತೆ ಟ್ರೋಪಿ ಹಿಡಿದು ಕಾರಲ್ಲಿ ತೆರಳುವಾಗ ನಿರರ್ಗಳವಾಗಿ ಯಾವುದೇ ತೊಡಕಿಲ್ಲದೆ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.

ಕಾರಿನಲ್ಲಿ ಕುಳಿತ್ತಿದ್ದವರೊಬ್ಬರು ನೀವು ತೆಲುಗು ಬಿಗ್‌ ಬಾಸ್‌ನಲ್ಲಿ ಗೆದ್ದಿರುವ ಬಗ್ಗೆ ಏನು ಅನಿಸುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನನ್ನು ಕಳ್ಳರನ್ನು ಕರೆದುಕೊಂಡು ಹೋದಂತೆ ಹೋಗುತ್ತಿದ್ದಿರಲ್ಲೋ ಎಂದು ನಿಖಿಲ್ ಟ್ರೋಪಿ ಹಿಡಿದುಕೊಣಡು ಕೂಗಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ನೆಟ್ಟಿಗರು ಇದಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ತೆಲುಗು ಬಿಗ್‌ ಬಾಸ್‌ ಸೀಸನ್‌ 8ರ ವಿನ್ನರ್‌ ನಿಖಿಲ್ ಅವರು ಕನ್ನಡದ ಊಟಿ ಎಂಬ ಹೆಸರಿನ ಸಿನಿಮಾ ಮಾಡಿದ್ದು, ಈ ಮೂಲಕ ಕನ್ನಡದಲ್ಲಿ ಪ್ರಸಿದ್ಧಿ ಪಡೆದರು. ಬಳಿಕ ಅವರಿಗೆ ತೆಲುಗು ಧಾರಾವಾಹಿಗಳಿಂದ ಆಫರ್‌ಗಳು ಬಂದಿದ್ದು, ತೆಲುಗಿನ ಗೋರಿಂಟಕು ಧಾರಾವಾಹಿಯಲ್ಲಿ ನಟಿನೆ ಮಾಡಿದವರಾಗಿದ್ದಾರೆ. ಇನ್ನು ಈ ಸೀರಿಯಲ್‌ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ ಅವರು ಬಿಗ್ ಬಾಸ್​ ಶೋನಲ್ಲಿ ಕಾಣಿಸಿಕೊಂಡು ಅಲ್ಲಿ ಕೆಲವೊಮ್ಮೆ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಇನ್ನು ಇದೀಗ ಅವರು ಬಿಗ್‌ ಬಾಸ್‌ ಟ್ರೋಪಿ ಹಿಡಿದು ಕನ್ನಡಲ್ಲಿ ಮಾತನಾಡಿರುವ ಬಗ್ಗೆ ಅವರಿಗೆ ಕನ್ನಡಿಗರಿಂದ ಪ್ರಶಂಸನಿಯಗಳ ಸರಮಾಲೆಯೇ ಹರಿದುಬರುತ್ತಿದೆ. ಅಲ್ಲದೆ, ನಿಮಗೆ ಒಳ್ಳೆಯದಾಗಲಿ, ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಿರಿ ಎಂದು ಶುಭಹಾರೈಸಿದ್ದಾರೆ. ಅಷ್ಟೇ ಸಾಲದೆಂಬಂತೆ ಮುಂದಿನ ದಿನಗಳಲ್ಲಿ ಕನ್ನಡ ಬಿಗ್ ಬಾಸ್‌​ಗೂ ಬಂದು ಅಲ್ಲಿಯೂ ಹವಾ ಸೃಷ್ಟಿಸಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇನ್ನು ಈ ಹಿಂದೆ ತೆಲುಗು ಬಿಗ್‌ ಬಾಸ್‌ನಲ್ಲಿ ಹವಾ ಸೃಷ್ಟಿಸಿದ್ದ ಶೋಭಾ ಶೆಟ್ಟಿ ಅವರು ಕನ್ನಡ ಬಿಗ್ ಬಾಸ್‌ ಸೀಸನ್‌ 11ಕ್ಕೆ ಖಡಕ್‌ ಆಗಿ ಮಾತನಾಡುವ ಮೂಲಕ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟರು. ಆದರೆ, ಎರಡೇ ವಾರಕ್ಕೆ ಪ್ರೇಕ್ಷಕರ ಮನ ಗೆದ್ದು ಉತ್ತಮ ವೋಟ್‌ಗಳನ್ನು ಪಡೆದರೂ ಸಹ ಅವರಾಗಿಯೇ ಬಿಗ್‌ ಬಾಸ್‌ ಮನೆಯಿಂದ ಕಣ್ಣೀರಿಟ್ಟು ಹೊರನಡೆದರು. ಇನ್ನು ಶೋಭಾ ಶೆಟ್ಟಿಯವರ ಪರ ಕಿಚ್ಚ ಸುದೀಪ್‌ ಪ್ರೇಕ್ಷರಿಗೆ ಕ್ಷಮೆಯಾಚಿಸುವ ಮೂಲಕ ದೊಡ್ಡ ತನವನ್ನು ಮೆರೆದ ಘಟನೆ ಕೂಡ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+