ರೀಲ್ಸ್ ಮಾಡಿದ್ದಕ್ಕೆ ನನ್ನ ಜೈಲಿಗೆ ಕಳಿಸಿದ್ರು, ಸೌಜನ್ಯಗೆ 14 ವರ್ಷವಾದ್ರೂ ನ್ಯಾಯ ಸಿಕ್ಕಿಲ್ಲ: ರಜತ್ ಗರಂ
ಧರ್ಮಸ್ಥಳದ ಸೌಜನ್ಯ ಕೇಸ್ ವಿಚಾರವಾಗಿ ಬಿಗ್‌ಬಾಸ್ ಖ್ಯಾತಿಯ ರಜತ್ ಕಿಶನ್ ಧ್ವನಿ ಎತ್ತಿದ್ದಾರೆ. ಸೌಜನ್ಯ ಅವರ ನಿವಾಸಕ್ಕೆ ತೆರಳಿ, ಅವರ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಧರ್ಮಸ್ಥಳದ ಸೌಜನ್ಯ ಮನೆಗೆ ಭೇಟಿ ನೀಡಲು ಹೋಗುತ್ತಿದ್ದೇನೆ. ತುಂಬಾ ದಿನದಿಂದ ಸೌಜನ್ಯ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಎಂದುಕೊಂಡಿದ್ದೆ. ಮುಂದೆ ನನಗೆ ಬ್ಯಾಕ್ ಟು ಬ್ಯಾಕ್ ಶೂಟ್ ಇದೆ. ಹಾಗಾಗಿ ಶೂಟಿಂಗ್‌ನಲ್ಲೇ ಬ್ಯುಸಿ ಆಗುವುದರಿಂದ ಈಗ ಫ್ರೀ ಇರುವ ಕಾರಣಕ್ಕೆ ಸೌಜನ್ಯ ಅವರ ಮನೆಗೆ ಹೋಗುತ್ತಿದ್ದೇನೆ ಎಂದಿದ್ದಾರೆ.
ಗಿರೀಶ್ ಸರ್ ಕೂಡ ಅಲ್ಲೇ ಇದ್ದಾರಂತೆ, ಅವರನ್ನೂ ಅಲ್ಲಿ ಹೋಗಿ ಮಾತನಾಡಿಸಿಕೊಂಡು ಏನು ಬೆಳವಣಿಗೆ ಆಗಿದೆ ಅಂತ ನೋಡಿಕೊಂಡು ಬರುತ್ತೇನೆ. ಈ ಕೇಸ್‌ನಲ್ಲಿ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ ಎಂದಿದ್ದಾರೆ ರಜತ್. ನನ್ನ ಜೊತೆ ಸ್ನೇಹಿತರು ಕೂಡ ಬರುತ್ತಿದ್ದಾರೆ. ಧರ್ಮಸ್ಥಳದಲ್ಲಿ ಮತ್ತೊಂದೆಡೆ ಶವಗಳ ಹೂತಿಟ್ಟಿರುವ ಕೇಸ್‌ನ ವಿಚಾರಣೆ ನಡೆಯುತ್ತಿದೆ. ಕೆಲವೆಡೆ ಅಸ್ಥಿಪಂಜರಗಳು ಸಿಕ್ಕಿವೆ. ಇದರಲ್ಲೂ ನ್ಯಾಯ ಸಿಗಬೇಕು ಎಂದು ರಜತ್ ಆಗ್ರಹಿಸಿದ್ದಾರೆ.

ನಾನು ಯಾರನ್ನೂ ಬ್ಲೇಮ್ ಮಾಡಲ್ಲ
ನಮಗೆ ಕಾನೂನಿನ ಅರಿವಿಲ್ಲದೆ ಒಂದು ರೀಲ್ಸ್ ಮಾಡಿದ್ದಕ್ಕೆ ನಮ್ಮನ್ನ ಜೈಲಿಗೆ ಕಳಿಸಿದ್ರು, ಆದರೆ ಸೌಜನ್ಯ ಅತ್ಯಾ*ಚಾರ ಕೇಸ್ ನಡೆದು 14 ವರ್ಷಗಳು ಕಳೆದರೂ ನ್ಯಾಯ ಸಿಕ್ಕಿಲ್ಲ. ಇದನ್ನು ಅವರು ಮಾಡಿದ್ದಾರೆ, ಇವರು ಮಾಡಿದ್ದಾರೆ ಅಂತ ಯಾರ ಮೇಲೂ ಬ್ಲೇಮ್ ಮಾಡಲ್ಲ. ಆ ಮೇಲೆ ಒನ್‌ಸೈಡ್ ಸ್ಟೋರಿ ಕೇಳಿಸಿಕೊಂಡೂ ನಾವು ಮಾತನಾಡುತ್ತಿಲ್ಲ. ಸೌಜನ್ಯ ರೀತಿ ಅನೇಕ ಹೆಣ್ಣುಮಕ್ಕಳಿಗೆ ಅನ್ಯಾಯ ಆಗಿದೆ. ಅವರಿಗೆಲ್ಲ ನ್ಯಾಯ ಸಿಗಬೇಕು ಅಷ್ಟೇ. ಆ ಕಾರಣಕ್ಕೆ ನಾನು ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ.
ಬಿಗ್‌ಬಾಸ್ ಕನ್ನಡ ಸೀಸನ್-11ರ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ರಜತ್ ಕಿಶನ್, ಅಲ್ಲಿಂದ ಹೊರಬಂದ ಮೇಲೆ ಮತ್ತೊಬ್ಬ ಸ್ಪರ್ಧಿ, ನಟ ವಿನಯ್ ಗೌಡ ಜೊತೆ ಮಚ್ಚು, ಲಾಂಗು ಹಿಡಿದು ರೀಲ್ಸ್ ಮಾಡಿದ್ದರು. ಇದು ವೈರಲ್ ಆಗಿ ರಜತ್ ಹಾಗೂ ವಿನಯ್ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಬಳಿಕ ಇಬ್ಬರನ್ನೂ ಅರೆಸ್ಟ್ ಮಾಡಲಾಗಿತ್ತು. ರೀಲ್ಸ್‌ನಲ್ಲಿ ನಿಜವಾದ ಮಾರಕಾಸ್ತ್ರಗಳನ್ನು ಬಳಸಿರುವ ಆರೋಪ ಕೇಳಿಬಂದಿತ್ತು. ಬಳಿಕ ಇಬ್ಬರಿಗೂ ಜಾಮೀನು ಸಿಕ್ಕಿದ್ದರಿಂದ ರಿಲೀಸ್ ಆಗಿದ್ದರು.
ಇನ್ನು ಅರಿವಿಲ್ಲದೆ ರೀಲ್ಸ್ ಮಾಡಿದ್ದಕ್ಕೆ ನಮಗೆ ಶಿಕ್ಷೆ ಕೊಟ್ಟರು, ಜೈಲಿಗೆ ಕಳಿಸಿದ್ರು. ಆದರೆ ಸೌಜನ್ಯ ಪ್ರಕರಣ ನಡೆದು 14 ವರ್ಷಗಳೇ ಕಳೆದಿವೆ. ಆದರೆ ಇಲ್ಲಿವರೆಗೆ ನ್ಯಾಯ ಸಿಕ್ಕಿಲ್ಲ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಬೇಕು. ಸೌಜನ್ಯಗೆ ನ್ಯಾಯ ಸಿಗಬೇಕು ಎಂದು ರಜತ್ ಕಿಶನ್ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ರಜತ್ ಸೌಜನ್ಯ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದರು. ಪ್ರಥಮ್ ವಿಚಾರವಾಗಿ ಪ್ರತಿಕ್ರಿಯಿಸಿ ತಾಕತ್ ಇದ್ರೆ ಸೌಜನ್ಯ ಕೇಸ್ ಬಗ್ಗೆ ಮಾತನಾಡಲಿ ಎಂದು ಸವಾಲ್ ಕೂಡ ಹೇಳಿದ್ದರು.












Click it and Unblock the Notifications