Bigg Boss: 'Pregnancyನಲ್ಲೂ ಅಷ್ಟು ಟೆಸ್ಟ್‌ಗಳನ್ನು ಮಾಡಿಸಿಲ್ಲ': ಬಿಗ್ ಬಾಸ್ ಪ್ರವೇಶ ಅಷ್ಟೊಂದು ಕಷ್ಟನಾ?
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಹಿರಿಯ ನಟಿ ಯಮುನಾ ಶ್ರೀನಿಧಿ ಒಂದೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಇದೀಗ ತಾವು ಬಂದ ಬಳಿಕ ಬಿಗ್ ಬಾಸ್ ಮನೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಯಮುನಾ ಶ್ರೀನಿಧಿ ಅವರು ಮಾತನಾಡಿದ್ದು, ಈ ವೇಳೆ ತಮಗೆ ಗೊಂದಲವಾದ ವಿಚಾರವೊಂದರ ಬಗ್ಗೆ ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ.
ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಯಮುನಾ ಶ್ರೀನಿಧಿ,' ಚೈತ್ರಾ ಕುಂದಾಪುರ ಪ್ರಜ್ಞೆ ತಪ್ಪಿ ಬಿದ್ದು ಎದ್ದು ಬಂದಿರುವ ವಿಚಾರವಾಗಿ ನನಗೆ ತುಂಬಾ ಗೊಂದಲ ಇದೆ. ಯಾಕೆಂದರೆ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೂ ಮುಂಚೆ ಆರೋಗ್ಯ ಸಂಬಂಧ ನಮಗೆ ನೂರಾರು ಪರೀಕ್ಷೆಗಳನ್ನು ಮಾಡಿಸಿರುತ್ತಾರೆ. ಯಾವ್ಯಾವ ಟೆಸ್ಟ್ ಮಾಡಿಸುತ್ತಾರೆ ಅಂದರೆ ನಾವು ಜೀವನದಲ್ಲಿ ಅಂತಹ ಟೆಸ್ಟ್‌ಗಳನ್ನು ಮಾಡಿಸಿಯೇ ಇರುವುದಿಲ್ಲ' ಎಂದು ಹೇಳಿದ್ದಾರೆ.

'ನಾನು ಗರ್ಭಿಣಿಯಾಗಿದ್ದಲ್ಲೂ ಅಷ್ಟು ಟೆಸ್ಟ್‌ಗಳನ್ನು ಮಾಡಿಸಿಲ್ಲ. ಅಂತಹ ನೂರಾರು ಟೆಸ್ಟ್ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೂ ಮುಂಚೆ ಮಾಡಿಸಿರುತ್ತಾರೆ. ಬರೀ ಬಿಪಿ, ಶುಗರ್, ಡಯಾಬಿಟಿಸಿ, ಕೊಲೆಸ್ಟರಾಲ್ ಮಾತ್ರ ಅಲ್ಲ. ಪ್ರತಿಯೊಂದರ ಪರೀಕ್ಷೆ ಕೂಡ ಮಾಡಿಸುತ್ತಾರೆ. ಒಂದು ಮನುಷ್ಯನಿಗೆ ಏನೇನು ಕಾಯಿಲೆ ಬರುವ ಸಾಧ್ಯತೆ ಇದೆಯೋ ಅಷ್ಟು ಟೆಸ್ಟ್‌ಗಳನ್ನು ಮಾಡಿಸಿರುತ್ತಾರೆ'.
'ನೀವು ಒಂದು ಸಲ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದೀರಾ ಅಂದರೆ ನೀವು ದೈಹಿಕವಾಗಿ ಸಮರ್ಥರಾಗಿದ್ದೀರಿ ಅಂತಾ ಅರ್ಥ. ನಿಮಗೆ ಯಾವ ತೊಂದರೆಯೂ ಇಲ್ಲ. ನೀವು ಆರೋಗ್ಯವಂತರು. ನೀವು ತುಂಬಾ ಚೆನ್ನಾಗಿದ್ದೀರಿ ಅಂತಾನೇ ಅರ್ಥ. ಅಂತಹ ವ್ಯಕ್ತಿಗೆ ಕೇವಲ ಎಂಟು ವಾರಗಳಲ್ಲಿ ಆ ರೀತಿಯಾಗಿ ಮೂರ್ಛೆ ತಪ್ಪಿ ಬಿದ್ದು, ಅಷ್ಟೊಂದು ಗಂಭೀರವಾದ ಪರಿಸ್ಥಿತಿ ಬಂದು ಆಸ್ಪತ್ರೆ ಸೇರಿಸುವ ಮಟ್ಟಕ್ಕೆ ಹೋಗುವುದು ನನಗೆ ಗೊತ್ತಿಲ್ಲ' ಎಂದರು.

'ಅವರು ಹೇಳುತ್ತಾರೆ ನಾನು ಊಟ-ತಿಂಡಿ ಸರಿಯಾಗಿ ಮಾಡಿಲ್ಲ ಅಂತಾ. ಆ ವಿಚಾರಕ್ಕೆ ಬಂದರೂನೂ ನನಗೆ ಉಪವಾಸ ಮಾಡುವ ಅಭ್ಯಾಸ ಇದೆ. ಪ್ರತಿ ಗುರುವಾರ ನಾನು ನೀರು ಬಿಟ್ಟರೆ ಬೇರೆ ಏನು ತಿನ್ನುವುದಿಲ್ಲ. ಈ ಅಭ್ಯಾಸವನ್ನು ವರ್ಷಾನು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ. ಆ ದಿನ ಒಂದು ಗಂಟೆ ಭರತನಾಟ್ಯ ಮಾಡಿ ಅಂದರೂ ಅಷ್ಟೇ ಉತ್ಸಾಹದಿಂದ ಮಾಡುತ್ತೇನೆ. ಶೂಟಿಂಗ್‌ಗಳಿಗೆ ಹೋಗುತ್ತೇನೆ. ಎಲ್ಲಾವನ್ನೂ ಮಾಡುತ್ತೇನೆ. ಹೀಗಾಗಿ ಒಂದು ದಿನ ಊಟ ಬಿಟ್ಟರೆ ಹಾಗೆ ಆಗುತ್ತದೆಯಾ ನನಗೆ ಗೊತ್ತಿಲ್ಲ' ಎಂದು ಹೇಳಿದರು.
ಇನ್ನು 'ಸುದೀಪ್ ಸರ್ ಈ ಬಗ್ಗೆ ಮಾತನಾಡುತ್ತಾರೆ. ವೈದ್ಯರ ವರದಿಯಲ್ಲಿ ಎಲ್ಲ ಸರಿ ಇದೆ. ಡಾಕ್ಟರ್ ಕೂಡ ಆರೋಗ್ಯವಾಗಿದ್ದಾರೆ ಎನ್ನುತ್ತಾರೆ. ನನ್ನ ಪ್ರಕಾರ ಚೈತ್ರಾ ಅವರ ಘಟನೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ. ಹೇಗೆಂದರೆ ಹೊರಗಡೆ ಹೋಗಿ ವಿಚಾರ ತಿಳಿದುಕೊಂಡು ಒಳಗೆ ಬಂದು ಹೇಳುವುದು ಅದನ್ನು ಆಟದ ಪರಿ ಅಂತಾ ಹೇಳಲು ಆಗುವುದಿಲ್ಲ. ಹೀಗಾಗಿ ನನ್ನ ಪ್ರಕಾರ ನಿಯಮ ಉಲ್ಲಂಘನೆ ಆಗಿದೆಯೇನೋ ಅನಿಸುತ್ತದೆ. ಆದರೆ ಅದಕ್ಕೆಲ್ಲಾ ಉತ್ತರ ಬಿಗ್ ಬಾಸ್‌ನಲ್ಲೇ ಇರುತ್ತದೆ' ಎಂದು ಯಮುನಾ ಶ್ರೀನಿಧಿ ಹೇಳಿದರು.












Click it and Unblock the Notifications