Rajath: ಬಿಗ್ ಬಾಸ್ ಕನ್ನಡ: ಆ ಕಾರಣಕ್ಕೆ ಪ್ರೇಕ್ಷಕರ ಮನಸ್ಸು ಗೆದ್ದ ರಜತ್
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ಹಂತಕ್ಕೆ ತಲುಪುತ್ತಿದ್ದು, ಆಟ ಇನ್ನಷ್ಟು ಇಂಟ್ರಸ್ಟಿಂಗ್ ಅನಿಸುತ್ತಿದೆ. ಫೈನಲಿಸ್ಟ್ ಆಗಬೇಕಿದ್ದ ಸ್ಪರ್ಧಿಗಳೇ ಎಲಿಮಿನೇಟ್ ಆಗುತ್ತಿದ್ದು, ಜಗಳ, ಕೂಗಾಟ, ಗಲಾಟೆಗಳು ಕೂಡ ಹೆಚ್ಚಾಗುತ್ತಿದೆ. ಸ್ಪರ್ಧಿಗಳ ಜಗಳದಲ್ಲಿ ಟಾಸ್ಕ್‌ಗಳು ರದ್ದಾಗುತ್ತಿದ್ದು, ನಾಮಿನೇಷನ್ ಕಾವು ದಿನದಿಂದ ದಿನಕ್ಕೆ ಜೋರಾಗಿದೆ. ಈ ಎಲ್ಲಾ ಬೆಳವಣಿಗೆಯ ಜೊತೆಗೆ ಸ್ಪರ್ಧಿಗಳ ಮೇಲಿದ್ದ ಜನರ ಅಭಿಪ್ರಾಯ ಕೂಡ ಬದಲಾಗುತ್ತಿದೆ.
ಈಗಾಗಲೇ ಅನೇಕ ಸ್ಪರ್ಧಿಗಳ ಮೇಲಿನ ಪ್ರೇಕ್ಷಕರ ಅಭಿಪ್ರಾಯ ಬದಲಾಗಿದ್ದು, ಈ ಪೈಕಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ರಜತ್ ಕಿಶನ್ ಮೇಲಿನ ಸಂಪೂರ್ಣ ಅಭಿಪ್ರಾಯ ಬದಲಾಗಿ ಹೋಗಿದೆ. ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಅಗ್ರೇಸಿವ್ ಆಗಿ ಆಟ ಆಡುತ್ತಿದ್ದ ರಜತ್ ಆಟಗಳ ಮಧ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಪ್ರತಿಯೊಂದು ವಿಚಾರಕ್ಕೂ ಮನೆಯ ಇತರ ಸ್ಪರ್ಧಿಗಳ ಜೊತೆ ಕಿರಿಕ್ ತೆಗೆಯುತ್ತಿದ್ದರು.

ಮೊದಲಿನಿಂದಲೂ ಪ್ರತಿಯೊಬ್ಬರ ಜೊತೆಗೂ ಧ್ವನಿ ಏರಿಸೇ ಮಾತನಾಡುತ್ತಿದ್ದ ರಜತ್ ವೀಕೆಂಡ್ ಸಂಚಿಕೆಯಲ್ಲಿಯೂ ಇತರ ಸ್ಪರ್ಧಿಗಳಿಗೆ ತಮ್ಮ ಡೈಲಾಗ್ ಮೂಲಕ ಎಚ್ಚರಿಕೆ ನೀಡುತ್ತಿದ್ದರು. ಮೊದಮೊದಲು ಗೋಲ್ಡ್ ಸುರೇಶ್, ಉಗ್ರಂ ಮಂಜು ಹಾಗೂ ತಮಗೆ ಕಳಪೆ ಕೊಟ್ಟವರ ವಿರುದ್ಧ ತನ್ನ ರೋಷಾವೇಶ ಪ್ರದರ್ಶಿಸಿದ್ದ ರಜತ್ ಇತ್ತೀಚಿಗೆ ಧನರಾಜ್ ಜೊತೆ ಕೂಡ ಜಗಳವಾಡಿದ್ದರು. ವೀಕೆಂಡ್‌ನಲ್ಲಿ ಈ ಬಗ್ಗೆ ಚರ್ಚೆ ನಡೆದು ಶಿಕ್ಷೆ ಕೂಡ ಅನುಭವಿಸಿದ್ದಾರೆ. ಅದೇನೇ ಇದ್ದರೂ ರಜತ್ ಮೇಲಿದ್ದ ಪ್ರೇಕ್ಷಕರ ಅಭಿಪ್ರಾಯ ಬದಲಾಗಿದೆ.
ಹೌದು ಮೊದಮೊದಲು ಶೋನಲ್ಲಿ ಇತರ ಸ್ಪರ್ಧಿಗಳ ಜೊತೆ ಜಗಳವಾಡುತ್ತಿದ್ದ ಪ್ರೇಕ್ಷಕರ ಕೋಪಕ್ಕೆ ಕಾರಣರಾಗುತ್ತಿದ್ದ ರಜತ್ ಈಗ ಬಹುತೇಕರ ಮೆಚ್ಚಿನ ಸ್ಪರ್ಧಿಯಾಗಿದ್ದಾರೆ. ತಮಾಷೆ ಹಾಗೂ ಕೆಲವು ಸ್ಪರ್ಧಿಗಳ ಬಗ್ಗೆ ರಜತ್ ತೋರಿಸುವ ಕಾಳಜಿ, ಸರಿಯಾದ ಸಮಯದಲ್ಲಿ ವಾದ, ಕೆಲವು ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವವನ್ನು ಹೊರಗೆ ತರುತ್ತಿರುವ ರಜತ್ ಟಾಸ್ಕ್‌ಗಳಲ್ಲಿಯೂ ಉತ್ತಮವಾಗಿ ಆಡುತ್ತಿದ್ದಾರೆ.
ಚೈತ್ರಾ ಕುಂದಾಪುರ ಜೊತೆಗೆ ಸದಾ ಜಗಳಕ್ಕೆ ಇಳಿದರೂ ಸಹ ರಜತ್ ಕೆಲವೊಂದು ಸಮಯದಲ್ಲಿ ಆಕೆಯ ಬಗ್ಗೆ ಕಾಳಜಿ ತೋರಿಸುತ್ತಿರುವುದು ಪ್ರೇಕ್ಷಕರ ಮನ ಗೆದ್ದಿದೆ. ನಿನ್ನೆ ನಡೆದ ಚೆಂಡಿನ ಟಾಸ್ಕ್‌ನಲ್ಲಿ ಚೈತ್ರಾ ಕುಂದಾಪುರ ಸೋತು ಕಂಗಲಾಗಿದ್ದ ವೇಳೆ ಇದೇ ರಜತ್ ಎದುರಾಳಿ ತಂಡವಾದರೂ ಸಹ ಆಕೆಯನ್ನು ಸಮಾಧಾನ ಪಡಿಸಿ ಆಡುವಂತೆ ಬೆಂಬಲ ನೀಡುತ್ತಿದ್ದರು. ಅಲ್ಲದೇ ಆಕೆಗೆ ನೀರು ಬೇಕಾ ತಂದು ಕೊಡಲಾ? ಅಳಬೇಡ ಎಂದು ಸಮಾಧಾನ ಮಾಡುತ್ತಿದ್ದರು. ಚೈತ್ರಾ ಕುಂದಾಪುರ ತಂಡದ ಪ್ರತಿಯೊಬ್ಬರು ಆಕೆಯ ಮೇಲೆ ಎರಗುವಾಗ ರಜತ್ ಮಾತ್ರ ಆಕೆಯ ಬೆಂಬಲಕ್ಕೆ ನಿಂತಿದ್ದು ಪ್ರೇಕ್ಷಕರು ರಜತ್ ಒಳ್ಳೆಯತನಕ್ಕೆ ಜೈ ಎಂದಿದ್ದಾರೆ.












Click it and Unblock the Notifications