BBK-12 Elimination: ರಾತ್ರೋರಾತ್ರಿ ಮಿಡ್ ವೀಕ್ ಎಲಿಮಿನೇಷನ್; ಬಿಗ್‌ಬಾಸ್‌ನಿಂದ ಈ ಸ್ಪರ್ಧಿ ಹೊರಕ್ಕೆ
Bigg Boss Kannada12: ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಈ ಬಾರಿ ಅಚ್ಚರಿ ಎನ್ನುವಂತೆ ಸ್ಪರ್ಧಿಯೊಬ್ಬರು ಮನೆಯಿಂದ ಹೊರನಡೆದಿದ್ದಾರೆ. ನಿನ್ನೆಯೇ ಬಿಗ್‌ಬಾಸ್‌ನಲ್ಲಿ ಎಲಿಮಿನೇಷನ್ ನಡೆದಿದ್ದು, ಮಿಡ್ ಸೀಸನ್ ಫಿನಾಲೆಗೂ ಮುನ್ನವೇ ಒಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ಈ ಬಾರಿ ಎರಡು ಫಿನಾಲೆ ಇರುತ್ತದೆ, ಇದು ಮೂರನೇ ವಾರವೇ ನಡೆಯಲಿದೆ ಎಂದು ಬಿಗ್‌ಬಾಸ್ ಅನೌನ್ಸ್ ಮಾಡಿದ್ದರು. ಕಳೆದ ವಾರವೂ ಯಾವುದೇ ಎಲಿಮಿನೇಷನ್ ಇಲ್ಲದ ಕಾರಣ ಸ್ಪರ್ಧಿಗಳು ರಿಲೀಫ್ ಆಗಿದ್ದರು. ಆದರೆ ತಡರಾತ್ರಿ ಮನೆಮಂದಿಗೆ ಶಾಕ್ ನೀಡಿರುವ ಬಿಗ್‌ಬಾಸ್, ಎಲಿಮಿನೇಷನ್ ಪ್ರಕ್ರಿಯೆ ನಡೆಸಿದೆ.
ಗುರುವಾರದ ಸಂಚಿಕೆಯಲ್ಲಿ ಬಿಗ್ ಟ್ವಿಸ್ಟ್ ನೀಡಲಾಗಿದೆ. ಮಧ್ಯರಾತ್ರಿಯೇ ದಿಢೀರ್ ಎಲಿಮಿನೇಷನ್ ಪ್ರಕ್ರಿಯೆ ನಡೆಸಿ ಒಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಫಿನಾಲೆಗೂ ಮುನ್ನವೇ ಈ ಎಲಿಮಿನೇಷನ್ ನೋಡಿ ಬಾಕಿ ಸ್ಪರ್ಧಿಗಳು ಆತಂಕದಲ್ಲಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸೈರನ್ ಮೊಳಗಿಸಿ, ಎಲಿಮಿನೇಷನ್ ಪ್ರಕ್ರಿಯೆ ಶುರು ಮಾಡಲಾಯಿತು. ಸ್ಪರ್ಧಿಗಳೆಲ್ಲರನ್ನ ಕರೆದು ನಿಮ್ಮಲ್ಲಿ ಯಾರು ಮನೆಯಿಂದ ಹೊರಗೆ ಹೋಗಬೇಕು ಎಂದು ಕೇಳಿದರು. ಆಗ ಬಹುತೇಕರು ಡಾಗ್ ಸತೀಶ್ ಅವರ ಹೆಸರು ಸೂಚಿಸಿದರು. ಈ ಹಿನ್ನೆಲೆ ಮೂರನೇ ವಾರಕ್ಕೆ ಸತೀಶ್ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆದರು.

ಎಲಿಮಿನೇಷನ್‌ನಲ್ಲಿ ಸತೀಶ್ ಬಹುಮತ
ಗ್ರ್ಯಾಂಡ್ ಫಿನಾಲೆಗೂ ಮುನ್ನವೇ ಒಬ್ಬರ ಆಟ ಮುಗಿಯಲಿದೆ. ಒಬ್ಬರು ಬಿಗ್‌ಬಾಸ್ ಮನೆಯಿಂದ ಹೊರಹೋಗುತ್ತಾರೆ. ಯಾರನ್ನು ನೀವು ಮನೆಯಿಂದ ಆಚೆ ಹಾಕಲು ಇಚ್ಛಿಸುತ್ತೀರಿ ಎಂಬುದನ್ನು ಘೋಷಿಸಿ ಎಂದು ಬಿಗ್‌ಬಾಸ್ ಹೇಳಿದರು. ಚಂದ್ರಪ್ರಭ, ರಾಶಿಕಾ, ಮಾಳು ನಿಪನಾಳ, ಅಭಿಷೇಕ್, ಮಂಜು ಭಾಷಿಣಿ, ಕಾವ್ಯ, ಅಶ್ವಿನಿ, ಸ್ಪಂದನಾ, ಧನುಶ್, ಮಲ್ಲಮ್ಮ ಎಲ್ಲರೂ ಸತೀಶ್ ಹೆಸರನ್ನೇ ಸೂಚಿಸಿದರು. ಕೆಲವರು ರಕ್ಷಿತಾ, ಜಾಹ್ನವಿ ಹೆಸರು ಹೇಳಿದರು. ಆದರೆ ಸತೀಶ್ ಆಟ ಕಳಪೆ ಎಂದು ಕಾರಣ ನೀಡಿ ಹೆಚ್ಚಿನವರು ಎಲಿಮಿನೇಟ್ ಮಾಡಿದ್ದು, ಅಂತಿಮವಾಗಿ ಸತೀಶ್ ಹೊರಬಂದಿದ್ದಾರೆ.
ಅಕ್ಟೋಬರ್ 18 ಹಾಗೂ 19ರಂದು ಮಿಡ್ ಸೀಸನ್ ಫಿನಾಲೆ ಕೂಡ ನಡೆಯಲಿದೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ, ರಾಶಿಕಾ ಫೈನಲಿಸ್ಟ್‌ಗಳಾಗಿದ್ದಾರೆ. ಉಳಿದವರ ಪೈಕಿ ಹಲವು ನಾಮಿನೇಟ್ ಆಗಿದ್ದಾರೆ. ಅಲ್ಲದೆ ಈ ಭಾರಿ ನಿಮ್ಮಲ್ಲಿ ಅರ್ಧ ಮಂದಿ ಬದಲಾಗಲೂಬಹುದು ಎಂದು ಕಿಚ್ಚ ಸುದೀಪ್ ಹೇಳಿದ್ದರು. ಹೀಗಾಗಿ ಫಿನಾಲೆಯಲ್ಲಿ ಎಷ್ಟು ಮಂದಿ ಆಟ ಮುಗಿಸಲಿದ್ದಾರೆ ಎಂಬುದೇ ಈಗ ಎದುರಾಗಿರುವ ಕುತೂಹಲ.












Click it and Unblock the Notifications