Bigg Boss: ನಾನು ಕಪ್ ಯಾವಾಗ್ಲೋ ಗೆದ್ದಾಯ್ತು- ಹನುಮಂತ ಹೀಗಂದಿದ್ದು ಯಾಕೆ?

ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡಿರುವ ಆರು ಜನ ಸ್ಪರ್ಧಿಗಳಿಗೆ ಟ್ರೋಫಿ ಅನ್ನು ತೋರಿಸಲಾಗಿದೆ. ಈ ಟ್ರೋಫಿ ನೋಡಿದ ಸ್ಪರ್ಧಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅಲ್ಲದೆ ಈ ಟ್ರೋಫಿ ಗೆಲ್ಲುವುದು ತಮಗೆ ಎಷ್ಟು ಅವಶ್ಯಕತೆ ಇದೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಆದರೆ ಸಿಂಪಲ್ ಹುಡುಗ ಹುನುಮಂತ ಹೇಳಿದ ಮಾತು ಮಾತ್ರ ಬಿಗ್‌ಬಾಸ್‌ ವೀಕ್ಷಕರ ಮನ ಗೆದ್ದಿದೆ. ಹಾಗಾದರೆ ಟ್ರೋಫಿ ಬಗ್ಗೆ ಹನುಮಂತ ಹೇಳಿದ್ದೇನು? ಹನುಮಂತನ ವೀಡಿಯೋ ಕ್ಲಿಪ್‌ಗೆ ವೀಕ್ಷಕರು ನೀಡಿದ ಪ್ರತಿಕ್ರಿಯೆ ಏನು?

ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನೇನು ಬೆರಳೆಣಿಕೆಷ್ಟು ದಿನ ಮಾತ್ರ ಬಾಕಿ ಇದೆ. ಇತ್ತ ಬಿಗ್‌ಬಾಸ್‌ ಮನೆಯಲ್ಲಿ ಆರು ಜನ ಸ್ಪರ್ಧಿಗಳು ಉಳಿದುಕೊಂಡಿದ್ದು ಯಾರು ಮನೆಗೆ ಹೋಗಲಿದ್ದಾರೆ, ಕಿಚ್ಚ ಸುದೀಪ್ ಎಡಗೈ ಹಾಗೂ ಬಲಗೈಯಲ್ಲಿ ಯಾರಿಬ್ಬರ ಕೈ ಇರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.

bigg boss hanumantha said that I won the cup as applause from kichcha sudeep sir

ಈ ಸೀಸನ್‌ನಲ್ಲಿ ಗೆಲ್ಲುವ ಸ್ಪರ್ಧಿಗೆ ಟ್ರೋಫಿ ಜೊತೆಗೆ ಹಣ ಕೂಡ ಸಿಗುವುದು. ಆದರೆ ಈ ಟ್ರೋಫಿ ಬಗ್ಗೆ ಗಾಯಕ ಹನುಮಂತ ಹೇಳಿದ ಆ ಒಂದು ಮಾತು ಬಿಗ್‌ಬಾಸ್‌ ವೀಕ್ಷಕರ ಹೃದಯದ ಆಳಕ್ಕೆ ಹೋಗಿದೆ. ಆ ವೀಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಹೌದು... ಹನುಮಂತ ಮಂಜು ಅವರೊಂದಿಗೆ ಮಾತನಾಡುವಾಗ, 'ಮಂಜಣ್ಣ ನಾನು ಕಪ್ ಈಗಾಗಲೇ ಗೆದ್ದಿದ್ದೇನೆ. ಯಾವಾಗ ಗೊತ್ತಾ? ಬಿಗ್‌ಬಾಸ್‌ ಮನೆಗೆ ಬರುವಾಗ ಅವ್ವಾ ಹೇಳಿ ಕಳ್ಸಿದ್ಲು. ಸುದೀಪ್ ಸರ್ ಚಪ್ಪಾಳೆ ತಗೊಂಡು ಬಾ ಅಂತ. ನನಗೆ ಅಷ್ಟೇ ಸಾಕು. ನಾನು ಸುದೀಪ್ ಸರ್ ಚಪ್ಪಾಳೆ ತಗೊಂಡು ದಿನಾನೇ ಗೆದ್ದು ಬಿಟ್ಟೆ. ಬಂದು ಎರಡೇ ವಾರಕ್ಕೆ ಸುದೀಪ್ ಸರ್ ಚಪ್ಪಾಳೆ ತಗೊಂಡೆ. ಟ್ರೋಫಿ ಯಾರು ಬೇಕಾದ್ರೂ ತಗೊಂಡು ತಲೆ ಮೇಲೆ ಇಟ್ಕೊಂಡು ಹೋಗಲಿ. ಇಲ್ಲಿ ಕಲ್ತಿರೋ ಪಾಠ ತಲೆಯಲ್ಲಿ ಇಟ್ಟುಕೊಂಡು ಹೋದರೆ ಜೀವನನಾ ಗೆಲ್ತೀವಿ' ಎಂದು ಹೇಳಿದ್ದಾರೆ.

ಹನುಮಂತನ ಈ ಮಾತಿನ ವೀಡಿಯೋ ಕ್ಲಿಪ್ ಸಖತ್ ವೈರಲ್ ಆಗಿದೆ. ಹನುಮಂತನ ಈ ಮಾತಿಗೆ ಜನ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹನುಮಂತನ ಮಾತಿನಲ್ಲಿ ಸಾಕಷ್ಟು ಅರ್ಥ ಇದೆ. ಅವರು ಯಾವತ್ತು ದುಡ್ಡಿಗಾಗಿ ಆಸೆ ಪಟ್ಟವರಲ್ಲ. ದುಡ್ಡಿಗಾಗಿ ಮೋಸ ಮಾಡಿದವರಲ್ಲ. ದುಡ್ಡು ಗೆಲ್ಲಬೇಕು ಅಂತ ಮೋಸದ ಆಟ ಆಡಿಲ್ಲ. ಹನುಮಂತನ ಮನಸ್ಸು ಪರಿಶುದ್ಧ. ಹೀಗಾಗಿ ಈ ಬಾರಿ ಹನುಮಂತನೇ ಗೆಲ್ಲಬೇಕು ಎಂದು ಜನ ಕಾಮೆಂಟ್ ಮಾಡಿದ್ದಾರೆ.

ಹನುಮಂತನ ಮಾತಿಗೆ ಜನ ಫುಲ್ ಮಾರ್ಕ್ಸ್

'ಬಿಗ್‌ಬಾಸ್‌ ಮನೆಯಲ್ಲಿ ಗೆಲ್ಲಬೇಕು ಅಂತ ಬಂದವರಿದ್ದಾರೆ. ಆದರೆ ಹನುಮಂತನಂತೆ ಯಾರೂ ಇಲ್ಲ, ಯಾರೂ ಕೂಡ ಹನುಮಂತನಂತೆ ಯೋಚನೆ ಮಾಡಲು ಸಾಧ್ಯವೇ ಇಲ್ಲ' ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ. 'ಹನುಮಂತ ಪರಿಶುದ್ಧ ಚಿನ್ನ. ಅಪ್ಪಟ ಬಂಗಾರ. ಹಳ್ಳಿ ಹುಡುಗ ಈ ಬಾರಿ ಗೆಲ್ಲಬೇಕು, ಬಡ ಮಕ್ಕಳು ಗೆಲ್ಲಬೇಕು' ಎಂದು ಜನ ಓಟ್‌ಗಾಗಿ ಅಭಿಯಾನ ಶುರು ಮಾಡಿದ್ದಾರೆ.

ಅಲ್ಲದೆ 'ಹಣ ಬಂತು ಅಂತ ಹನುಮಂತ ಬದಲಾಗುವುದಿಲ್ಲ. ಹನುಮಂತ ಸರಳ ಹುಡುಗ. ಆತನಿಗಿರುವ ಬುದ್ಧಿಶಕ್ತಿ ಯೋಚನಾ ಶಕ್ತಿ, ವಿದ್ಯಾವಂತರಾದ ಇತರ ಬಿಗ್‌ಬಾಸ್‌ ಸ್ಪರ್ಧಿಗಳಿಗಿಲ್ಲ ಹೀಗಾಗಿ ಹನುಮಂತನೇ ಈ ಬಾರಿ ಗೆಲ್ಲಬೇಕು ಎಂದು ವಿಡಿಯೋ ಕ್ಲಿಪ್‌ಗೆ ಜನ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಹನುಮಂತ ಕಪ್ ಗೆಲ್ಲುವುದು ಪಕ್ಕಾ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+