Bigg Boss: ತಾಯಿಯನ್ನು ಕಳೆದುಕೊಂಡ ದು:ಖದಲ್ಲಿ ಸುದೀಪ್: ಬಿಗ್‌ಬಾಸ್‌ ಮನೆಗೆ ಬಂದ ಯೋಗರಾಜ್ ಭಟ್

ತಾಯಿಯನ್ನು ಕಳೆದುಕೊಂಡ ದು:ಖದಲ್ಲಿರುವ ಕಿಚ್ಚ ಸುದೀಪ್ ಈ ವಾರ ಬಿಗ್‌ಬಾಸ್‌ ನಿರೂಪಣೆಗೆ ಗೈರಾಗಿದ್ದಾರೆ. ಇದರಿಂದಾಗಿ ವಾರದ ಕಥೆ ಕಿಚ್ಚನ ಬದಲಿಗೆ ಬೇರೆಯವರೊಂದಿಗೆ ನಡೆದಿದೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಮನೆ ಸ್ಪರ್ಧಿಗಳು ಯಾರೊಂದಿಗೆ ವಾರದ ಕಥೆಯನ್ನು ಹಂಚಿಕೊಂಡರು? ಈ ವಾರ ಮನೆಗೆ ಪ್ರವೇಶಿಸಿ ಮನೆ ಸದಸ್ಯರ ಸಮಸ್ಯೆಗಳನ್ನು ಆಲಿಸಿ, ಸಲಹೆ ನೀಡಿದವರು ಯಾರು?

ಪ್ರತೀ ಶನಿವಾರ ಹಾಗೂ ಭಾನುವಾರ ಚಿಕ್ಕ ಸುದೀಪ್ ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳೊಂದಿಗೆ ನ್ಯಾಯಪಂಚಾಯಿತಿ ಮಾಡುವುದನ್ನು ಕರ್ನಾಟಕದ ಜನತೆ ಎದುರು ನೋಡುತ್ತಾರೆ. ಆದರೆ ಈ ಬಾರಿ ಸುದೀಪ್ ಬಿಗ್‌ಬಾಸ್‌ ಶೋನಲ್ಲಿ ನಿರೂಪಣೆ ಮಾಡುತ್ತಿಲ್ಲ. ಇದಕ್ಕೆ ಕಾರಣ ಎಲ್ಲರಿಗೂ ತಿಳಿದೇ ಇದೆ.

Bigg Boss Director Yogaraj Bhat came to Bigg Boss house

ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರ ಅಗಲಿಕೆಯ ದು:ಖದಲ್ಲಿ ಇದ್ದಾರೆ. ಹೀಗಾಗಿ ಅವರು ಈ ವಾರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಮನೆಯಲ್ಲಿ ಕೆಲ ಕಾರ್ಯಗಳನ್ನು ಮಾಡಬೇಕಾಗಿರುವುದರಿಂದಾಗಿ ಸುದೀಪ್ ಅವರು ಬಿಗ್‌ಬಾಸ್‌ ನಿರೂಪಣೆಗೆ ಈ ವಾರ ಗೈರಾಗಿದ್ದಾರೆ.

ಆದರೆ ಅವರ ಬದಲಿಗೆ ಈ ವಾರ ಬಿಗ್‌ಬಾಸ್‌ ಮನೆಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಭೇಟಿ ನೀಡಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕರೊಬ್ಬರು ಬಿಗ್‌ಬಾಸ್‌ ಮನೆಗೆ ಪ್ರವೇಶ ಮಾಡಿರುವುದು ಇದೇ ಮೊದಲು ಯೋಗರಾಜ್‌ ಭಟ್ ಅವರು ಪ್ರತಿಯೊಬ್ಬ ಸ್ಪರ್ಧಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳುತ್ತಾರೆ.

ಆ ಪ್ರಶ್ನೆಗಳಿಗೆ ಸ್ಪರ್ಧಿಯಿಂದ ಉತ್ತರ ಪಡೆದು ಮನೆಯ ಇತರ ಸದಸ್ಯರಿಂದ ಅಭಿಪ್ರಾಯ ಪಡೆದು ಕೊನೆಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಸ್ಪರ್ಧಿಗಳು ಯಾವ ರೀತಿ ಮನೆಯಲ್ಲಿ ಇದ್ದರೆ ಮನೆಯಲ್ಲಿ ಹೆಚ್ಚು ಸಮಯ ಉಳಿಯಬಹುದು, ಅಲ್ಲದೆ ಸ್ಪರ್ಧಿಗಳಲ್ಲಿ ಕಂಡು ಬರುವ ನ್ಯೂನ್ಯತೆಗಳನ್ನು ತಿದ್ದಿಕೊಳ್ಳುವಂತೆಯೂ ತಿಳಿಸಿದ್ದಾರೆ.

ಈ ಬಾರಿ ಸುದೀಪ್ ಅವರು ಯಾಕೆ ಬಂದಿಲ್ಲ ಅನ್ನೋ ಬಗ್ಗೆ ಮನೆಯ ಸದಸ್ಯರಿಗೂ ಗೊಂದಲ ಇದೆ. ಈ ಪ್ರಶ್ನೆಗೆ ಯೋಗರಾಜ್ ಭಟ್ ಅವರು ಕೊನೆಯಲ್ಲಿ ಉತ್ತರ ನೀಡುವುದಾಗಿ ಹೇಳುತ್ತಾರೆ. ಇನ್ನೂ ಸ್ಪರ್ಧಿಗಳೊಂದಿಗೆ ಮಾತು ಮುಂದುವರೆಸಿದ ಯೋಗರಾಜ್ ಭಟ್ ಅವರು, ಮಾನಸ ಅವರ ಮಾತುಗಳ ಬಗ್ಗೆ ಮನೆಯ ಇತರ ಸದಸ್ಯರ ಅಭಿಪ್ರಾಯ ಪಡೆದರು.

ಜೊತೆಗೆ ಮಾನಸಾ ಅವರ ಅಭಿಪ್ರಾಯ ಪಡೆದು ಕೆಲ ಸಲಹೆಯನ್ನು ನೀಡಿದರು. ಬಿಗ್‌ಬಾಸ್‌ ನೋಡುವ ಪ್ರೇಕ್ಷಕರಿಗೆ ಮಾನಸಾ ಅವರ ಮಾತುಗಳು ಬೇಸರ ತಂದಿದೆ. ಹೀಗಾಗಿ ನಿಮ್ಮ ಮಾತಿನ ದಾಟಿಯನ್ನು ಬದಲಾಯಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ಮಾತನಾಡುವ ಮಾತು ಹೀಗೆ ಇರಬಹುದು. ಆದರೆ ನಿಮ್ಮ ಮನೆಯಲ್ಲಿ ಪ್ರೇಕ್ಷಕರು ಇರುವುದಿಲ್ಲ. ಆದರೆ ನೀವು ಬಿಗ್‌ಬಾಸ್‌ ಮನೆಯಲ್ಲಿ ಇದ್ದೀರಿ. ನಿಮ್ಮನ್ನು ಲಕ್ಷಾಂತರ ಜನ ನೋಡುತ್ತಾರೆ. ಹೀಗಾಗಿ ನೀವು ನಿಮ್ಮ ಮಾತಿನ ಶೈಲಿಯನ್ನು ಬದಲಾಯಿಸಿಕೊಳ್ಳಲೇ ಬೇಕು ಎಂದು ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+