Bigg Boss: ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಗುಡುಗಿದ ಚೈತ್ರಾ: ಧನು-ಹನು ಗರಂ
ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರದಲ್ಲಿ ಚೈತ್ರಾ ಕುಂದಾಪುರ ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ. ಚೈತ್ರಾ ಕೂಗಾಟಕ್ಕೆ ಮನೆಯಲ್ಲಿ ಸೈಲೆಂಟ್ ಆಗಿರುವ ಹನುಮಂತ ಲಮಾಣಿ ಕೂಡ ಕೋಪಗೊಂಡಿದ್ದಾರೆ. ಚೈತ್ರಾ ವಾಗ್ವಾದಕ್ಕೆ ಧನ್‌ರಾಜ್ ಹಾಗೂ ಹನುಮಂತಾ ಸಿಕ್ಕಾಪಟ್ಟೆ ಗರಂ ಆಗಿದ್ದು ಕಂಡು ಬಂದಿದೆ. ಇಂದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡ ವೀಡಿಯೋದಲ್ಲಿ ಚೈತ್ರಾ ಹಾಗೂ ಧನು-ಹನು ನಡುವೆ ಜೋರು ಜಗಳವಾಗಿದೆ. ಹಾಗಾದರೆ ವೈರಲ್ ವೀಡಿಯೋದಲ್ಲಿ ಏನಿದೆ? ಚೈತ್ರಾ ಜೊತೆಗೆ ಗಲಾಟೆ ಆಗಿದ್ದು ಯಾಕೆ?
ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ಅನ್ನು ನೀಡಿರುತ್ತಾರೆ. ಈ ಟಾಸ್ಕ್‌ನಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ. ಟಿವಿಯಲ್ಲಿ ತೋರಿಸಿದ ಚಿತ್ರಿವಿರುವ ದಿಂಬನ್ನು ಮನೆಯ ಗಾರ್ಡನ್ ಏರಿಯಾದಲ್ಲಿ ಇಟ್ಟಿರುವ ದಿಂಬುಗಳಲ್ಲಿ ಹುಡುಕಿ ತಂಡದ ಸದಸ್ಯ ಮೀಸಲಿರುವ ಚೌಕಟ್ಟಿಗೆ ಬರಬೇಕು. ದಿಂಬನ್ನು ತರುವ ಸದಸ್ಯರನ್ನು ವಿರುದ್ಧ ತಂಡದವರು ತಡೆಯಬಹುದು. ಈ ಟಾಸ್ಕ್ ಅನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಚೈತ್ರಾ ಹಾಗೂ ಧನ್‌ರಾಜ್ ನಡುವೆ ಜಗಳವಾಗಿದೆ.

ಟಾಸ್ಕ್ ಆಡುವಾಗ ಚೈತ್ರಾಗೆ 'ನಾಚಿಕೆ ಆಗಲ್ವಾ' ಎಂದು ಧನ್‌ರಾಜ್ ಹೇಳುತ್ತಾರೆ. ಇದಕ್ಕೆ ಚೈತ್ರಾ ಜೋರಾಗಿ ಕೂಗಾಡಿದ್ದಾರೆ. 'ಯಾರಿಗೆ ನೀನು ನಾಚಿಕೆ ಆಗಲ್ವಾ ಎಂದು ಕೇಳ್ತಾಯಿದಿಯಾ' ಎಂದು ಕಿರುಚಾಡಿದ್ದಾರೆ. ಈ ಗಲಾಟೆ ಇಷ್ಟಕ್ಕೆ ಮುಗಿಯುವುದಿಲ್ಲ. ಧನ್‌ರಾಜ್ ಬಳಿಕ ಚೈತ್ರಾ ಹಾಗೂ ಹನುಮಂತನ ನಡುವೆ ಜಗಳ ಆಗಿದೆ.
ಕೋಪದಲ್ಲಿ ಹನುಮಂತ, 'ತಲಿ ಆಫ್ ಆದ್ರಾ ನಾ ಮೊದಲೇ ಸರಿಯಿಲ್ಲ. ಇಲ್ಲಿ ಯಾರಾದರೂ ಗಣ್ಮಕ್ಕಳು ಇದ್ದಿದ್ದರೆ ಮಾತೇ ಬೇರೆ ಇರುತ್ತಿತ್ತು' ಎಂದು ತನ್ನದೇ ಆದ ಶೈಲಿಯಲ್ಲಿ ಚೈತ್ರಾ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಮನೆಯ ಸ್ಪರ್ಧಿಗಳ ನಡುವೆ ಗಲಾಟೆ ನಡೆದು ಆಟದ ನಿಮಯ ಪಾಲಿಸದ ಕಾರಣ ಆಟವನ್ನು ಬಿಗ್‌ಬಾಸ್ ರದ್ದು ಮಾಡಿದ್ದಾರೆ. ಇದರಿಂದಾಗಿ ಮನೆಯ ಇತರ ಸದಸ್ಯರು ಬೇಸರಗೊಂಡಿದ್ದು ಕಂಡು ಬಂದಿದೆ. ಅಷ್ಟಕ್ಕೂ ಆಟ ರದ್ದಾಗಿದ್ದು ಯಾಕೆ? ಈ ಚೈತ್ರಕ್ಕಾ ಧನು-ಹನು ಜೊತೆಗೆ ಕೂಗಾಡಿದ್ದು ಯಾವ ಕಾರಣಕ್ಕೆ ಎನ್ನುವುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇತ್ತೀಚೆಗೆ ಹೆಚ್ಚಾಗುತ್ತಿದೆ ರಜತ್ ಗಲಾಟೆ
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ರಜತ್ ಇತ್ತೀಚೆಗೆ ಚೈತ್ರಾ ಅವರಂತೆ ಹೆಚ್ಚು ಕೋಪ ಮಾಡಿಕೊಳ್ಳುತ್ತಿದ್ದಾರೆ. ನಾನು, ನಾನು ಹೀಗೆ, ನಾನ್ ಬದಲಾಗಲ್ಲ, ನಾನ್ ಮಾಡಲ್ಲ, ಏನಿಗಾ? ಯಾಕೀಗ? ಹೀಗೆ ಪ್ರಶ್ನೆ ಮಾಡುತ್ತಾ ಮನೆ ಮಂದಿಗೆಲ್ಲಾ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ ರಜತ್. ಇದರಿಂದಾಗಿ ಮನೆ ಸದಸ್ಯರಿಗೆ ಅವರನ್ನು ನಾಮಿನೇಟ್ ಮಾಡಿದರೂ ಕಷ್ಟ, ಆಟದಲ್ಲಿ ಕರೆದುಕೊಂಡರೂ ಕರೆದುಕೊಳ್ಳದೇ ಇದ್ದರೂ ಕಷ್ಟ ಎನ್ನುವಂತಾಗಿದೆ. ಆರಂಭದಲ್ಲಿ ರಜತ್ ಕೆಟ್ಟ ಪದ ಬಳಿಕೆಗೆ ಮನೆಯ ಸದಸ್ಯರು ಮಾತ್ರವಲ್ಲ ಬಿಗ್‌ಬಾಸ್ ವೀಕ್ಷಕರಿಗೂ ಬೇಸರವಾಗಿದ್ದರು. ನಂತರ ಅವರ ಆಟದ ಶೈಲಿ ಬದಲಾಗಿತ್ತು. ಇದೀಗ ಮತ್ತೆ ರಜತ್ ಕೆಲ ಸಂದರ್ಭಗಳಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಕೆಣಕಿ ಜಗಳವಾಡುತ್ತಿರುವಂತೆ ಕಾಣಿಸುತ್ತಿದೆ.
ಕಳೆದ ದಿನ ಸಂಚಿಕೆಯಲ್ಲಿ ಗೌತಮಿ ಸೋಫಾ ಮೇಲೆ ಎಸೆದ ದಿಂಬು ತಮ್ಮ ಕೈಗೆ ಬಿತ್ತು ಅನ್ನೋ ಕಾರಣಕ್ಕೆ ಗೌತಮಿ ಜೊತೆಗೆ ರಜತ್ ಜಗಳ ಮಾಡಿದರು. ಇಂತಹ ಸಣ್ಣಪುಟ್ಟ ವಿಚಾರಗಳಲ್ಲಿ ರಜತ್ ಕೋಪ ತೋರಿಸುತ್ತಿರುವುದು, ಕೆಣಕಿ ಜಗಳವಾಡುತ್ತಿರುವುದು ಬಿಗ್‌ಬಾಸ್ ವೀಕ್ಷಕರಿಗೆ ಬೇಸರ ತಂದಿದೆ. ಹೀಗೇ ಮುಂದುವರೆದರೆ ಚೈತ್ರಾ ಹಾಗೂ ರಜತ್ ಟಾಪ್ 5 ರೇಸ್‌ನಲ್ಲಿ ಇರುವುದು ತುಂಬಾ ಕಷ್ಟ. ಆದರೆ ಬದಲಾದರೆ ವಿನ್ನರ್ ರೇಸ್‌ನಲ್ಲಿ ಇವರಿಬ್ಬರೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications