Bhavya Gowda: ಅತ್ತ ತ್ರಿವಿಕ್ರಮ್ ಹೊರಕ್ಕೆ: ಇತ್ತ ಐಶ್ವರ್ಯ ಮುಖಕ್ಕೆ ಕಾಫಿ ಎರಚಿದ ಭವ್ಯ ಗೌಡ
ಬಿಗ್ ಬಾಸ್ ಕನ್ನಡ ಸೀಜನ್ 11 ರೋಚಕ ಹಂತಕ್ಕೆ ತಲುಪುತ್ತಿದ್ದು, ಸ್ಪರ್ಧಿಗಳ ನಡುವಿನ ಜಟಾಪಟಿ ಜೋರಾಗಿದೆ. ಆಶ್ಚರ್ಯ ಎನ್ನುವಂತೆ ಈ ಸೀಜನ್‌ನ ವಿನ್ನರ್ ಆಗಬಹುದು ಎಂದು ಹಲವರು ಊಹಿಸಿದ್ದ ನಟ ತ್ರಿವಿಕ್ರಮ್ ಎಲಿಮಿನೇಟ್ ಆಗಿದ್ದಾರೆ ಎಂದು ನಿನ್ನೆಯ ಸಂಚಿಕೆಯಲ್ಲಿ ತೋರಿಸಲಾಗಿದೆ. ಆದರೆ ತ್ರಿವಿಕ್ರಮ್ ಈವರೆಗೂ ಯಾರ ಸಂಪರ್ಕಕ್ಕೂ ಸಿಗದ ಕಾರಣ ಬಹುಶಃ ಅವರನ್ನು ಸಿಕ್ರೇಟ್ ರೂಮ್‌ನಲ್ಲಿ ಇರಿಸಿರಬಹುದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
ತ್ರಿವಿಕ್ರಮ್ ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಹೋಗುತ್ತಿದ್ದಂತೆ ಮನೆಯ ಕಾವು ಹೆಚ್ಚಿದ್ದು, ಸ್ಪರ್ಧಿಗಳು ಪರಸ್ಪರ ಮುಖಕ್ಕೆ ಕಾಫಿ ಎರಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂದಿನ ಸಂಚಿಕೆಯ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಯಾರೂ ಇನ್ನೂ ಎಚ್ಚೆತ್ತುಕೊಂಡಿಲ್ಲ ಅವರ ಮುಖಕ್ಕೆ ಕಾಫಿ ಎರಚಿದ್ದಾರೆ.

ಯಾರು ಈ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕು ಅವರ ಮುಖಕ್ಕೆ ಕಾಫಿ ಎರಚಿ ಎಂದಿರುವ ಬಿಗ್ ಬಾಸ್ ಆದೇಶಕ್ಕೆ ಮನೆ ಮಂದಿ ತಮಗೆ ಇನ್ನೂ ಯಾರು ಎಚ್ಚೆತ್ತುಕೊಂಡು ಆಟ ಆರಂಭಿಸಿಲ್ಲ ಅವರ ಮುಖಕ್ಕೆ ಕಾಫಿ ಎರಚಿದ್ದಾರೆ. ಈ ಸಂಚಿಕೆಯ ವಿಶೇಷ ಎಂದರೆ ಆತ್ಮ ಸ್ನೇಹಿತರು, ಜೀವದ ಗೆಳೆಯರಾಗಿದ್ದ ಗೌತಮಿ ಹಾಗೂ ಉಗ್ರಂ ಮಂಜು ನಡುವೆ ಈಗ ಶೀತಲ ಸಮರ ಆರಂಭವಾಗಿದ್ದು, ಗೌತಮಿ ಎಚ್ಚೆತ್ತುಕೊಳ್ಳಿ ಎಂದು ಮಂಜು ಮುಖಕ್ಕೆ ಕಾಫಿ ಎರಚಿದ್ದಾರೆ.
ವೀಕೆಂಡ್ ಸಂಚಿಕೆಯಲ್ಲಿ ಎಷ್ಟು ಹೇಳಿದರೂ ಗೌತಮಿ ಜೊತೆಗೆ ಇದ್ದು ತಮ್ಮ ಆಟ ಮರೆತಿರುವ ಮಂಜುಗೆ ಮುಖಕ್ಕೆ ಕಾಫಿ ಎರಚುವ ಮೂಲಕ ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಗೌತಮಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಭವ್ಯ ಗೌಡ ಮೊದಲಿನಿಂದಲೂ ಟಾರ್ಗೆಟ್ ಮಾಡುತ್ತಿರುವ ಐಶ್ವರ್ಯ ಮುಖಕ್ಕೆ ಕಾಫಿ ಎರೆಚಿದರೆ, ಐಶ್ವರ್ಯ, ಚೈತ್ರಾ ಕುಂದಾಪುರ ಮುಖಕ್ಕೆ ಕಾಫಿ ಎರಚಿದ್ದಾರೆ. ಈ ವೇಳೆ ಚೈತ್ರಾ ಹಾಗೂ ಐಶ್ವರ್ಯಾ ನಡುವೆ ಜಗಳ ನಡೆದಿದ್ದು, ಇಬ್ಬರ ಜಗಳ ಬಿಡಿಸಲು ಮಧ್ಯೆ ಹೋಗ ಕ್ಯಾಪ್ಟನ್ ಭವ್ಯಾ ಸುಸ್ತಾಗಿ ಹೋಗಿದ್ದಾರೆ.

ಇತ್ತೀಚಿಗೆ ಆತ್ಮೀಯರಾಗಿದ್ದ ಚೈತ್ರಾ ಹಾಗೂ ಐಶ್ವರ್ಯಾ ನಡುವೆ ಈಗ ಮನಸ್ತಾಪದ ಕಾರ್ಮೋಡ ಕವಿದಿದೆ. ವೀಕೆಂಡ್ ಸಂಚಿಕೆಯಲ್ಲೂ ಇವರಿಬ್ಬರ ಮಧ್ಯೆ ವಾಗ್ದಾದ ನಡೆದಿದ್ದು, ಇದೇ ಕೋಪ ತಾಪಗಳು ಮುಂದಿನ ಸಂಚಿಕೆಯಲ್ಲೂ ಮುಂದುವರಿದಿದೆ. ಈ ವಾರ ನಿಮ್ಮ ಆಟಗಳಿಗೆ ನಾನು ಬಲಿಪಶು ಆದೆ ಎಂದು ಕೋಪಗೊಂಡಿರು ಐಶ್ವರ್ಯಾ, ಹೇಯ್ ಸುಳ್ಳು ಹೇಳುತ್ತಾ ಇದ್ದೀರಾ ಎಂದು ಚೈತ್ರಾ ಮೇಲೆ ಕೂಗಾಡಿದ್ದಾರೆ. ಇದರಿಂದ ಚೈತ್ರಾ ಕುಂದಾಪುರ ಕೂಡ ರೊಚ್ಚಿಗೆದ್ದಿದ್ದು, ಇಬ್ಬರು ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.












Click it and Unblock the Notifications