Darshan Thoogudeepa: "ಗನ್ ಮ್ಯಾಟರ್" ದರ್ಶನ್ ಮನೆಗೆ ಬಂದ ಪೊಲೀಸರು!
ನಟ ದರ್ಶನ್ ಅವರ ಬೇಡಿಕೆಯನ್ನು ಬೆಂಗಳೂರು ಪೊಲೀಸರು ಒಪ್ಪಿಕೊಂಡಿಲ್ಲ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರಿಗೆ ಜಾಮೀನು ಮಂಜೂರಾಗಿದ್ದು. ದರ್ಶನ್ ಅವರು ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಇದೀಗ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿದ್ದು. ಅವರಿಗೆ ಬೆನ್ನು ಶಸ್ತ್ರಚಿಕಿತ್ಸೆ ನಡೆಯುವ ಬಗ್ಗೆಯೂ ಚರ್ಚೆ ನಡೆದಿದೆ. ಇನ್ನು ದರ್ಶನ್ ಅವರ ಗನ್ ಮ್ಯಾಟರ್‌ಗೆ ಸಂಬಂಧಿಸಿದಂತೆ ಮಂಗಳವಾರ ಮಹತ್ವದ ಬೆಳವಣಿಗೆ ನಡೆದಿದೆ. ಈ ವಿಷಯದಲ್ಲಿ ದರ್ಶನ್ ಅವರು ಮಾಡಿದ್ದ ಮನವಿಯನ್ನು ಪೊಲೀಸರು ಒಪ್ಪಿಕೊಂಡಿಲ್ಲ. ಗನ್ ನನ್ನ ಬಳಿಯೇ ಇರಲಿ ಅಂತ ದರ್ಶನ್ ಅವರು ಮನವಿ ಮಾಡಿದ್ದರು.
ದರ್ಶನ್ ತೂಗುದೀಪ್ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಸೆಲೆಬ್ರಿಟಿ ಹಿನ್ನೆಲೆಯಲ್ಲಿ ಅವರು ಲೈಸೆನ್ಸ್ ಹೊಂದಿರುವ ಗನ್ ಪಡೆದಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ಹಾಗೂ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಅವರು ಹೊರ ಬಂದ ಮೇಲೆ ಇದನ್ನು ಹಿಂಪಡೆಯುವುದಕ್ಕೆ ಬೆಂಗಳೂರು ಪೊಲೀಸರು ನೋಟಿಸ್ ಕೊಟ್ಟಿದ್ದರು. ನಿಮ್ಮ ಬಳಿ ಇರುವ ಗನ್ ಅನ್ನು ಯಾಕೆ ಹಿಂಪಡೆಯಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.

ಮಂಗಳವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಗೆ ಭೇಟಿ ನೀಡಿ ಗನ್ ಅನ್ನು ಜಪ್ತಿ ಮಾಡಿದ್ದಾರೆ. ನಟ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡುತ್ತಿರುವ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಮಂಗಳವಾರ ಮಾಹಿತಿ ನೀಡಿದ್ದರು. ದರ್ಶನ್ ಅವರ ಗನ್ ಲೈಸೆನ್ಸ್ ಅನ್ನು ಬೆಂಗಳೂರು ಪೊಲೀಸರು ತಾತ್ಕಾಲಿಕವಾಗಿ ಕ್ಯಾನ್ಸಲ್ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ / ತೀರ್ಪು ಹೊರಬೀಳುವ ವರೆಗೆ ದರ್ಶನ್‌ಗೆ ಗನ್ ಸಿಗಲ್ಲ ಅಂತ ಹೇಳಲಾಗಿದೆ. ದರ್ಶನ್ ಮನವಿಗೆ ಒಪ್ಪಿಕೊಳ್ಳದ ಪೊಲೀಸ್
ಇನ್ನು ನಟ ದರ್ಶನ್ ಅವರು ಕೊಲೆ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಗೆ ಬಂದ ಮೇಲೆ ಪೊಲೀಸರು ಗನ್ ವಿಚಾರವಾಗಿ ನೋಟಿಸ್ ಜಾರಿ ಮಾಡಿದ್ದರು. ಗನ್ ವಾಪಸ್ ಪಡೆಯಬಾರದೇಕೆ ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.
ಈ ನೋಟಿಸ್‌ಗೆ ಉತ್ತರ ಕೊಟ್ಟಿದ್ದ ದರ್ಶನ್ ಅವರು ಸೆಲೆಬ್ರಿಟಿ ಆಗಿರುವುದರಿಂದ ಗನ್ ಬೇಕಾಗುತ್ತದೆ ಎಂದಿದ್ದರು. ಆದರೆ ಪೊಲೀಸರು ನಿಯಮಾನುಸಾರ ಕ್ರಮ ತೆಗೆದುಕೊಂಡಿದ್ದು. ದರ್ಶನ್ ಅವರ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ರದ್ದಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೂರ್ಣ ಪ್ರಮಾಣದ ತೀರ್ಪು ಪ್ರಕಟವಾದ ನಂತರವಷ್ಟೇ ದರ್ಶನ್‌ಗೆ ಗನ್ ಸಿಗಲಿದೆ.
ದರ್ಶನ್ ಗನ್ ಲೈಸೆನ್ಸ್ ಕ್ಯಾನ್ಸಲ್‌ಗೆ ಕಾರಣವೇನು: ನಟ ದರ್ಶನ್ ಅವರ ಗನ್ ಲೈಸೆನ್ಸ್ ಕ್ಯಾನ್ಸಲ್ ಆಗಿರುವುದಕ್ಕೆ ಕಾರಣ ಏನು ಅಂತ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಅವರು ವಿವರಣೆ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಕಾನೂನಿನಲ್ಲಿ 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಬಹುದಾದ ಪ್ರಕರಣದಲ್ಲಿ ಆರೋಪಿಯಾಗಿರುವವರಿಂದ ಲೈಸೆನ್ಸ್ ಹೊಂದಿರುವ ಗನ್ ಇದ್ದರೆ. ಅದನ್ನು ಅವರಿಂದ ಹಿಂದಕ್ಕೆ ಪಡೆದುಕೊಳ್ಳಲಾಗುತ್ತದೆ. ಅಲ್ಲದೆ ಅವರ ಲೈಸೆನ್ಸ್ ಅನ್ನು ಸಹ ಕ್ಯಾನ್ಸಲ್ ಮಾಡಿಸಲಾಗುತ್ತದೆ. ಇದೇ ಕಾನೂನನ್ನು ಈ ಪ್ರಕರಣದಲ್ಲಿ ಫಾಲೋ ಮಾಡಲಾಗಿದೆ.
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ದರ್ಶನ್ ಅವರ ಗನ್ ಲೈಸೆನ್ಸ್ ಇದೀಗ ತಾತ್ಕಾಲಿಕ ರದ್ದು ಮಾಡಲಾಗಿದೆ ಎಂದು ವಿವರಿಸಿದ್ದಾರೆ.












Click it and Unblock the Notifications