Neethu Vanajakshi: ಮಕ್ಕಳ ಕಳ್ಳಿ ಮೋಕ್ಷಿತಾ ಪೈ ಎನ್ನುವ ಆರೋಪದ ಬಗ್ಗೆ ನೀತು ವನಜಾಕ್ಷಿ ಹೇಳಿದ್ದೇನು?

ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಸ್ಪರ್ಧಿ ಟ್ರ್ಯಾನ್ಸ್‌ಜೆಂಡರ್ ನೀತು ವನಜಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಮೋಕ್ಷಿತಾ ಪೈ ಬಗ್ಗೆ ಹರಿದಾಡುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ವಾಹನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ನೀತು ಅವರು ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ ಮೋಕ್ಷಿತಾ ಮೇಲಿರುವ ಆರೋಪಗಳ ಬಗ್ಗೆ ಮಾತನಾಡಿದ್ದಾರೆ.

ಸೀರಿಯಲ್ ನಟಿ ಮೋಕ್ಷಿತಾ ಒಬ್ಬ 'ಮಕ್ಕಳ ಕಳ್ಳಿ' ಎನ್ನುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಈ ಬಗ್ಗೆ ಬಿಗ್‌ಬಾಸ್ ಹಳೆಯ ಸ್ಪರ್ಧಿ ನೀತು ಪ್ರತಿಕ್ರಿಯೆ ನೀಡಿದ್ದಾರೆ. ಮೋಕ್ಷಿತಾ ಬಗ್ಗೆ ಮಾತನಾಡಿದ ನೀತು, 'ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾರೆ ಅಂದರೆ ಅವರ ಕಾಲು ಎಳೆಯೋರು ತುಂಬಾ ಜನ ಇರ್ತಾರೆ. ಕೇವಲ ಒಬ್ಬರಿಂದ ಸ್ಟೋರಿ ಕೇಳಿ ಯಾವತ್ತೂ ಕೂಡ ಯಾರನ್ನೂ ಜಡ್ಜ್ ಮಾಡಬಾರದು. ಎರಡು ಕಡೆಯಿಂದ ವಿಚಾರ ತಿಳಿದುಕೊಳ್ಳಬೇಕು. ಆಗ ಆ ವ್ಯಕ್ತಿ ಏನು ಅನ್ನೋದು ನಮಗೆ ಗೊತ್ತಾಗುತ್ತದೆ' ಎಂದು ಹೇಳಿದರು.

bbk 10 neethu vanajakshi react about bbk 11 mokshitha pai

ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲಸ ಆಗಬಾರದು- ನೀತು

'ಒಂದು ವಿಚಾರದಲ್ಲಿ ದೂರು ದಾಖಲಿಸಿದಾಗ ಅವರನ್ನು ಅರೆಸ್ಟ್ ಮಾಡುತ್ತಾರೆ. ಇಲ್ಲಿ ಅಪರಾಧಿ ನಿರಪರಾಧಿ ಅಂತ ಪೊಲೀಸರು ನೋಡುವುದಿಲ್ಲ. ಹೀಗಾದಾಗ ಜನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅಂದರೆ ಅವರು ಕಳ್ಳಿ ಇರಬೇಕು ಅಂದುಕೊಂಡು ಬಿಡ್ತಾರೆ. ಇದು ತಪ್ಪು. ಕೂಲಂಕುಷವಾಗಿ ತನಿಖೆ ಆದ ಬಳಿಕ ಏನು ಅನ್ನೋ ಸ್ಪಷ್ಟನೆ ಸಿಗುತ್ತದೆ. ಅದನ್ನು ಮಾತ್ರ ಜನ ನಂಬಬೇಕು' ಎಂದು ನೀತು ಹೇಳಿದರು.

'ಮೋಕ್ಷಿತಾ ಅವರ ಪ್ರಕರಣ ಆಗಿ ಎಷ್ಟೋ ವರ್ಷ ಆಗಿದೆ. ಅದು ಏನಾಗಿದೆ ಎನ್ನುವುದನ್ನು ಮೋಕ್ಷಿತಾ ಅವರೇ ವಿವರಿಸಬೇಕು. ಹೀಗಾಗಿ ಯಾವುದೇ ವಿಚಾರ ಗೊತ್ತಿಲ್ಲದೆ ಒಬ್ಬರನ್ನು ತಪ್ಪುಗಾರರನ್ನಾಗಿ ಮಾಡೋದು ತಪ್ಪು. ಅವರ ಜೀವನದಲ್ಲಿ ಪರಿಶ್ರಮ ಇರುತ್ತದೆ. ಅವರದ್ದೂ ಒಂದು ಜೀವನ ಇರುತ್ತದೆ. ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ. ಅದನ್ನೆಲ್ಲಾ ನಾವು ಹಾಳು ಮಾಡಬಾರದು' ಎಂದು ನೀತು ಸಲಹೆ ಕೊಟ್ಟಿದ್ದಾರೆ.

ಇಷ್ಟು ದಿನ ಇಲ್ದೇ ಪ್ರಕರಣ ವಿಚಾರ ಈಗ ಯಾಕೆ? ನೀತು ಪ್ರಶ್ನೆ

'ಇಷ್ಟು ದಿನ ಇಲ್ದೇ ಇರೋ ಪ್ರಕರಣ ಈಗ ಯಾಕೆ ಹೊರಬಂದಿದೆ?. ಮೋಕ್ಷಿತಾ ಅವರು ಬಿಗ್‌ಬಾಸ್‌ ಮನೆಗೆ ಹೋಗಿ ಇಷ್ಟು ದಿನ ಆದ ಮೇಲೆ ಈ ಪ್ರಕರಣ ಹೊರಬಂದಿದೆ. ಇದು ಮೊದಲೇ ಹೊರಬರಬಹುದಾಗಿತ್ತು. ಅವರು ಸೀರಿಯಲ್ ಮಾಡುತ್ತಿರುವಾಗಲೂ ಈ ವಿಚಾರ ಬೆಳಕಿಗೆ ಬಂದಿಲ್ಲ. ಆದರೆ ಈಗ ಯಾಕೆ ಈ ವಿಚಾರ ಬಂದಿದೆ? ಈಗ ಅವರ ಹಳೆ ಪ್ರಕರಣ ಬೆಳಕಿಗೆ ಬಂದಿದೆ ಅಂದರೆ ಅವರ ಹೆಸರು ಹಾಳು ಮಾಡಲು ಕೂಡ ಆಗಿರಬಹುದು ಎಂದು ನೀತು ಅನುಮಾನ ವ್ಯಕ್ತಪಡಿಸಿದರು.

'ಹೀಗಾಗಿ ಒಂದು ವಿಚಾರದ ಬಗ್ಗೆ ಎರಡೂ ಕಡೆಯಿಂದ ವಿಚಾರಗಳನ್ನು ತಿಳಿದುಕೊಳ್ಳಬೇಕು. ಮೋಕ್ಷಿತಾ ಅವರ ಬಳಿ ಕೇಳಿದಾಗ ಇದಕ್ಕೆಲ್ಲ ಉತ್ತರ ಸಿಗುತ್ತದೆ. ಆದರೆ ಅದರ ಬಗ್ಗೆ ನಾವು ಈಗ ಜಡ್ಜ್ ಮಾಡೋದು ತಪ್ಪು. ಒಬ್ಬ ಹೆಸರನ್ನು ಹಾಳು ಮಾಡುವುದು ತಪ್ಪು. ಅದನ್ನು ಯಾರೂ ಕೂಡ ಮಾಡಬಾರದು' ಎಂದರು.

ನೆಗೆಟಿವ್ ಪಾಸಿಟಿವ್ ಸ್ಟೋರಿ ಪಬ್ಲಿಶ್ ಡೀಲ್

ಕೆಲ ಸ್ಪರ್ಧಿಗಳು ಈ ಹಿಂದೆ ಬಿಗ್‌ಬಾಸ್‌ ಮನೆಗೆ ಹೋಗುವ ಮುನ್ನ ತಮ್ಮ ಬಗ್ಗೆ ಇಷ್ಟು ದಿನ ನೆಗೆಟಿವ್ ಸುದ್ದಿ ಮಾಡಿ, ಒಂದಷ್ಟು ದಿನ ಪಾಸಿಟಿವ್ ಸುದ್ದಿ ಮಾಡಿ ಎಂದು ಹಣ ಕೊಟ್ಟು ಡೀಲ್ ಮಾಡಿಕೊಂಡಿದ್ದರು ಎನ್ನುವ ಸುದ್ದಿಗಳು ಹರಿದಾಡಿದ್ದವು. ಈ ರೀತಿಯಾಗಿ ಬಿಗ್‌ಬಾಸ್‌ ಸ್ಪರ್ಧಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳು ಕೇಳಿ ಬರುತ್ತಿದಿಯಾ ಎನ್ನುವ ಪ್ರಶ್ನೆ ನೀತು ಅವರು ವಿವರಣೆ ನೀಡಿದರು.

'ಬಿಗ್‌ಬಾಸ್‌ ಅನ್ನೋದು ದೊಡ್ಡ ವೇದಿಕೆ. ಇಲ್ಲಿ ಆಡಲು ಬರುವ ಸ್ಪರ್ಧಿಗಳನ್ನು ಜನ ಒಂದಿಲ್ಲಾ ಒಂದು ಕಾರಣಕ್ಕೆ ಇಷ್ಟಪಡುತ್ತಾರೆ. ತುಂಬಾ ದಿನ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಂಡರೆ ಅವರದ್ದೇ ಆದ ಅಭಿಮಾನಿಗಳ ಗುಂಪು ಕ್ರಿಯೇಟ್ ಆಗುತ್ತದೆ. ಜನ ತಮ್ಮ ನೆಚ್ಚಿನ ಸ್ಪರ್ಧಿಗಳ ಫೋಟೋಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಇದನ್ನು ಇಷ್ಟಪಡದ ಜನರೂ ಕೂಡ ಹೊರಗಡೆ ಇರುತ್ತಾರೆ. ಅವರು ಕೆಟ್ಟದಾಗಿ ಆ ಫೋಟೋಕ್ಕೆ ಕಾಮೆಂಟ್ ಮಾಡಬಹುದು. ಇದೆಲ್ಲವೂ ಹೊರಗಡೆ ನಡೆಯುತ್ತಲೇ ಇರುತ್ತದೆ' ಎಂದರು.

'ಮೋಕ್ಷಿತಾ ಪೈ ಅವರನ್ನು ಇಷ್ಟಪಡದ ಜನ ಅವರ ಪ್ರಕರಣವನ್ನು ಬೇಗ ಒಪ್ಪಿಕೊಳ್ಳುತ್ತಾರೆ. ಅವರನ್ನು ಇಷ್ಟಪಡುವ ಜನ ಅವರ ಪ್ರಕರಣವನ್ನು ಒಪ್ಪಿಕೊಳ್ಳುವುದಿಲ್ಲ. ಇದು ನಡೆಯುತ್ತಲೇ ಇರುತ್ತದೆ. ಇದನ್ನು ನಾವು ನೋಡಿಕೊಂಡು ಒಬ್ಬ ವ್ಯಕ್ತಿಯನ್ನು ಜಡ್ಜ್ ಮಾಡಬಾರದು. ಅವರ ಹೆಸರಿಗೆ ಕಳಂಕ ತರುವ ಕೆಲಸವನ್ನಂತೂ ಮಾಡಲೇ ಬಾರದು' ಎಂದು ನೀತು ಕಿವಿ ಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+