ರೀಲ್‌ ಅಲ್ಲ ರಿಯಲ್‌: ದ್ವಿತೀಯ ಪಿಯುಸಿಯಲ್ಲಿ ಭಾಗ್ಯ ಮಗಳಿಗೆ ಭರ್ಜರಿ ಅಂಕ

ನಿನ್ನೆ (ಏಪ್ರಿಲ್‌ 08) ಮಂಗಳವಾರ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಭಾಗ್ಯಲಕ್ಷ್ಮಿ ಧಾರಾವಾಹಿ ತಂಡದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಕ್ಕೂ, ಭಾಗ್ಯಲಕ್ಷ್ಮಿ ಧಾರಾವಾಹಿ ತಂಡಕ್ಕೂ ಏನೂ ಸಂಬಂಧ ಅಂತೀರಾ? ಹಾಗಿದ್ರೆ ಈ ಸುದ್ದಿಯನ್ನು ಮಿಸ್ ಮಾಡದೇ ಸಂಪೂರ್ಣವಾಗಿ ಓದಿ.

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ಪುತ್ರಿ ತನ್ವಿ ಪಾತ್ರ ನಿರ್ವಹಿಸುತ್ತಿರುವ ನಟಿ ಅಮೃತಾ ಗೌಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದ ನಟಿ ಅಮೃತಾ ಗೌಡ ಬಳಿಕ ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದರು. ತಮ್ಮ ವಿದ್ಯಾಭ್ಯಾಸದ ಜೊತೆಗೆ ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದ ಅಮೃತಾ ಗೌಡ ಎರಡೂ ಕ್ಷೇತ್ರವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎನ್ನುವುದಕ್ಕೆ ಅವರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸಾಕ್ಷಿಯಾಗಿದೆ.

Bagyalakshmi Actress Amrutha Gowda Achieved Distinction in Second PUC

ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ನಟಿ ಅಮೃತಾ ಗೌಡ 600 ಅಂಕಗಳಲ್ಲಿ 543 ಅಂಕ ಗಳಿಸಿ ಶೇಕಡಾ 91ರಷ್ಟು ಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಅಮೃತಾ ಗೌಡ ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿದ್ದು, ಇಂಗ್ಲಿಷ್‌ನಲ್ಲಿ 81, ಅಕೌಂಟೆನ್ಸಿಯಲ್ಲಿ 94, ಸ್ಟಾಟಿಸ್ಟಿಕ್ಸ್‌ನಲ್ಲಿ 95, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 83 ಹಾಗೂ ಎಕನಾಮಿಕ್ಸ್‌ನಲ್ಲಿ 93 ಅಂಕಗಳನ್ನು ಗಳಿಸಿದ್ದಾರೆ.

Take a Poll

ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಮೃತಾ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಂಕಪಟ್ಟಿಯನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದು, ಭಾಗ್ಯಲಕ್ಷ್ಮಿ ಧಾರಾವಾಹಿ ತಂಡದ ನಟ, ನಟಿಯರು ಹಾಗೂ ಪ್ರೇಕ್ಷಕರು ಅಮೃತಾ ಗೌಡ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ನಟನೆಯನ್ನು ಬ್ಯಾಲನ್ಸ್‌ ಮಾಡುವುದು ಎಷ್ಟು ಕಷ್ಟ, ಅದರಲ್ಲೂ ನೀವು ಇಷ್ಟು ಅಂಕ ಗಳಿಸಿರುವುದು ತುಂಬಾ ಹೆಮ್ಮೆ ಇದೆ. ಹೀಗೆ ಯಶಸ್ಸು ನಿಮ್ಮ ಜೊತೆಗಿರಲಿ ಎಂದು ಹಾರೈಸಿದ್ದಾರೆ.

Bagyalakshmi Actress Amrutha Gowda Achieved Distinction in Second PUC

ದಾರಿ ತಪ್ಪುತ್ತಿರುವ ತನ್ವಿಗೆ ಭಾಗ್ಯ ಕಡಿವಾಣ

ಇನ್ನು ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಅಮೃತಾ ಗೌಡ, ಕಥಾ ನಾಯಕಿ ಭಾಗ್ಯಾಳ ಮಗಳು ತನ್ವಿ ಪಾತ್ರ ನಿರ್ವಹಿಸುತ್ತಿದ್ದಾರೆ. ಯಾವಾಗಲೂ ತಾಯಿಗೆ ವಿರುದ್ಧವಾಗಿ ನಡೆದುಕೊಳ್ಳುವ ತನ್ವಿ ಈಗ ಪಿಯುಸಿ ಓದುತ್ತಿದ್ದಾಳೆ. ಕಾಲೇಜಿನಲ್ಲಿ ಗೆಳೆಯರ ಜೊತೆ ಸೇರಿ ಮೋಜು ಮಸ್ತಿ ಮಾಡಬೇಕು ಎನ್ನುವ ತನ್ವಿಯ ಆಸೆಗೆ ಭಾಗ್ಯ ಅಡ್ಡಿಯಾಗಿದ್ದು, ಮಗಳು ಹಾದಿ ತಪ್ಪದಂತೆ ರಕ್ಷಿಸುತ್ತಿದ್ದಾಳೆ. ಆದರೆ ತನ್ವಿ ತಂದೆ ತಾಂಡವ್‌ ಹಾಗೂ ಆತನ ಎರಡನೇ ಪತ್ನಿ ಶ್ರೇಷ್ಠಳ ಸಹಾಯ ಪಡೆದು ತನ್ನಿಷ್ಟದಂತೆ ಬದುಕಲು ಹೋಗಿ ಕಷ್ಟಕ್ಕೆ ಸಿಲುಕುತ್ತಾಳೆ. ಸದ್ಯ ತಾಯಿಯ ಕಷ್ಟಕಂಡು ಕೊಂಚ ಬದಲಾಗಿರುವ ತನ್ವಿ ಮುಂದಿನ ದಿನಗಳಲ್ಲಿ ಭಾಗ್ಯಾಳ ಕಷ್ಟಕ್ಕೆ ಹೆಗಲು ಕೊಟ್ಟು ಒಳ್ಳೆಯ ಮಗಳಾಗುತ್ತಾಳ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+