B.Saroja Devi: ಸರೋಜಾದೇವಿ ಕರ್ನಾಟಕದ ಮಾಜಿ ಸಿ.ಎಂ ಜೊತೆ ವಿವಾಹವಾಗಬೇಕಿತ್ತು, ಮುರಿದು ಬಿದ್ದದ್ದು ಯಾಕೆ ?
B.Saroja Devi: ನಟಿ ಸರೋಜಾದೇವಿ ಅವರು ಇಂದು ನಿಧನರಾಗಿದ್ದಾರೆ. ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ನಟಿಸಿದ್ದ ಅವರು ಸರೋಜಾ ಅಮ್ಮ ಅಂತಲೇ ಖ್ಯಾತಿಗಳಿಸಿರುವುದು ಇದೆ. ನಟಿಯಾಗಿ ಮಾತ್ರವಲ್ಲ ಪೋಷಕ ನಟಿಯಾಗಿಯೂ ಅವರು ಮಿಂಚಿರುವುದು ಇದೆ. ಎಲ್ಲವೂ ಅಂದು ಕೊಂಡಂತೆಯೇ ಆಗಿದ್ದರೆ. ಬಿ ಸರೋಜಾದೇವಿ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರೊಂದಿಗೆ ವಿವಾಹವಾಗಬೇಕಿತ್ತು. ಸರೋಜಾದೇವಿ ಅವರು ಯೌವನದ ಸಮಯದಲ್ಲಿ ರಾಜಕೀಯ ವ್ಯಕ್ತಿಯೊಬ್ಬರನ್ನು ಪ್ರೀತಿಸಿದ್ದರು. ಆದರೆ ಅವರು ನಟಿ ಎನ್ನುವ ಕಾರಣಕ್ಕೆ ಪ್ರಸಿದ್ಧ ರಾಜಕಾರಣಿ ಅವರ ಕುಟುಂಬದಲ್ಲಿ ವಿವಾಹಕ್ಕೆ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ವಿವಾಹ ಮುರಿದು ಬಿದ್ದಿತ್ತು ಎನ್ನಲಾಗಿದೆ. ಈ ಪ್ರೇಮ ಪ್ರಸಂಗದ ಬಗ್ಗೆ ಎಂಎಲ್‌ಸಿ ವಿಶ್ವನಾಥ್ ಅವರು ಅವರ ಪುಸ್ತಕದಲ್ಲಿ ಬರೆದುಕೊಂಡಿದ್ದರು. ಇದು ಭಾರೀ ಚರ್ಚೆಗೂ ಕಾರಣವಾಗಿತ್ತು.
ರಾಜಕಾರಣಿ ಹಾಗೂ ಬರಹಗಾರ ಎಚ್.ವಿಶ್ವನಾಥ್ ಅವರು, ಅವರ ಆತ್ಮಕಥನ "ಹಳ್ಳಿ ಹಕ್ಕಿಯ ಹಾಡು" ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಎಸ್.ಎಂ ಕೃಷ್ಣ ಹಾಗೂ ಬಿ. ಸರೋಜಾ ದೇವಿ ಅವರ ಪ್ರೇಮ ಪ್ರಸಂಗದ ಬಗ್ಗೆ ವಿಶ್ವನಾಥ್ ಅವರು ಉಲ್ಲೇಖಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸರೋಜಾ ದೇವಿ ಅವರು ಈ ವಿಷಯವನ್ನು ಪ್ರಸ್ತಾಪಿಸದ್ದಕ್ಕೆ ತುಸು ಗರಂ ಆಗಿದ್ದರು. ಆದರೆ ಎಸ್.ಎಂ ಕೃಷ್ಣ ಅವರು ಇರಲಿ ಬಿಡಿ ಎಂದಿದ್ದರು. ಎಸ್.ಕೃಷ್ಣ ಅವರು ಈ ಪ್ರಣಯ ಪ್ರಸಂಗದ ಉಲ್ಲೇಖವನ್ನು ಲೈಟ್ ಆಗಿಯೇ ತೆಗೆದುಕೊಂಡಿದ್ದರು ಎಂದು ವಿಶ್ವನಾಥ್ ಅವರು ಮಾಧ್ಯಮಗಳಿಗೆ ಮಾತನಾಡುವಾಗ ಹೇಳಿರುವುದು ಇದೆ.

55 ವರ್ಷಗಳ ಹಿಂದೆ ಕರ್ನಾಟಕದ ಪ್ರಸಿದ್ಧ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿ.ಎಸ್‌ಎಂ ಕೃಷ್ಣ ಅವರು ಹಾಗೂ ಬಿ.ಸರೋಜಾ ದೇವಿ ಅವರ ನಡುವೆ ಮದುವೆ ಪ್ರಸ್ತಾಪವಿತ್ತು. ಈ ವಿಚಾರವನ್ನು ಇವರಿಬ್ಬರೂ ಖಚಿತಪಡಿಸಿದ್ದರು. ಸ್ವತಃ ಸರೋಜಾ ದೇವಿ ಅವರು ಸಹ ಈ ಅಫೇರ್ ವಿಷಯವನ್ನು ನಿರಾಕರಿಸಿರಲಿಲ್ಲ ಎನ್ನಲಾಗಿದೆ. ಈ ವಿಚಾರವು ಎಸ್.ಎಂ ಕೃಷ್ಣ ಅವರು ನಿಧನರಾದಾಗಲೂ ಭಾರೀ ಚರ್ಚೆಯಾಗಿತ್ತು. ಇಬ್ಬರೂ ಈ ಹಿಂದೆ ಈ ವಿಚಾರವಾಗಿ ನೇರವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಪರೋಕ್ಷವಾಗಿ ಈ ವಿಚಾರವನ್ನು ಒಪ್ಪಿಕೊಂಡಿದ್ದರು. ಮನೆಯವರ ತೀರ್ಮಾನವನ್ನು ಗೌರವಿಸಿ. ಅವರದ್ದೇ ಆದ ಹೊಸ ಬದುಕು ಕಟ್ಟಿಕೊಂಡಿದ್ದರು.
ಈ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ ಎಸ್.ಎಂ ಕೃಷ್ಣ ಅವರು ಮಹಾರಾಷ್ಟ್ರದಲ್ಲಿ ರಾಜ್ಯಪಾಲಾಗಿದ್ದರು. ಆ ಸಂದರ್ಭದಲ್ಲಿ ಅಲ್ಲೋಲ ಕಲ್ಲೋಲವೇ ಆಗಿತ್ತು. ನಾನು ಅವರಿಗೆ ಕರೆ ಮಾಡಿದ್ದೆ ಎಂದು ವಿಶ್ವನಾಥ್ ಅವರು ಈ ಹಿಂದೆ ಹೇಳಿದ್ದರು. ಮನಸ್ಸಿಗೆ ನೋವಾಗಿದೆಯೇ ಎಂದು ಕೇಳಿದ್ದೆ. ಅದಕ್ಕೆ ಎಸ್.ಎಂ ಕೃಷ್ಣ ಅವರು ವಸ್ತುಸ್ಥಿತಿಯನ್ನು ಬರೆದಿದ್ದೀರಿ ಎಂದು ಎಸ್.ಎಸ್. ಕೃಷ್ಣ ಅವರು ಹೇಳಿದ್ದರು ಎಂದು ವಿಶ್ವನಾಥ್ ಅವರು ಸ್ಮರಿಸಿದ್ದರು.












Click it and Unblock the Notifications