ಕನ್ನಡ ಬಾರದ ಹುಡುಗನನ್ನು ಆಯ್ಕೆ ಮಾಡಿಕೊಂಡ ವೈಷ್ಣವಿ ಗೌಡ: ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ
ಕನ್ನಡದ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗ ಯಾರು ಎನ್ನುವ ಕುತೂಹಲ ಮೂಡಿದೆ. ವೈಷ್ಣವಿ ಅವರೇ ಈ ಬಗ್ಗೆ ಕೆಲವೊಂದಿಷ್ಟು ಸುಳಿವು ಕೊಟ್ಟರೂ ಕೂಡ ಈ ನಿರ್ಧಾರ ಯಾಕೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಹೌದು ವೈಷ್ಣವಿ ಗೌಡ ಮೂಲತ: ಕರ್ನಾಟಕದವರು. ಬೆಂಗಳೂರಿನಲ್ಲಿ ಇದ್ದವರು. ಅಲ್ಲದೆ ಅವರ ತಂದೆ ತಾಯಿ ಎಲ್ಲರೂ ಕೂಡ ಕನ್ನಡಿಗರು. ಸಂಪ್ರದಾಯಸ್ಥ ಮನೆತನದವರು. ಹೀಗಿದ್ದರೂ ಕೂಡ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದು ಉತ್ತರ ಭಾರತದ ಹುಡುಗನನ್ನು. ಕನ್ನಡ ಬಾರದ, ಇಲ್ಲಿನ ಸಂಪ್ರದಾಯದ ಬಗ್ಗೆ ಮಾಹಿತಿ ಇಲ್ಲದ, ಕರ್ನಾಟಕದ ಬಗ್ಗೆ ಗೊತ್ತಿಲ್ಲದ ಹುಡುಗನೊಂದಿಗೆ ವೈಷ್ಣವಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೈಷ್ಣವಿ ಈ ಹುಡುಗನನ್ನೇ ಯಾಕೆ ತುಂಬಾ ಇಷ್ಟ ಪಟ್ಟು ಮದುವೆ ಆಗುತ್ತಿದ್ದಾರೆ. ಅನೇಕರಿಗೆ ಈಗ ಈ ಪ್ರಶ್ನೆ ಹುಟ್ಟಿಕೊಂಡಿದೆ.

ವೈಷ್ಣವಿ ತುಂಬಾ ಸಿಂಪಲ್ ಹುಡುಗಿ. ತುಂಬಾ ಸಂಪ್ರದಾಯಬದ್ಧ ಹುಡುಗಿ ಕೂಡ ಹೌದು. ಚಿಕ್ಕ ವಯಸ್ಸಿನಿಂದಲೂ ತನ್ನದೇ ಆದ ಪುಟ್ಟ ಜಗತ್ತನ್ನು ಕಟ್ಟಿಕೊಂಡವರು. ತಮ್ಮ ಮದುವೆಯ ಬಗ್ಗೆ ತುಂಬಾ ಕನಸುಗಳನ್ನು ಕಟ್ಟಿಕೊಂಡವರು. ವೈಷ್ಣವಿಯದ್ದು ಮತ್ತೊಂದು ಎಲ್ಲರಿಗೂ ಇಷ್ಟವಾಗುವ ಸ್ವಭಾವ ಅಂದರೆ, ಅವರಿಗೆ ತಾವು ಒಬ್ಬರನ್ನೇ ಪ್ರೀತಿ ಮಾಡಬೇಕು, ಅವರೇ ಜೀವನ ಸಂಗಾತಿ ಆಗಬೇಕು, ಅವರಿಗೂ ತಾವೊಬ್ಬರೇ ಹುಡುಗಿ ಆಗಿರಬೇಕು ಅನ್ನೋ ಕನಸುಗಳು ಇದ್ದವು. ಈ ರೀತಿ ತಮ್ಮ ಮದುವೆಯ ಬಗ್ಗೆ ನಾನಾ ಕನಸುಗಳನ್ನು ಕಂಡಿದ್ದ ವೈಷ್ಣವಿಗೆ ಒಬ್ಬ ಹುಡುಗನಿಂದ ಮೋಸವಾಗಿತ್ತು.
ಹಿಂದೊಮ್ಮೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಷ್ಣವಿ ಹುಡುಗ ಸರಿಯಾಗಿರಲಿಲ್ಲ. ಹೀಗಾಗಿ ಆಕೆಗೆ ಬೇಸರವಾಗಿತ್ತು. ವೈಷ್ಣವಿಗೆ ನೀನೇ ಪ್ರಪಂಚ ನೀನೇ ಎಲ್ಲ ಎಂದು ಹೇಳಿ ಆ ವ್ಯಕ್ತಿ ಯಾಮಾರಿಸಿದ್ದನು. ವೈಷ್ಣವಿಯೊಂದಿಗೆ ಮದುವೆಯಾಗುವ ಮುನ್ನ ಬೇರೆ ಬೇರೆ ಹುಡುಗಿಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಈ ಹುಡುಗನ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು.

ಮೊದಲು ನಿಶ್ಚಿತಾರ್ಥ ಮಾಡಿಕೊಂಡ ಹುಡುಗನ ಬಗ್ಗೆ ಈ ರೀತಿ ಕೇಳಿಬಂದಾಗ ವೈಷ್ಣವಿ ನಿಜವಾಗಲೂ ಶಾಕ್‌ಗೆ ಒಳಗಾಗಿದ್ದರು. ಯಾಕೆಂದರೆ ಮನಸ್ಸಿನಲ್ಲಿ ನೂರೆಂಟು ಆಸೆ ಇಟ್ಟುಕೊಂಡು ಆಯ್ಕೆ ಮಾಡಿಕೊಂಡ ಹುಡುಗನ ಬಗ್ಗೆ ಇಂತಹ ಮಾತುಗಳು ಕೇಳಿ ಬಂದಾಗ ವೈಷ್ಣವಿಗೆ ತಡೆದುಕೊಳ್ಳಲು ಸಾಧ್ಯವೇ ಆಗಿರಲಿಲ್ಲ.
ತಾನು ಒಬ್ಬನ್ನನ್ನೇ ಪ್ರೀತಿ ಮಾಡಬೇಕು, ಒಬ್ಬನ್ನನ್ನೇ ಮದುವೆ ಆಗಬೇಕು. ಕೊನೆಯವರೆಗೂ ಅವನ ಜೊತೆಗೆ ಇರಬೇಕು ಅಂದುಕೊಂಡಿದ್ದ ವೈಷ್ಣವಿಗೆ ತಾನು ಮದುವೆ ಆಗಲು ನಿರ್ಧರಿಸಿದ ಹುಡುಗ ಸರಿಯಾಗಿಲ್ಲ, ಬೇರೆ ಬೇರೆ ಹುಡುಗಿಯರಿಗೆ ಮೋಸ ಮಾಡಿದ್ದಾನೆ ಅನ್ನೋ ಸುದ್ದಿ ಕೇಳಿ ಆಕೆಯ ಹೃದಯ ಒಡೆದು ಹೋಗಿತ್ತು.
ಇದಾದ ಮೇಲೆ ವೈಷ್ಣವಿ ತುಂಬಾನೇ ಸೈಲೆಂಟ್ ಆದರು. ಆದರೆ ಮನಸ್ಸಿನಲ್ಲಿ ಮಾತ್ರ ಈ ವಿಚಾರ ಕೊರೆಯುತ್ತಲೇ ಇತ್ತು. ಈ ಘಟನೆ ಬಳಿಕ ಅವರು ಎಲ್ಲರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ವೈಷ್ಣವಿ ಒಂದು ಗಟ್ಟಿ ನಿರ್ಧಾರಕ್ಕೆ ಬರುತ್ತಾರೆ. ಕಷ್ಟನೋ ಸುಖನೋ ನಾನು ಬಯಸಿದಂತೇ ಮದುವೆ ಆಗಬೇಕು. ನನ್ನ ಇಷ್ಟಕಷ್ಟಗಳಿಗೆ ಸರಿ ಹೋಗುವ ಹುಡುಗನನ್ನೇ ಮದುವೆ ಆಗಬೇಕು ಅನ್ನೋ ನಿರ್ಧಾರಕ್ಕೆ ಬರುತ್ತಾರೆ.
ಈ ಸಂದರ್ಭದಲ್ಲಿ ನೊಂದ ಜೀವಕ್ಕೆ ಕಾಣಿಸಿಕೊಂಡಿದ್ದೇ ಅಕಾಯ್. ಅಕಾಯ್ ಹಾಗೂ ವೈಷ್ಣವಿ ಮಾತನಾಡಲು ಶುರು ಮಾಡಿದ ಮೇಲೆ ಅಕಾಯ್ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಕಾಯ್ ತುಂಬಾ ಒಳ್ಳೆಯ ಹುಡುಗ ಅನ್ನೋದು ವೈಷ್ಣವಿಗೆ ಗೊತ್ತಾಗುತ್ತದೆ. ಅಲ್ಲದೇ ವೈಷ್ಣವಿ ಹಾಗೂ ಅಕಾಯ್ ಫ್ಯಾಮಿಲಿ ಕೂಡ ಒಟ್ಟಿಗೆ ಹೊಂದಿಕೊಂಡಿರುವುದು ಒಟ್ಟಿಗೆ ನೃತ್ಯ ಮಾಡಿರುವುದು ನೋಡೀದರೆ ವೈಷ್ಣವಿಗೆ ಎರಡು ಕುಟುಂಬ ಒಂದೇ ರೀತಿ ಅನಿಸಿದೆ ಅನಿಸುತ್ತದೆ.
ಪ್ರೀತಿಗೆ ಯಾವುದೇ ಜಾತಿ, ದೇಶ, ಭಾಷೆ ಯಾವುದೂ ಕೂಡ ಅಡ್ಡಿಬರುವುದಿಲ್ಲ. ಪ್ರೀತಿ ಯಾವಾಗ ಯಾರಿಗೆ, ಯಾರ ಮೇಲಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಪ್ರೀತಿ ಹುಟ್ಟುವುದೇ ಹಾಗೆ. ತಮ್ಮ ಮನಸ್ಸಿಗೆ ಇಷ್ಟ ಆಗುವವರು ಹತ್ತಿರ ಆಗುವವರ ಮೇಲೆ ಪ್ರೀತಿ ಹುಟ್ಟುತ್ತೆ. ವೈಷ್ಣವಿಗೂ ಆಗಿದ್ದು ಅದೇ. ಅದರಲ್ಲಿ ಅನುಮಾನವೇ ಇಲ್ಲ.
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈಷ್ಣವಿಗೆ ಕನ್ನಡದವರು ಯಾರೂ ಸಿಗಲಿಲ್ಲವಾ? ಕನ್ನಡ ಬಾರದವರನ್ನು ಯಾಕೆ ಆಯ್ಕೆ ಮಾಡಿಕೊಂಡ್ರಿ? ನೀವು ಕನ್ನಡಕ್ಕೆ ಅವಮಾನ ಮಾಡಿದ್ದೀರಿ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದು ಅವರ ವೈಯಕ್ತಿಕ ಜೀವನ. ನಾಳೆಯೊಂದು ದಿನ ಕಷ್ಟವಾದರೆ ಆಕೆಯ ಬೆನ್ನಿಗೆ ನಿಂತುಕೊಳ್ಳೋದು ಆಕೆ ಕುಟುಂಬ ಆಕೆ ಗಂಡ. ಹೀಗಿರಬೇಕಾದರೆ ಆಕೆಯ ಜೀವನ ಆಕೆಯ ಆಯ್ಕೆ ಆಕೆಯದ್ದೇ ಆಗಿರಬೇಕು. ಇದನ್ನು ಪ್ರಶ್ನೆ ಮಾಡುವ ಹಕ್ಕು ಆಕೆಯ ಕುಟುಂಬಕ್ಕೆ ಆಕೆಯ ಆಪ್ತರಿಗೆ ಬಿಟ್ಟರೆ ಬೇರೆ ಯಾರಿಗೂ ಕೂಡ ಇಲ್ಲ.
ಅದೇನೇ ಇರಲಿ ಒಟ್ಟಿನಲ್ಲಿ ವೈಷ್ಣವಿ ನಿಶ್ಚಿತಾರ್ಥವನ್ನು ಖುಷಿಯಾಗಿ ಮಾಡಿಕೊಂಡಿದ್ದು ಮದುವೆ ಡೇಟ್ ಇನ್ನೂ ಕೂಡ ರಿವೀಲ್ ಮಾಡಿಲ್ಲ. ಬಲ್ಲ ಮೂಲಗಳ ಪ್ರಕಾರ ವೈಷ್ಣವಿ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications