ಅಹಂಕಾರ ಬಿಡಿ, ಜೀವನ ತುಂಬಾ ಚಿಕ್ಕದು: ನಟಿ ರಕ್ಷಿತಾ ಪ್ರೇಮ್ ಹೇಳಿದ್ದು ಯಾರಿಗೆ?
ನಟಿ ರಕ್ಷಿತಾ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಖಿನ್ನತೆ ಎನ್ನುವುದು ನಿಜ. ಇದಕ್ಕೆ ಸಹಾಯ ಪಡೆಯಿರಿ, ಚಿಕಿತ್ಸೆ ಪಡೆಯಿರಿ. ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ ಮತ್ತು ದಯವಿಟ್ಟು ಒಂಟಿಯಾಗಿರಬೇಡಿ ಎಂದು ರಕ್ಷಿತಾ ಪ್ರೇಮ್ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ರಕ್ಷಿತಾ ಪ್ರಾಣ ಸ್ನೇಹಿತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನೋವಿನ ವಿಚಾರವನ್ನ ರಕ್ಷಿತಾ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.
ರಕ್ಷಿತಾ ಅವರ ಸ್ನೇಹಿತೆ ವಸುಧಾ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದು, ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. 'ನೀವು ಪ್ರೀತಿಸುವವರೊಂದಿಗೆ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವ ಜನರೊಂದಿಗೆ ಹೆಚ್ಚು ಸಮಯ ಕಳೆಯಿರಿ, ನಿಮ್ಮ ಅಹಂಕಾರವನ್ನು ತ್ಯಜಿಸಿ ಮತ್ತು ನೀವು ಜಗಳವಾಡುವವರೊಂದಿಗೆ ಅಪ್ಪಿಕೊಳ್ಳಿ, ಕ್ಷಮೆಯಾಚಿಸಿ' ಎಂದು ಬದುಕಿಗೆ ಕಿವಿಮಾತು ಹೇಳಿದ್ದಾರೆ ರಕ್ಷಿತಾ.

'ಅವಳೊಂದಿಗೆ ಇರಬೇಕಿತ್ತು'
'ಹೆಚ್ಚು ನಗು ಮತ್ತು ನೀವು ಬಯಸುವವರೊಂದಿಗೆ ನಗುತ್ತಾ ಇರಿ. ಏಕೆಂದರೆ ಜೀವನವು ತುಂಬಾ ಅನಿರೀಕ್ಷಿತ ಮತ್ತು ತುಂಬಾ ಚಿಕ್ಕದಾಗಿದೆ. ನಾನು ವಸು ಜೊತೆ 5 ವರ್ಷಗಳಿಗಿಂತ ಹೆಚ್ಚು ಕಾಲ ಸಂಪರ್ಕದಲ್ಲಿ ಇರಲಿಲ್ಲ. ಆದರೆ ನಾನು ಸಂಪರ್ಕವನ್ನು ಕಳೆದುಕೊಳ್ಳಬಾರದಿತ್ತು ಎಂದು ನಾನು ಬಯಸುತ್ತೇನೆ. ಅವಳಿಗೆ ಮಾತನಾಡಲು ಯಾರಾದರೂ ಬೇಕಾದ ಸಮಯದಲ್ಲಿ ನಾನು ಅವಳೊಂದಿಗೆ ಇರಬೇಕಿತ್ತು ಎಂದು ನಾನು ಬಯಸುತ್ತೇನೆ' ಎಂಬ ಭಾವುಕರಾಗಿದ್ದಾರೆ.
'ನನ್ನ ಸ್ನೇಹಿತೆ ವಸು ಆಗಸ್ಟ್ 27ರಂದು ಕೊಲ್ಲೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಅವಳು ಹೋಗಿದ್ದಾಳೆ, ಬಹುಶಃ ಅವಳು ಈಗ ಸ್ವಲ್ಪ ಶಾಂತಿಯನ್ನು ಕಂಡುಕೊಳ್ಳಬಹುದು. ಆದರೆ ನೀವು ಪ್ರೀತಿಸುವ ಯಾರಿಗೂ ಈ ರೀತಿ ಆಗಲು ಬಿಡಬೇಡಿ. ಏನೇ ಆದರೂ ಕ್ಷಮಿಸಿ ಮರೆತುಬಿಡಿ, ಅಲ್ಲಿಯೇ ಇರಿ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ವಾಸು' ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.
'ಎರಡು ಮೂರು ಪೋಸ್ಟ್ ಹಂಚಿಕೊಂಡಿರುವ ರಕ್ಷಿತಾ, ನನ್ನ ಪ್ರೀತಿಯ ಗೆಳತಿ ವಸುಧಾ, ಈಗ ನಿನಗೆ ಶಾಂತಿ ಸಿಗಲಿ. ನೀನು ಇನ್ನಷ್ಟು ಸಂತೋಷದ ಸ್ಥಳದಲ್ಲಿರಲಿ ಎಂದು ನಾನು ನಿಜವಾಗಿಯೂ ಬಯಸುತ್ತೇನೆ ವಸು ಎಂದು ಗೆಳತಿಯನ್ನು ನೆನೆದು ಸಂಕಟ ಹೊರಹಾಕಿದ್ದಾರೆ. ಖಿನ್ನತೆ ಎಂಬುದು ನಿಜ. ಇದಕ್ಕೆ ಸಹಾಯ ಪಡೆಯಿರಿ, ಚಿಕಿತ್ಸೆ ಪಡೆಯಿರಿ. ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ, ದಯವಿಟ್ಟು ಒಂಟಿಯಾಗಿರಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಅವರ ಆತ್ಮೀಯ ಗೆಳತಿ ವಸುಧಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಈ ಘಟನೆಯಿಂದ ದುಃಖಕ್ಕೊಳಗಾದ ರಕ್ಷಿತಾ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡು ಖಿನ್ನತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಡಿಪ್ರೆಷನ್ ಎಂಬುದು ಒಂದು ಗಂಭೀರ ಸಮಸ್ಯೆ. ಇದನ್ನು ಹಾಗೆಯೇ ಇರಲು ಬಿಡಬೇಡಿ, ಚಿಕಿತ್ಸೆ ಪಡೆದುಕೊಳ್ಳಿ, ಒಂಟಿಯಾಗಿರಬೇಡಿ. ನಿಮ್ಮ ಆತ್ಮೀಯರೊಂದಿಗೆ ಖುಷಿಯಾಗಿರಿ ಎಂದಿದ್ದಾರೆ.












Click it and Unblock the Notifications