Actress Prema:'ಉಪೇಂದ್ರ ಅವ್ರೇ ಕರಿಮಣಿ ಮಾಲೀಕ': ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟ ನಟಿ ಪ್ರೇಮಾ
90ರ ದಶಕದ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ಪ್ರೇಮಾ..ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಬಳಿಕ ತಮ್ಮ ವೈಯಕ್ತಿಕ ಜೀವನದ ಕಾರಣ ಸಿನಿರಂಗದಿಂದ ದೂರ ಉಳಿದಿದ್ದರು. ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿರುವ ನಟಿ ಪ್ರೇಮ ಕೆಲವೊಂದಿಷ್ಟು ವರ್ಷಗಳಿಂದ ಸಾರ್ವಜನಿಕ ಜೀವನದಿಂದ ದೂರವಿದ್ದರು. ಇದೀಗ ಮತ್ತೆ ಮಹಾನಟಿ ರಿಯಾಲಿಟಿ ಶೋ ತೀರ್ಪುಗಾರ್ತಿ ಆಗಿ ತೆರೆ ಮುಂದೆ ಬಂದಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಇತ್ತೀಚಿಗೆ ಕಿರುತೆರೆ ಕಾರ್ಯಕ್ರಮಗಳು, ಸಿನಿಮಾ ಇವೆಂಟ್‌ಗಳಲ್ಲಿ ಭಾಗಿಯಾಗುತ್ತಿರುವ ನಟಿ ಪ್ರೇಮ ಸಂದರ್ಶನಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ಅದೇ ರೀತಿ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಪ್ರೇಮಾ ತಮ್ಮ ಜೀವನದಲ್ಲಾದ ಏರಿಳಿತಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಆದರೆ ಈ ಸಂದರ್ಶವೊಂದರಲ್ಲಿ ಇಂಟ್ರಸ್ಟಿಂಗ್ ವಿಚಾರದ ಬಗ್ಗೆ ಮಾತುಕತೆ ನಡೆದಿದ್ದು. ಈ ಬಗ್ಗೆ ವಿವರ ಇಲ್ಲಿದೆ. ಮೊದಲಿಗೆ ಈ ಕರಿಮಣಿ ಮಾಲೀಕ ಯಾರು? ಎನ್ನುವ ಪ್ರಶ್ನೆಯನ್ನು ರಾಜೇಶ್ ನಟಿ ಪ್ರೇಮಾ ಅವರ ಮುಂದೆ ಇಟ್ಟಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದ ಪ್ರೇಮಾ, 'ಆ ಸಿನಿಮಾ ಮಾಡಿದ ಉಪೇಂದ್ರ ಅವರೇ ಕರಿಮಣಿ ಮಾಲೀಕ. ಆ ಸಿನಿಮಾ ಬಂದಾಗ ಹಾಡು ಬಂದಾಗ ಅದು ಸ್ಲೋ ಆಗಿ ಇತ್ತು. ಈಗ ಅದನ್ನು ರೀಮಿಕ್ಸ್ ಮಾಡಿ ಬೇರೆ ತರ ಚೇಂಜ್ ಮಾಡಿದ್ದಾರೆ' ಎಂದರು.

ಇನ್ನು ಆ ಸಮಯದಲ್ಲಿ ಉಪೇಂದ್ರ ಹಾಗೂ ಪ್ರೇಮಾ ಲವ್ ಇತ್ತು. ಅದಕ್ಕಾಗಿ ಯೇ ಹಾಡು ಬರೆಯಲಾಗಿತ್ತು ಎನ್ನುವ ಮಾತಿಗೆ ಉತ್ತರಿಸಿದ ನಟಿ ಪ್ರೇಮಾ, 'ನನಗೆ ಗೊತ್ತಿಲ್ಲ.. ಉಪೇಂದ್ರ ಅವರ ತಲೆಯಲ್ಲಿ ಏನಿತ್ತು ಅಂತ ನನಗೆ ಗೊತ್ತಿಲ್ಲ. ಆ ಹಾಡು ಚೆನ್ನಾಗಿ ಬಂತು. ಆ ಪದಗಳಿಗೂ ಚಿತ್ರಕ್ಕೂ ಹೊಂದಿಕೆ ಆಯ್ತು' ಎಂದು ಹೇಳಿದ್ದಾರೆ.
'ನೋಡಿ ನಾವಿಬ್ಬರು ವಿರೋಧಿಗಳಲ್ಲ. ನಾನಾಗಲಿ ಉಪೇಂದ್ರ ಆಗಲಿ ಹಾಗೇ ಇರಲಿಲ್ಲ ನಾವು. ನಮಗೆ ಬರೀ ಕೆಲಸ ಮಾಡುವ ಹಸಿವು ಇತ್ತು. ಲವ್ ಮಾಡುವ ಬಗ್ಗೆ ತಲೆಯಲ್ಲೇ ಇರುತ್ತಿರಲಿಲ್ಲ. ನನಗೆ ಅವರ ಹಾರ್ಡ್‌ವರ್ಕ್ ಇಷ್ಟ ಆಗುತ್ತಿತ್ತು.
ಉಪೇಂದ್ರ ತುಂಬಾ ಹಾರ್ಡ್‌ವರ್ಕ್ ಮಾಡುತ್ತಿದ್ದರು. ನಮ್ಮಿಬ್ಬರ ನಡುವೆ ಯಾವುದೇ ಪ್ರೀತಿ ಇರಲಿಲ್ಲ. ಜೊತೆಯಲ್ಲಿ ಎರಡು ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದೆವು. ಆದರೆ ನಮ್ಮ ನಡುವೆ ಅಂತಹದು ಏನು ಇರಲಿಲ್ಲ' ಎಂದು ನಟಿ ಪ್ರೇಮ ಸ್ಪಷ್ಟವಾಗಿ ಹೇಳಿದ್ದಾರೆ.
ಮಾತು ಮುಂದುವರಿಸಿದ ನಟಿ ಪ್ರೇಮಾ, 'ಗುರುಕಿರಣ್ ಆಗಲಿ, ಉಪೇಂದ್ರ ಆಗಲಿ ಆಗ ಏನು ಯೋಚಿಸಿದರು, ಎನ್ನುವುದು ನನಗೆ ಗೊತ್ತಿಲ್ಲ. ನನ್ನ ತಲೆಯಲ್ಲಿ ಯಾವುದೇ ಪ್ರೀತಿ ಗೀತಿ ಇರಲಿಲ್ಲ. ನನಗೆ ದೇವರು ಒಂದು ಅವಕಾಶ ಕೊಟ್ಟಿದ್ದಾನೆ ಎಂದು ನಟಿಸಿದೆ. ನನಗೆ ಒಂದು ಸಿನಿಮಾ ಹಿಟ್ ಆಯಿತು. ಮುಂದೇನು? ಎನ್ನುವ ಯೋಚನೆ ಇರುತ್ತಿತ್ತು. ಬೇರೆ ಏನು ಇರಲಿಲ್ಲ' ಎಂದಿದ್ದಾರೆ.
-
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications