Anu Prabhakar: ನಟಿ ಅನು ಪ್ರಭಾಕರ್ ದಂಪತಿ ಡಾನ್ಸ್ ವಿಡಿಯೋ ವೈರಲ್

ಬೆಂಗಳೂರು, ಆಗಸ್ಟ್ 16: ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಂದಲೂ ವಿವಿಧ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ನಟಿ ಅನು ಪ್ರಭಾಕರ್ ಅವರು ಇತ್ತೀಚೆಗೆ ತಾಯ್ತತನದ ಕುರಿತು ಮಾತನಾಡಿ ಸುದ್ದಿಯಾಗಿದ್ದರು. ಇದೀಗ ಅವರು ಮೊದಲ ಬಾರಿಗೆ ಪತಿ ರಘು ಮುಖರ್ಜಿ ಅವರೊಂದಿಗೆ ವೇದಿಕೆ ಮೇಲೆ ಚೆಂಚದ ಡಾನ್ಸ್‌ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಏಕೆಂದರೆ ಈ ದಂಪತಿಯ ಡಾನ್ಸ್ ವಿಡಿಯೋ ವೈರಲ್ ಆಗುತ್ತಿದೆ.

ಕನ್ನಡದ ಎವರ್‌ಗ್ರೀನ್ ನಟಿಯರಲ್ಲಿ ಅನು ಪ್ರಭಾಕರ್ ಅವರು ಕೂಡ ಒಬ್ಬರು. ಇವರು ನಟ ರಘು ಮುಖರ್ಜಿಯವರ ಪತ್ನಿ ಎಂಬುದು ತಿಳಿದಿರುವ ವಿಷಯ. ಈ ತಾರಾ ಜೋಡಿ ಒಂದೇ ವೇದಿಕೆಯಲ್ಲಿ ಕಾಣಿಸುವುದು ಅಪರೂಪ. ಇಬ್ಬರು ತಮ್ಮದೇ ಆದ ಕೆಲಸಗಳಲ್ಲಿ ಬ್ಯೂಸಿ ಇದ್ದಾರೆ. 'ಸ್ನೇಹಲೋಕ, ಹೃದಯ ಹೃದಯ' ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ನಟಿ ಅನು ಪ್ರಭಾಕರ್ ಅವರು ಸದ್ಯ ಕನ್ನಡದ ರಿಯಾಲಿಟಿ ಶೋನಲ್ಲಿ ಬ್ಯೂಸಿಯಾದ್ದಾರೆ.

Actress Anu Prabhakar and Her Husband Raghu Mukherjee Dance Video Goes Viral

ಎವರ್‌ಗ್ರೀನ್ ಸಾಂಗಿಗೆ ದಂಪತಿ ಹೆಜ್ಜೆ, ವಿಡಿಯೋ

ಈ ದಂಪತಿ ಕಳೆದ ತಿಂಗಳು ಬಹುಭಾಷಾ ನಟ ಕನ್ನಡ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅವರ ವಿವಾಹ ಸಂಭ್ರಮಕ್ಕೆ ತೆರಳಿದ್ದರು. ಈ ವೇಳೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಎವರ್‌ಗ್ರೀನ್ ಹಾಡಿಗೆ ದಂಪತಿ ಇಬ್ಬರು ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಅನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಜೀವನದಲ್ಲಿ ಇದೇ ಮೊದಲ ಭಾರಿಗೆ ಪತಿ ರಘು ಮುಖರ್ಜಿ ಅವರೊಂದಿಗೆ ವೇದಿಕೆ ಮೇಲೆ ಡಾನ್ಸ್ ಮಾಡಿದ್ದೇನೆ. ಇದು ಅಕ್ಕ ನೀತು ಅರ್ಜುನ್ ಹಾಗೂ ಭಾವ ಅರ್ಜುನ್ ಸರ್ಜಾ ಹಾಗೂ ಐಶ್ವರ್ಯ ಅರ್ಜುನ್ ಮತ್ತು ಉಮಾಪತಿ ರಾಮಯ್ಯ ಅವರಿಗೋಸ್ಕರ್ ಎಂದು ನಟಿ ಬರೆದುಕೊಂಡಿದ್ದಾರೆ.

ವಿಶೇಷವೆಂದರೆ ಇಲ್ಲಿ ಎರಡು ಹಾಡುಗಳಿಗೆ ನೃತ್ಯ ಮಾಡಲಾಗಿದೆ. ಒಂದು ರಥ ಸಪ್ತಮಿ ಚಿತ್ರದ್ದು, ಮತ್ತೊಂದು ಪ್ರೇಮ ಬರಹ ಚಿತ್ರದ್ದು. ಇಲ್ಲಿ ಅನುಪ್ರಭಾಕರ್ ಅವರು ಹಸಿರು ಬಣ್ಣದ ಸಲ್ವಾರ್ ಧರಿಸಿದ್ದರೆ, ಪತಿ ರಘು ಮುಖರ್ಜಿ ಅವರು ಸೂಟ್ ಧರಿಸಿದ್ದಾರೆ. ಇಬ್ಬರು ವೇದಿಕೆಗೆ ಏರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ.

ಚೆಂದದ ನೃತ್ಯ ಎಂದೆಲ್ಲ ಕಾಮೆಂಟ್, ಸಾವಿರಾರು ಲೈಕ್ಸ್

ನಟಿ ಹರ್ಷಿಕಾ ಪೂಣಚ್ಚ ಅವರು ಸೇರಿದಂತೆ ಅನೇಕರು ನಟಿ ಅನು ಪ್ರಭಾಕರ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಎಷ್ಟು ಚೆಂದದ ನೃತ್ಯ ಎಂದೆಲ್ಲ ಕಾಮೆಂಟುಗಳು ಬಂದಿವೆ. ಈ ಪೋಸ್ಟ್‌ಗೆ 36,000ಕ್ಕೂ ಸಾವಿರಾರು ಲೈಕ್ಸ್, ಅನೇಕ ಕಾಮೆಂಟ್‌ಗಳು ಬಂದಿವೆ.

ಇತ್ತೀಚೆಗೆ ತಾಯ್ತನ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿದ್ದ ನಟಿ ಅನು ಪ್ರಭಾಕರ್ ಅವರು, ಮದುವೆ ಆಗುತ್ತಿದ್ದಂತೆ ಕೆಲವೇ ತಿಂಗಳ ಬಳಿಕ ಗುಡ್ ನ್ಯೂಸ್ ಯಾವಾಗ? ಎಂದು ಆಪ್ತರು, ಇತರ ಕೇಳುತ್ತಾರೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ನಟಿ ತಾವು ಓದಿದ ಪುಸ್ತಕದಲ್ಲಿನ ತಾಯ್ತನದ ಅಂಶಗಳನ್ನು ವಿವರಿಸಿದ್ದಾರೆ.

ನನ್ನ ಗರ್ಭ, ನನ್ನ ನಿರ್ಧಾರ

ನಾನೊಂದು ಪುಸ್ತಕ ಓದಿದ್ದೆ. ನನ್ನ ಗರ್ಭ, ನನ್ನ ನಿರ್ಧಾರ. ನನ್ನು ಯಾರು ಪ್ರಶ್ನಿಸಬೇಡಿ. ಏಕೆಂದರೆ ಪ್ರಶ್ನಿಸುವವರು ಎಲ್ಲವನ್ನು ಪ್ರಶ್ನಿಸುತ್ತಾರೆ. ಇನ್ನು ದೇಶದಲ್ಲಿ ಎರಡು ಮಕ್ಕಳು ಎಂಬುದೆಲ್ಲ ಇದೆ. ಆದರೆ ಈ ಕೆಲವರು ಏಳೆಂಟು ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ಅದು ಅವರ ನಿರ್ಧಾರ ಎಂದು ಅವರು ತಿಳಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+